More

    ಬಿಜೆಪಿಗೆ ಸೇರಲು ಮುಂದಾದ ರೌಡಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್; ಇನ್ನು 24 ರೌಡಿಗಳ ಪಟ್ಟಿ ಸದ್ಯದಲ್ಲೇ ರಿಲೀಸ್?

    ಬೆಂಗಳೂರು: ಬಿಜೆಪಿಗೆ ಕೆಲವು ರೌಡಿಶೀಟರ್​ಗಳು ಸೇರಲಿರುವ ಸುದ್ದಿ ಹರಿದಾಡುತ್ತಿರುವ ನಡುವೆಯೇ ಹಾಗೆ ಬಿಜೆಪಿಗೆ ಸೇರಲಿರುವ ಒಂದಷ್ಟು ರೌಡಿಶೀಟರ್​ಗಳ ಪಟ್ಟಿಯನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಇನ್ನೂ 24 ರೌಡಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗುವುದು ಎಂದೂ ಪಕ್ಷ ಹೇಳಿದೆ.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ರೌಡಿಶೀಟರ್​ಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ರೌಡಿ ಶೀಟರ್​​ಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಕಳೆದ ವಾರ ಹೇಳಿದ್ದೆವು. ಅದರಂತೆ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    2018ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿ ಮುಕ್ತಾಯವಾದ ನಂತರ ಪೊಲೀಸ್ ಇಲಾಖೆ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 23 ಸಾವಿರ ರೌಡಿಗಳಿದ್ದರು. 2022ರ ಜೂನ್ ವೇಳೆಗೆ ಹಾಲಿ ರೌಡಿಗಳ ಸಂಖ್ಯೆ 33 ಸಾವಿರ ಆಗಿದೆ. 2018ರಲ್ಲಿ ಬೆಂಗಳೂರಿನಲ್ಲಿ 3 ಸಾವಿರ ರೌಡಿಗಳಿದ್ದರು. ಈಗ ಆ ಸಂಖ್ಯೆ 6620ಕ್ಕೆ ಏರಿದೆ. ಬೆಂಗಳೂರಿನಲ್ಲಿ ಒಟ್ಟು 188 ಠಾಣೆಗಳ 6620 ರೌಡಿಗಳಿದ್ದಾರೆ. ಇನ್ನು ಸಕ್ರಿಯ ರೌಡಿಗಳ ಸಂಖ್ಯೆ ಬೆಂಗಳೂರಿನಲ್ಲಿ 1 ಸಾವಿರ ಇದ್ದರೆ ರಾಜ್ಯದಲ್ಲಿ 8 ಸಾವಿರ ಇದೆ ಎಂದು ಅವರು ತಿಳಿಸಿದರು.

    ಬಿಜೆಪಿ ಈಗ ರೌಡಿ ಮೋರ್ಚಾ ಆರಂಭಿಸಿದ್ದು, ಪ್ರಮುಖ 60 ರೌಡಿಗಳು ಈ ಮೋರ್ಚಾಗೆ ಸೇರಲು ಮುಂದಾಗಿದ್ದಾರೆ. ಅದರ ಮೊದಲ ಹಂತದಲ್ಲಿ ಈಗಾಗಲೇ 36 ರೌಡಿ ಶೀಟರ್​ಗಳು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ, ಇನ್ನೂ 24 ರೌಡಿಗಳ ಸೇರ್ಪಡೆ ಬಾಕಿ ಇದೆ. ರಾಜ್ಯದಲ್ಲಿ ಒಟ್ಟು 150 ರೌಡಿಗಳನ್ನು ಸೇರಿಸಿಕೊಳ್ಳಲು ಬಿಜೆಪಿವರು ಪಟ್ಟಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    36 ರೌಡಿಗಳ ಪೈಕಿ ಸೈಲೆಂಟ್ ಸುನೀಲ್ ಹಾಗೂ ಇತರ 9 ಮಂದಿ, ವಿಲ್ಸನ್ ಗಾರ್ಡನ್ ನಾಗ ಹಾಗೂ ಇತರ 6 ಜನರು, ನಾಗಮಂಗಲದ ಫೈಟರ್ ರವಿ ಹಾಗೂ ಇತರ ಐವರು ಇದ್ದಾರೆ. ಬೆತ್ತನಗೆರೆ ಶಂಕರ ಹಾಗೂ ಇತರ 8 ಮಂದಿ ಕೂಡ ಇದರಲ್ಲಿದ್ದಾರೆ. ಬೆತ್ತನಗೆರೆ ಶಂಕರ ಹೆಸರು ಬದಲಾವಣೆ ಮಾಡಿಕೊಂಡು ನಲ್ಲೂರು ಶಂಕರೇಗೌಡ ಎಂಬ ಹೆಸರಲ್ಲಿ ಪಕ್ಷ ಸೇರ್ಪಡೆ ಆಗಿದ್ದಾನೆ. ಮೈಸೂರು ಬಿಜೆಪಿ ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಸಿದ್ದರಾಜು ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾನೆ. ಒಂಟೆ ರೋಹಿತ್ ಹಾಗೂ ಇತರರು, ಕುಣಿಗಲ್ ಗಿರಿ ಈತ ಜೈಲಿನಲ್ಲಿದ್ದು, ಅಲ್ಲಿಂದಲೇ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಮಂಜುನಾಥ್ ಅಲಿಯಾಸ್ ಉಪ್ಪಿ, ಸೈತಾನ್ ರವಿ (ಸಿ.ಟಿ ರವಿ) ಇವರು ಹಾಲಿ ಶಾಸಕರು. ಇನ್ನು ಪ್ರತಾಪ್ ಸಿಂಹ ಅವರನ್ನು ಸುಮಲತಾ ಅವರು ಪೇಟೆ ರೌಡಿ ಎಂದು ಕರೆದಿದ್ದಾರೆ. ಕೊನೆಯದಾಗಿ ಕಿರಣ್ ಗೌಡ, ಈತ ಯುವ ದಸರಾಗೆ ಅಧ್ಯಕ್ಷರಾಗಿದ್ದು, ಪ್ರತಾಪ್ ಸಿಂಹ ಅವರ ಹಿಂಬಾಲಕ. ಮುಂದಿನ ಹಂತದಲ್ಲಿ ಉಳಿದ 24 ರೌಡಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂಬುದಾಗಿ ಇವರು ಹೇಳಿಕೊಂಡಿದ್ದಾರೆ.

    ಗ್ರಾಮ ಪಂಚಾಯತ್​ನಲ್ಲೂ ರೆಸಾರ್ಟ್ ರಾಜಕೀಯ​; ಬೆಂಗಳೂರಿನ ರೆಸಾರ್ಟ್​ನಲ್ಲಿ 40 ದಿನ ಇದ್ದು ವಿಮಾನದಲ್ಲಿ ಬಂದಿಳಿದ ಸದಸ್ಯರು!

    ದತ್ತಪೀಠದ ದಾರಿಯಲ್ಲಿ ಮೊಳೆಗಳು; ಭಕ್ತರ ವಾಹನಗಳನ್ನು ಪಂಕ್ಚರ್ ಆಗಿಸುವ ಉದ್ದೇಶ?

    ನಾಲ್ಕು ತಿಂಗಳಿನಿಂದ ಸ್ನಾನವನ್ನೇ ಮಾಡದ ಯುವತಿ; ಫ್ಲ್ಯಾಟ್​ನಿಂದಲೇ ಹೊರಹಾಕಿದ ರೂಮ್​ಮೇಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts