More

    video/ ಕಾರು ಬಿಟ್ಟು ಸೈಕಲ್​ನಲ್ಲೇ ಬಂದ ಸಿದ್ದರಾಮಯ್ಯ!

    ಬೆಂಗಳೂರು: ಸದಾ ಕಾರಿನಲ್ಲೇ ಓಡಾಡುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ 46 ವರ್ಷದ ಬಳಿಕ ಇಂದು(ಸೋಮವಾರ) ಸೈಕಲ್​ನಲ್ಲಿ ಸಂಚರಿಸಿದ್ದಾರೆ. ಬೆಳಗ್ಗೆ ಮನೆಯಿಂದ ಹೊರಟ ವಿಪಕ್ಷ ನಾಯಕರು ಕಾಂಗ್ರೆಸ್​ ಕಚೇರಿವರೆಗೂ ಸೈಕಲ್​ ತುಳಿದುಕೊಂಡೇ ಹೋದರು.

    ಅರೆ! ಸಿದ್ದರಾಮಯ್ಯಗೆ ಸೈಕಲ್​ನಲ್ಲಿ ಹೋಗುವಂತಹದ್ದು ಏನಾಯ್ತು? ಆರ್ಥಿಕವಾಗಿ ಅನುಕೂಲಸ್ಥರಲ್ಲವೇ? ಎಂಬಿತ್ಯಾದಿ ಪ್ರಶ್ನೆ ನಿಮ್ಮಲ್ಲಿ ಮೂಡದೆ ಇರದು. ಅದಕ್ಕೆಲ್ಲ ಇಲ್ಲಿದೆ ಉತ್ತರ. ಇದನ್ನೂ ಓದಿರಿ ಕರೊನಾ ಹಾಟ್ ಸ್ಪಾಟ್ ಆಯ್ತು ಕೆಪಿಸಿಸಿ, ಅಂತರವಿಲ್ಲದೆ ಇದೆಂಥಾ ಅವಾಂತರ?

    ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿರುವ ಕೇಂದ್ರ ಸರ್ಕಾರದ ನಿಲುವು ವಿರೋಧಿಸಿ ವಿಧಾನಸೌಧ ಮುಂಭಾಗ ಕೆಪಿಸಿಸಿ ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಭಟನೆಯ ಅಂಗವಾಗಿ ಗಾಂಧಿ ಭವನ ಮನೆಯಿಂದ ಸೈಕಲ್​ನಲ್ಲಿ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ, 18 ನಿಮಿಷದಲ್ಲಿ ಕೆಪಿಸಿಸಿ ಕಚೇರಿ ತಲುಪಿದರು. ಇವರಿಗೆ ಜಮೀರ್ ಅಹಮದ್, ಪ್ರಕಾಶ್ ರಾಠೋಡ್ ಸಾಥ್ ನೀಡಿದರು.

    video/ ಕಾರು ಬಿಟ್ಟು ಸೈಕಲ್​ನಲ್ಲೇ ಬಂದ ಸಿದ್ದರಾಮಯ್ಯ!ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, 1974ನೇ ಇಸಿವಿಯಿಂದ ಸೈಕಲ್ ಹೊಡೆದಿರಲಿಲ್ಲ. ಅಷ್ಟು ವರ್ಷಗಳ ನಂತರ ಈಗಲೇ ಸೈಕಲ್ ಹೊಡೆದಿರೋದು ಎಂದು ತಿಳಿಸಿದರು.

    ಕರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸಿದ್ದರಾಮಯ್ಯ, ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯುತ್ತಿದೆ.

    ಇದರ ಅಂಗವಾಗಿ ಸೈಕಲ್ ಜಾಥಾ ನಡೆಸಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹೊಸ ಸೈಕಲ್ ಅನ್ನು ಖರೀದಿಸಿದ್ದರು. ಮುಖಂಡರಿಗೂ ಸೈಕಲ್​ನಲ್ಲೇ ಬರಲು ಸೂಚನೆ ನೀಡಿದ್ದರು. ಈ ಮೂಲಕ ಸರ್ಕಾರಕ್ಕೆ ಕೈ ಪಡೆ ಬಿಸಿ ಮುಟ್ಟಿಸುತ್ತಿದೆ.

    46 ವರ್ಷದ ಬಳಿಕ ಸಿದ್ದು ಸೈಕಲ್​ ಸವಾರಿ!

    46 ವರ್ಷದ ಬಳಿಕ ಸಿದ್ದು ಸೈಕಲ್​ ಸವಾರಿ!ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಸೈಕಲ್​ ಸವಾರಿ ನಡೆಸಿದರು. ಅದೂ 46 ವರ್ಷದ ಬಳಿಕ. ಗಾಂಧಿ ಭವನ ಮನೆಯಿಂದ ಸೈಕಲ್​ನಲ್ಲಿ ಹೊರಟ ಮಾಜಿ ಸಿಎಂ, 18 ನಿಮಿಷದಲ್ಲಿ ಕೆಪಿಸಿಸಿ ಕಚೇರಿ ತಲುಪಿದರು. ಇವರಿಗೆ ಜಮೀರ್ ಅಹಮದ್, ಪ್ರಕಾಶ್ ರಾಠೋಡ್ ಸಾಥ್ ನೀಡಿದರು. ಅಂದಹಾಗೆ ಈ ಸೈಕಲ್​ ಸವಾರಿ ಪೆಟ್ರೋಲ್​, ಡಿಸೇಲ್​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆ ಅಂಗವಾಗಿ. #Congress #Bicycle #Protest #Siddaramaiah

    Posted by Vijayavani on Sunday, June 28, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts