More

    ಡಿಜೆ ಹಳ್ಳಿ ಗಲಭೆ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿದ ಕಾಂಗ್ರೆಸ್… ಇಡೀ ದಿನ ರಾಜಕೀಯ ಮೇಲಾಟ

    ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ಸಂಭವಿಸಿದ ಇಡೀ ದಾಂಧಲೆಯ ಹೊಣೆಯನ್ನು ಪೊಲೀಸರೇ ಹೊತ್ತುಕೊಳ್ಳಬೇಕು. ಪೊಲೀಸ್​ ಠಾಣೆಯನ್ನೇ ಪೊಲೀಸರು ರಕ್ಷಿಸಿಕೊಳ್ಳಲು ಆಗಲಿಲ್ಲ, ನಮ್ಮ ಶಾಸಕರಿಗೂ ರಕ್ಷಣೆ ಕೊಡಲಿಲ್ಲ, ಎಲ್ಲ ಗೊತ್ತಿದ್ದೂ ಸುಮ್ಮನಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಾಗ್ದಾಳಿ ನಡೆಸಿದ್ದಾರೆ.

    ಡಿಜೆ ಹಳ್ಳಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ತಮ್ಮದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿಯ ಮನೆಗೆ ಗಲಭೆಕೋರರು ಬೆಂಕಿ ಇಟ್ಟು ದಾಂಧಲೆ ನಡೆಸಿ ಅರ್ಧ ದಿನ ಕಳೆದರೂ ಕಾಂಗ್ರೆಸ್​ ನಾಯಕರು ಮೌನವಾಗಿದ್ದರು. ಘಟನೆ ಕುರಿತಂತೆ ಕೈನಾಯಕರು ತುಟಿ ಬಿಚ್ಚುತ್ತಿಲ್ಲ ಎಂದು ಬಿಜೆಪಿ ಮುಖಂಡರು ಆರೋಪದ ಸುರಿಮಳೆಗೈದರು. ಅಖಂಡ ಶ್ರೀನಿವಾಸಮೂರ್ತಿ ದಲಿತರಾಗಿದ್ದು, ಅವರ ಮನೆ ಮೇಲೆ ದಾಳಿ ನಡೆದರೂ ಕಾಂಗ್ರೆಸ್​ ತಮ್ಮ ಶಾಸಕರ ಪರವಾಗಿ ನಿಲ್ಲುತ್ತಿಲ್ಲ, ಅಲ್ಪಸಂಖ್ಯಾತರ ಮತಗಳೇ ಕಾಂಗ್ರೆಸ್​ಗೆ ಮುಖ್ಯ ಎಂದು ಮೇಲಿಂದ ಮೇಲೆ ಟೀಕೆಗಳು ಬಂದವು. ಕಾಂಗ್ರೆಸ್​ ಕಡೆಯಿಂದ ಪ್ರತಿಕ್ರಿಯೆ ನೀಡುವುದು ಅನಿವಾರ್ಯವಾದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಇಡೀ ಘಟನೆಗೆ ಪೋಲೀಸರನ್ನೇ ಹೊಣೆಗಾರರನ್ನಾಗಿ ಬಿಂಬಿಸಿದರು.

    ಇದನ್ನೂ ಓದಿರಿ ಡಿಜೆ ಹಳ್ಳಿ ಗಲಭೆ ಆರಂಭದ ಆ ಕ್ಷಣ… ಪೊಲೀಸ್​ ಠಾಣೆಯಲ್ಲಿದ್ದುಕೊಂಡೇ ಸಾವಿರಾರು ಜನರನ್ನು ಕರೆಸಿಕೊಂಡ ದುಷ್ಕರ್ಮಿಗಳು

    ಪೈಗಂಬರ್​ ಕುರಿತ ಅವಹೇಳನಕಾರಿ ಪೋಸ್ಟ್​ ನೋಡಿ ಯಾರು ನೊಂದಿದ್ದಾರೋ ಅವರು ಪೊಲೀಸರ ಬಳಿಗೆ ಬಂದು ಕ್ರಮಕೈಗೊಳ್ಳಲು ಕೋರಿದ್ದಾರೆ. ಮೂರು ಡಿಜೆ ಹಳ್ಳಿ ಗಲಭೆ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿದ ಕಾಂಗ್ರೆಸ್... ಇಡೀ ದಿನ ರಾಜಕೀಯ ಮೇಲಾಟಗಂಟೆಯಾದರೂ ಕ್ರಮಕೈಗೊಳ್ಳದೆ ಸಮಯ ವ್ಯರ್ಥ ಮಾಡಿದ್ದಾರೆ. ತಕ್ಷಣವೇ ಎಫ್ಐಆರ್​ ಹಾಕಿದ್ದರೆ ಅಥವಾ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತಪ್ಪಿತಸ್ಥನನ್ನು ಬಂಧಿಸಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದು ಡಿಕೆಶಿ ಹೇಳಿದರು.

    ಮೊದಲು ಪ್ರಚೋದನಕಾರಿ ಪೋಸ್ಟ್​ ಮಾಡಿದ್ದು ತಪ್ಪು. ನಂತರ ಪೊಲೀಸ್​ ಠಾಣೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡಿದ್ದೂ ತಪ್ಪು. ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ನಮಗೆ ರಕ್ಷಣೆ ಕೊಡುವ ಪೊಲೀಸ್​ ಠಾಣೆಗೆ ನುಗ್ಗುವ ಈ ಕೃತ್ಯಕ್ಕೆ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ. ನಾವು ಯಾರ ಬೆಂಬಲಕ್ಕೂ ಅಲ್ಲ. ಆದರೆ, ಅಮಾಯಕರಿಗೆ ಸುಮ್ಮನೆ ತೊಂದರೆ ಆಗಬಾರದು ಎಂದು ಸ್ಪಷ್ಟಪಡಿಸಿದರು.

    ಎಸ್​ಡಿಪಿಐ ಮತ್ತು ಪಿಎಫ್​ಐ ಸಂಘಟನೆ ನಿಷೇಧ ವಿಚಾರವಾಗಿ ಸರ್ಕಾರದ ನಿರ್ಧಾರಗಳ ಬಗ್ಗೆ ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ಇದಕ್ಕೆ ಪ್ರಚೋದನೆ ಮಾಡಿದವರ ಮೇಲೆ ಕ್ರಮ ಆಗಬೇಕು. ಪ್ರಚೋದನೆ ನೀಡಿದ ಸಂಘಟನೆ ಮೇಲೆ ಕ್ರಮ ಆಗಬೇಕು ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

    ಅವಹೇಳನಕಾರಿ ಪೋಸ್ಟ್​ ಹಾಕಿದ್ದ ನವೀನ್​ ಬಿಜೆಪಿಯ ಕಟ್ಟಾ ಅಭಿಮಾನಿ. ಆತ ಬಿಜೆಪಿಗೆ ಮತ ಹಾಕಿದ್ದ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾನೆ. ನವೀನ್​ಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೂ ಯಾವುದೇ ರೀತಿಯಲ್ಲೂ ರಾಜಕೀಯ ಸಂಬಂಧ ಇಲ್ಲ ಎಂದರು.

    ಇದನ್ನೂ ಓದಿರಿ ನಾನು ಹುಟ್ಟಿ ಬೆಳೆದ ಮನೆಯನ್ನು ಸುಟ್ಟು‌ ಹಾಕಿದ್ದಾರೆ… ಗಲಭೆಕೋರರಿಗೆ ಕಠಿಣ ಶಿಕ್ಷೆ ಆಗಲೇ ಬೇಕು: ಅಖಂಡ ಶ್ರೀನಿವಾಸಮೂರ್ತಿ

    ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್​.ಸಂತೋಷ್​, ‘ನವೀನ್​ ಫೇಸ್​ಬುಕ್​ ಪೋಸ್ಟ್​ ಕುರಿತು ಮತ್ತು ಪೊಲೀಸರು ವಿಳಂಬವಾಗಿ ಕ್ರಮಕೈಗೊಂಡರು ಎಂದು ಅಭಿಪ್ರಾಯ ನೀಡಲು 14 ಗಂಟೆಗಳ ನಂತರ ಕರ್ನಾಟಕ ಕಾಂಗ್ರೆಸ್​ ಜಾಗೃತಗೊಂಡಿತು. ಒಂದು ನೇರ ಪ್ರಶ್ನೆ, ನಿಮ್ಮ ಪಕ್ಷ ಈ ರೀತಿಯ ಗಲಭೆಗಳನ್ನು ಬೆಂಬಲಿಸುತ್ತದೆಯೇ? ಅಲ್ಪಸಂಖ್ಯಾತ ಗುಂಪುಗಳ ಗಲಭೆಯನ್ನು ಖಂಡಿಸಲು ಕಾಂಗ್ರೆಸ್​ ಏಕೆ ಹಿಂಜರಿಯುತ್ತದೆ?’ ಎಂದು ಪ್ರಶ್ನಿಸಿದ್ದಾರೆ.

    ಡಿಕೆಶಿ ಹೇಳಿಕೆಗೆ ವಿರುದ್ಧ ಕಿಡಿಕಾರಿರುವ ಸಚಿವ ಸಿ.ಟಿ.ರವಿ, ‘ಪೊಲೀಸರೇ ಡಿಜಿ ಹಳ್ಳಿ ಘಟನೆಗೆ ಕಾರಣ, ಬಾಂಧವರದ್ದೇನು ತಪ್ಪಿಲ್ಲ ಎಂಬ ನಿಲುವು ಇವರದ್ದು. ನಾಚಿಕೆಯಾಗಬೇಕು ಇಂಥ ಜನ್ಮಕ್ಕೆ’ ಎಂದಿದ್ದಾರೆ.

    ಗಲಭೆಕೋರರಿಂದಲೇ ನಷ್ಟ ವಸೂಲಿ; ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts