ರಕ್ತದಲ್ಲಿ ಪತ್ರ ಬರೆದು ಯಡಿಯೂರಪ್ಪಗೆ ತಿರುಗೇಟು ಕೊಟ್ಟ ಕಾಂಗ್ರೆಸ್ ಕಾರ್ಯಕರ್ತ!

blood letter
Published on

ಹುಬ್ಬಳ್ಳಿ: ರಾಜ್ಯದಲ್ಲಿ ರಕ್ತದಲ್ಲಿ ಪತ್ರ ಬರೆಯೋ ರಾಜಕಾರಣ ವಿಚಾರವಾಗಿ ಯಡಿಯೂರಪ್ಪಗೆ ರಕ್ತದಲ್ಲಿ ಪತ್ರ ಬರೆದು ಯುವ‌ ಮುಖಂಡನೊಬ್ಬ ತಿರುಗೇಟು ನೀಡಿದ್ದಾರೆ.

ಜಗದೀಶ್ ಶೆಟ್ಟರ್ ಗೆಲ್ಲುವುದಿಲ್ಲ‌ ಎಂದು ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದ ಬಿ.ಎಸ್.ವೈ ಹೇಳಿದ್ದ ಬೆನ್ನಲ್ಲೇ ಲಿಂಗಾಯತ ಯುವ ಮುಖಂಡ ಈ ರೀತಿ ರಕ್ತದಲ್ಲೇ ಪತ್ರ ಬರೆದು ತಿರುಗೇಟು ನೀಡಿದ್ದಾರೆ.

ಮಂಜುನಾಥ ಯಂಟ್ರುವಿ ಎಂಬ ಯುವ ಮುಖಂಡ ರಕ್ತದಲ್ಲಿ ಪತ್ರ ಬರೆದು ತಿರುಗೇಟು ನೀಡಿದ್ದು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ರಕ್ತದಲ್ಲಿ ಬರೆದ ಪತ್ರದ ಪೋಟೋಗಳು ವೈರಲ್ ಆಗುತ್ತಿವೆ.

ಪತ್ರದಲ್ಲಿ "ಮಾನ್ಯ ಜಗದೀಶ ಶೆಟ್ಟರ್ 100ಕ್ಕೆ 100ರಷ್ಟು ವಿಜಯಶಾಲಿ ಆಗುತ್ತಾರೆ. ರಕ್ತದಲ್ಲಿ ಬರೆದುಕೊಡುತ್ತೇನೆ, ಈ ಸಾರಿ ಕಾಂಗ್ರೆಸ್ ರಾಜ್ಯದಲ್ಲಿ ಬರುತ್ತದೆ. ಜೈ ಕಾಂಗ್ರೆಸ್" ಎಂದು ಬರೆದುಕೊಂಡಿದ್ದಾರೆ.

"ನಾಯಕರ ಮಾತುಗಳನ್ನು ಕೃತಿಯಲ್ಲಿ ತೋರಿಸುತ್ತೇನೆ"

ದಿಗ್ವಿಜಯ ನ್ಯೂಸ್ ನೊಂದಿಗೆ ಮಾತನಾಡಿದ ರಕ್ತದಲ್ಲಿ ಬರೆದ ಮಂಜುನಾಥ ಯಂಟ್ರೂವಿ "ಒಬ್ಬ ಲಿಂಗಾಯತ ನಾಯಕರ ಮೇಲೆ ಲಿಂಗಾಯತ ನಾಯಕರನ್ನೇ ಎತ್ತಿ ಕಟ್ಟಲಾಗುತ್ತಿದೆ. ರಕ್ತದಲ್ಲಿ ಬರೆದು ಕೊಡ್ತೇನೆ ಶೆಟ್ಟರ್ ಸೋಲುವುದು ಖಚಿತ ಎಂದು ಬಿಎಸ್ ವೈ ಹೇಳಿದ್ದಾರೆ. ಆದ್ರೆ ನಾನು ರಕ್ತದಲ್ಲಿ ಬರೆದುಕೊಡ್ತೀನಿ ಯಾವುದೇ ಕಾರಣಕ್ಕೆ ಶೆಟ್ಟರ್ ಅವರು ಸೋಲುವುದಿಲ್ಲ. ಶೆಟ್ಟರ್ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ರಾಜಕೀಯ ನಾಯಕರ ಮಾತುಗಳನ್ನ ನಾನು‌ ಕೃತಿಯಲ್ಲಿ ತೋರಿಸುತ್ತೇನೆ" ಎಂದು ಮಂಜುನಾಥ ಯಂಟ್ರೂವಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net