More

    ಕಾಂಗ್ರೆಸ್‌ಗೆ ಒಲಿದ ಸಿರಿಗೇರಿ ಗ್ರಾಪಂ ಗದ್ದುಗೆ

    ಸಿರಿಗೇರಿ: ಇಲ್ಲಿನ ಗ್ರಾಪಂ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಚ್.ಲಕ್ಷ್ಮೀ ದ್ಯಾವಣ್ಣ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ರಾಜಮ್ಮ ಎಚ್.ಹುಲುಗಪ್ಪ ಆಯ್ಕೆಯಾಗಿದ್ದಾರೆ.

    ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಬಷೀರಾ ಬೆಗಂ ಖಾದರ್ ಬಾಷಾ ಹಾಗೂ ಕಾಂಗ್ರೆಸ್‌ನ ಎಚ್.ಲಕ್ಷ್ಮೀ ದ್ಯಾವಣ್ಣ ಹಾಗೂ ಎಸ್ಟಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ರಾಜಮ್ಮ ಎಚ್.ಹುಲುಗಪ್ಪ ಹಾಗೂ ಶಾತಮ್ಮ ಫಕ್ಕೀರ ನಾಯ್ಕ ನಾಮಪತ್ರ ಸಲ್ಲಿಸಿದ್ದರು.

    ನಾಲ್ಕನೇ ವಾರ್ಡ್ ಲಕ್ಷ್ಮೀ ದ್ಯಾವಣ ಹಾಗೂ 1ನೇ ವಾರ್ಡ್‌ನ ರಾಜಮ್ಮ ಹುಲುಗಪ್ಪ ತಲಾ 17 ಮತ ಪಡೆಯುವ ಮೂಲಕ ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಕೃಷಿ ಇಲಾಖೆಯ ಸಹಾಯಕ ನಿದೇರ್ಶಕ ಎಸ್.ಬಿ.ಪಾಟೀಲ್ ಘೋಷಿಸಿದರು.

    ಪಂಚಾಯತ್‌ರಾಜ್ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ್ ಪಲ್ಯೇದ್, ಗ್ರಾಪಂ ಕಾರ್ಯದರ್ಶಿ ವೀರೇಶ್, ಪ್ರಮುಖರಾದ ಸಿ.ಎಂ.ನಾಗರಾಜ್ ಸ್ವಾಮಿ, ಬಿ.ಸೋಮಶೇಖರಪ್ಪ, ಬಿ.ನಾಗೇಂದ್ರ, ಬಿ.ರೇಣುಕಪ್ಪ, ಎಸ್.ಎಂ.ನಾಗರಾಜ್ ಸ್ವಾಮಿ, ಎಸ್.ಎನ್.ವಿರೂಪಾಕ್ಷಗೌಡ,ಎಸ್.ಎಂ.ಅಡಿವೆಯ್ಯ ಸ್ವಾಮಿ, ಬಿಚ್ಚುಗತ್ತಿ ಮಲ್ಲಯ್ಯ, ಗರ್ಜಿಲಿಂಗಪ್ಪ, ವಸ್ತ್ರದ್ ಮಂಜುನಾಥ್, ಬಡಾವಲಿ, ಹಳ್ಳಿಮರದ ರುದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts