More

    ಪ್ರಿಯಾಂಕಾ ಗಾಂಧಿಯೊಂದಿಗೆ ನವಜೋತ್​ ಸಿಂಗ್​ ಸಿಧು ಸುದೀರ್ಘ ಸಭೆ

    ನವದೆಹಲಿ : ಪಂಜಾಬ್​ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್ ಬಗ್ಗೆ ಸಿಡಿಮಿಡಿಗೊಂಡಿರುವ ಮಾಜಿ ರಾಜ್ಯ ಸಚಿವ ನವಜೋತ್​ ಸಿಂಗ್​ ಸಿಧು ಅವರು ಇಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ಈ ಬಗ್ಗೆ ಖುದ್ದು ಸಿಧು ಅವರು, ಪ್ರಿಯಾಂಕಾರೊಂದಿಗೆ ನಿಂತಿರುವ ಫೋಟೋ ಟ್ವೀಟ್​ ಮಾಡಿ ತಿಳಿಸಿದ್ದಾರೆ.

    ಈ ಸಭೆಯ ಬಗ್ಗೆ ನಿನ್ನೆ ರಾಹುಲ್​ ಗಾಂಧಿ ಅವರನ್ನು ಕೇಳಿದಾಗ, ಯಾವುದೇ ಮೀಟಿಂಗ್​ ಇಲ್ಲ ಎಂದಿದ್ದರು ಎನ್ನಲಾಗಿದೆ. ಇದೀಗ ಪ್ರಿಯಾಂಕಾ ಅವರೊಂದಿಗೆ ‘ದೀರ್ಘ ಸಭೆ’ ನಡೆಸಿದ್ದಾಗಿ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಸಿಧು ಹೇಳಿದ್ದಾರೆ. ಅವರ ತಂಡದ ಪ್ರಕಾರ 4 ಗಂಟೆಗಳ ಕಾಲ ಈರ್ವರ ನಡುವೆ ಮಾತುಕತೆ ನಡೆದಿದೆ. ಆದರೆ ಸಭೆಯ ಮುಖ್ಯಾಂಶಗಳೇನೆಂದು ಇನ್ನೂ ತಿಳಿದುಬಂದಿಲ್ಲ.

    ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ್ ರೆಡ್ಡಿ ಆತ್ಮಹತ್ಯೆಗೆ ಯತ್ನ

    ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಂಜಾಬ್​ನ ರಾಜಕೀಯ ಬೆಳವಣಿಗೆಗಳು ಕುತೂಹಲಕಾರಿಯಾಗಿವೆ. ಪಂಜಾಬಿನಲ್ಲಿ ಸಿಎಂ ಅಮರಿಂದರ್​ ಸಿಂಗ್​ ಬಗ್ಗೆ ಪಕ್ಷದ ಕೆಲವು ನಾಯಕರಲ್ಲಿ ಮೂಡಿರುವ ಅಸಮಾಧಾನವನ್ನು ನೀಗಿಸಲು ಪ್ರಿಯಾಂಕಾ ಮತ್ತು ರಾಹುಲ್​ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಪಂಜಾಬಿನ ಕಾಂಗ್ರೆಸ್​ ಶಾಸಕರು ಮತ್ತು ಸಂಸದರ ಅಭಿಪ್ರಾಯಗಳನ್ನು ಕಲೆಹಾಕಲು ಮೂವರು ಹಿರಿಯ ನಾಯಕರ ತಂಡ ರಚಿಸಲಾಗಿದೆ. ಈ ತಂಡವು ರಾಜ್ಯ ಸರ್ಕಾರ ಮತ್ತು ಪಕ್ಷದ ರಾಜ್ಯ ಘಟಕ ಎರಡರಲ್ಲೂ ಬದಲಾವಣೆಗಳನ್ನು ಮಾಡಲು ಸೂಚಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಐಸ್​ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿದ ಕಿರಾತಕ! ಗಂಡಹೆಂಡತಿ ಜಗಳಕ್ಕೆ ಮಕ್ಕಳಿಗೆ ಸಜೆ!

    ಕಾಂಗ್ರೆಸ್​ ಸೇರುವ ಬಗ್ಗೆ ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts