More

    ಚುನಾವಣೆಗೆ ಕೈ ಅಧಿಕೃತ ತಯಾರಿ, ಜನವರಿ10ರಂದು ಸಭೆ

    ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕೃತ ತಯಾರಿ ಆರಂಭಿಸಿದ್ದು, ಜನವರಿ 10ರಂದು ಮಹತ್ವದ ಸಭೆ ಕರೆದಿದೆ.
    2023ರ ವಿಧಾನಸಭೆ ಚುನಾವಣೆಯ ಎಲ್ಲ ಅಭ್ಯರ್ಥಿಗಳು (39), ಎಲ್ಲಾ ಬ್ಲಾಕ್ ಘಟಕದ ಅಧ್ಯಕ್ಷರು, ಜಿಲ್ಲಾ ಘಟಕಗಳ ಅಧ್ಯಕ್ಷರು, ಕೆಪಿಸಿಸಿ ಮುಂಚೂಣಿ ಘಟಕ, ಕೋಶ, ವಿಭಾಗಗಳ ರಾಜ್ಯಾಧ್ಯಕ್ಷರಿಗೆ ಸಭೆಗೆ ಬರುವಂತೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ ಶಿವಕುಮಾರ್ ಆಹ್ವಾನ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಘನ ಉಪಸ್ಥಿತಿಯಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗುತ್ತದೆ.
    ದೆಹಲಿಯಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಕೈಗೊಂಡ ನಿರ್ಧಾರ, ಸಂದೇಶಗಳನ್ನು ಇಲ್ಲಿ ತಿಳಿಹೇಳಲಾಗುತ್ತದೆ. ಜತೆಗೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆಯೂ ಅಭಿಪ್ರಾಯ ಸಹ ಆಲಿಸಲಾಗುತ್ತದೆ. ಹೊಸ ಪದಾಧಿಕಾರಿಗಳ ನೇಮಕ, ನಿಗಮ ಮಂಡಳಿಗೆ ನೇಮಕ ಕುರಿತೂ ಪಕ್ಷದ ನಿರ್ಧಾರ ತಿಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
    ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಸಭೆಯಲ್ಲಿ ಪಾಲ್ಗೊಂಡು ಕೆಲವು ಸೂಚನೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts