More

    ಕಾಂಗ್ರೆಸ್​ನಲ್ಲಿ ಸದ್ಯಕ್ಕಿಲ್ಲ ಎಲೆಕ್ಷನ್​! ಇನ್ನೂ ನಾಲ್ಕು ತಿಂಗಳು ಸೋನಿಯಾ ಗಾಂಧಿಯೇ ಅಧ್ಯಕ್ಷೆ

    ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಸಾಂಸ್ಥಿಕ ಚುನಾವಣೆಯನ್ನು ಸದ್ಯಕ್ಕೆ ನಡೆಸದಿರಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ನಿರ್ಧರಿಸಿದೆ. ಪಂಚ ರಾಜ್ಯಗಳ ಚುನಾವಣೆ ನಂತರ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಲಾಗಿದೆ.

    ಇದನ್ನೂ ಓದಿ: ಮಮತಾ ಸರ್ಕಾರದಿಂದ ಮತ್ತೊಬ್ಬ ಸಚಿವ ಔಟ್​! ದೀದಿಗೆ ಶಾಕ್​ ಮೇಲೆ ಶಾಕ್​

    ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆಯಲ್ಲಿ ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಮುಕುಲ್ ವಾಸ್ನಿಕ್ ಮತ್ತು ಪಿ ಚಿದಂಬರಂ ಅವರು ತಕ್ಷಣವೇ ಸಾಂಸ್ಥಿಕ ಚುನಾವಣೆ ನಡೆಸಲು ಕೇಳಿದ್ದಾರೆ ಎಂದು ವರದಿಯಾಗಿದೆ. ಬಹು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲುಂಡ ನಂತರ ಪಕ್ಷದ ನಾಯಕತ್ವ ಮತ್ತು ನಿರ್ವಹಣೆಯ ಬಗ್ಗೆ ಅಹಿತಕರ ಪ್ರಶ್ನೆಗಳನ್ನು ಎತ್ತಿದ ಕಾಂಗ್ರೆಸ್ ನಾಯಕರಲ್ಲಿ ಅವರು ಸೇರಿದ್ದಾರೆ.

    ಅಶೋಕ್ ಗೆಹ್ಲೋಟ್, ಅಮರಿಂದರ್ ಸಿಂಗ್, ಎಕೆ ಆಂಟನಿ, ತಾರಿಕ್ ಅನ್ವರ್ ಮತ್ತು ಉಮ್ಮನ್ ಚಾಂಡಿ ಅವರು ತಕ್ಷಣವೇ ಚುನಾವಣೆ ನಡೆಸದಿರುವಂತೆ ಕೇಳಿದ್ದಾರೆ. ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆಯ ನಂತರ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಸಬೇಕು ಎಂದು ಅವರು ಹೇಳಿದ್ದಾರೆ. “ನಮ್ಮ ಮೊದಲ ಆದ್ಯತೆ ರಾಜ್ಯ ಚುನಾವಣೆಗಳ ಆಗಿರಬೇಕು ನಂತರ ಸಾಂಸ್ಥಿಕ ಚುನಾವಣೆಯತ್ತ ಗಮನ ಹರಿಸಬೇಕು.” ಎಂದು ನಾಯಕತು ಹೇಳಿರುವುದಾಗಿ ವರದಿಯಾಗಿದೆ.

    ಇದನ್ನೂ ಓದಿ: ಈ ವರ್ಷ ಶೇ. 25 ಮಾರ್ಕ್ಸ್​ ಪಡೆದರೂ ಪಾಸ್​? ಇಲ್ಲಿದೆ ನೋಡಿ ಪ್ರಕಟಣೆಯ ಅಸಲಿಯತ್ತು

    2019ರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ನಂತರ ಆಗಿನ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಲ್ಲಿದ್ದ ರಾಹುಲ್​ ಗಾಂಧಿ ರಾಜೀನಾಮೆ ಸಲ್ಲಿಸಿದರು. 2020ರ ಆಗಸ್ಟ್​ನಲ್ಲಿ ಆರು ತಿಂಗಳ ಮಟ್ಟಿಗೆ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಲಾಯಿತು. ಫೆಬ್ರವರಿಯಲ್ಲಿ ಆಂತರಿಕೆ ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿತ್ತು. ಆದರೆ ಇದೀಗ ಚುನಾವಣೆಯನ್ನು ಮುಂದೂಡಲಾಗಿದೆ. ಜೂನ್​ ವೇಳೆಗೆ ಹೊಸ ಅಧ್ಯಕ್ಷರು ಪಕ್ಷಕ್ಕಿರಲಿದ್ದಾರೆ ಎಂದು ಸಿಡಬ್ಲ್ಯೂಸಿ ತಿಳಿಸಿದೆ. (ಏಜೆನ್ಸೀಸ್​)

    ಕೇಕ್​ನಲ್ಲಿ ಮರ್ಮಾಂಗ! ಸ್ಪೆಷಲ್​ ಕೇಕ್​ ಮಾಡಲು ಹೋಗಿ ಜೈಲು ಪಾಲಾದ ಮಹಿಳೆ

    ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts