More

    ಮುಂದಿನ 50 ವರ್ಷ ಕಾಲ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲೇ ಮುಂದುವರಿಯಲಿದೆ ಹೀಗಾದ್ರೆ…: ಗುಲಾಂ ನಬಿ ಆಜಾದ್

    ನವದೆಹಲಿ: ಮುಂದಿನ 50 ವರ್ಷ ಕಾಲ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲೇ ಮುಂದುವರಿಯಲಿದೆ ಹೀಗಾದ್ರೆ… ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಪ್ರತಿಕ್ರಿಯಿಸಿದ್ದಾರೆ. ಗ್ರೂಪ್ ಆಫ್​ 23 ಯಲ್ಲಿ ಗುರುತಿಸಿಕೊಂಡ ಗುಲಾಂ ನಬಿ ಆಜಾದ್ ಪಕ್ಷ ಸಂಘಟನೆಯ ವಿಚಾರದ ಬಗ್ಗೆ ಮತ್ತೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕಳೆದ ಕೆಲವು ದಶಕಗಳಿಂದ ಪಕ್ಷದೊಳಗೆ ಆಂತರಿಕ ಚುನಾವಣೆಗಳು ನಡೆದಿಲ್ಲ. ಸಂಘಟನಾತ್ಮಕವಾಗಿ ಪ್ರಮುಖ ಸ್ಥಾನಗಳಿಗೆ ಚುನಾವಣೆ ನಡೆಸದೇ ಇನ್ನೂ 10-15 ವರ್ಷಗಳಿಗೆ ಮುಂದೂಡಿದರೆ, ಖಚಿತವಾಗಿ ಮುಂದಿನ ಐವತ್ತು ವರ್ಷಗಳ ಕಾಲ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿಯೇ ಮುಂದುವರಿಯಬೇಕಾಗುತ್ತದೆ ಎಂಬ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಸಾಯುವುದಕ್ಕೆ ಮುನ್ನ ಸುಶಾಂತ್ ಗೂಗಲ್​ನಲ್ಲಿ ಏನು ಹುಡುಕುತ್ತಿದ್ದರು?

    ವಿಪಕ್ಷ ಸ್ಥಾನದಲ್ಲೇ ಮುಂದುವರಿಯುವ ಉದ್ದೇಶವೇ ಆಗಿದ್ದಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಬದಲಾಯಿಸಬೇಕಾದ ಅವಶ್ಯಕತೆ ಇಲ್ಲ. ಆಂತರಿಕ ಚುನಾವಣೆಯನ್ನೂ ನಡೆಸಬೇಕಾಗಿಲ್ಲ. ಈ ಪತ್ರ ಬರೆದ ವಿಚಾರವಾಗಿ ನಮ್ಮ ಮೇಲೆ ವಾಗ್ದಾಳಿ ನಡೆಸುತ್ತಿರುವ ಜಿಲ್ಲಾ ಮಟ್ಟದ ನಾಯಕರು ಮತ್ತು ಇತರರು ಒಂದೊಮ್ಮೆ ಸಂಘಟನಾತ್ಮಕ ಚುನಾವಣೆ ನಡೆದರೆ ಹೇಳ ಹೆಸರಿಲ್ಲದಂತೆ ನಾಪತ್ತೆಯಾಗಿರುತ್ತಾರೆ ಎಂದು ಆಜಾದ್ ಹೇಳಿದ್ದಾರೆ.

    ಇದನ್ನೂ ಓದಿ: ನೀಟ್, ಜೆಇಇ ನಡೆಸಲು ಬೆಂಬಲ ಸೂಚಿಸಿದ ಉತ್ತರ ಪ್ರದೇಶ

    ನಿಜವಾಗಿಯೂ ಕಾಂಗ್ರೆಸ್ ಪಕ್ಷದ ಹಿತವನ್ನು ಬಯಸುವವರು ಖಚಿತವಾಗಿಯೂ ಆ ಪತ್ರದಲ್ಲಿನ ವಿಷಯವನ್ನು ಸ್ವಾಗತಿಸುತ್ತಾರೆ. ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರನ್ನು ಪಕ್ಷದ ಕಾರ್ಯಕರ್ತರೇ ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಎಂಬುದನ್ನು ಪ್ರತಿಪಾದಿಸುತ್ತ ಬಂದಿದ್ದೇನೆ ಎಂದವರು ಹೇಳಿದರು. (ಏಜೆನ್ಸೀಸ್)

    ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆ, ಒಬ್ಬನ ಶರಣಾಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts