More

    ಕಾಂಗ್ರೆಸ್​ ಸೇರುವ ಬಗ್ಗೆ ಜೆಡಿಎಸ್​ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದೇನು?

    ಬೆಂಗಳೂರು : ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುವ ಊಹಾಪೋಹಗಳ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ಕರೊನಾ ಹಿನ್ನೆಲೆಯಲ್ಲಿ ಅಭಿವೃದ್ಧಿಯತ್ತ ಗಮನ ಹರಿಸಿದ್ದೇನೆ ಎಂದಿರುವ ಅವರು, ‘ರಾಜಕೀಯದಲ್ಲಿ ಎಲ್ಲವೂ ಅನಿಶ್ಚಿತ. ಭವಿಷ್ಯ ನುಡಿಯಲಾಗದು’ ಎಂದೂ ಹೇಳಿ ಕುತೂಹಲ ಕೆರಳಿಸಿದ್ದಾರೆ.

    ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಇಡೀ ದೇಶ ಕರೊನಾದಿಂದ ತತ್ತರಿಸುತ್ತಿದೆ. ಹಳ್ಳಿಯಿಂದ ಡೆಲ್ಲಿಯವರೆಗೆ ಕರೊನಾ ಇದೆ. ಇದರ ಬಗ್ಗೆ ನಾವೆಲ್ಲರೂ‌ ಗಮನ ಹರಿಸಿದ್ದೇವೆ. ಕರೊನಾ ಪ್ರಯುಕ್ತ ಅಭಿವೃದ್ಧಿ ನಿಂತು ಹೋಗಿದೆ. ಅನುದಾ‌ನ ಇಲ್ಲ, ಏನೂ ಇಲ್ಲ. ರಾಜಕಾರಣಿಗಳು ಬಹಳ ಕಷ್ಟದಲ್ಲಿದ್ದೇವೆ. ಶಿಕ್ಷಣದ ಗತಿ ಅಧೋಗತಿಯತ್ತ ಹೋಗುತ್ತಿದೆ. ಆರೋಗ್ಯವೂ ಅಯೋಮಯವಾಗ್ತಿದೆ. ಹೀಗಾಗಿ ನಾನು ಶಾಸಕನಾಗಿ ಕೆಲಸ ಮಾಡ್ತಿದ್ದೇನೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಂಎಲ್​​ಎ ಅಂತಲ್ಲ. ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಿದ್ದೇನೆ ಎಂದರು.

    ಇದನ್ನೂ ಓದಿ: ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ… ಆಸ್ಪತ್ರೆಯ ಬೆಡ್​ ಮೇಲೆ ಕುಳಿತುಕೊಂಡೇ ವಿಡಿಯೋ ಕಳಿಸಿದ ಪ್ರಭಾಕರ್​ ರೆಡ್ಡಿ

    ರಾಜಕೀಯದಲ್ಲಿ ಎಲ್ಲವೂ ಅನಿಶ್ಚಿತ. ಈಗಲೇ ಏನನ್ನೂ ಹೇಳಲಾಗದು. ಯಾರೂ ಊಹಿಸದ ರೀತಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂತು. ನಿರೀಕ್ಷೆಗೂ ಮೀರಿ ಸರ್ಕಾರ ಭದ್ರಪಡಿಸಿಕೊಂಡಿದ್ದಾರೆ. ಮುಂದೇನು ಎಂದು ಭವಿಷ್ಯ ನುಡಿಯಲಾಗದು ಎಂದು ಜಿ.ಟಿ.ದೇವೇಗೌಡ ನಿಗೂಢವಾಗಿ ಹೇಳಿದರು.

    ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಮೊತ್ತ ನಿಗದಿಪಡಿಸಿ: ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಆದೇಶ

    ಪ್ರೇಮಪಯಣ: ಅಕ್ರಮವಾಗಿ ಗಡಿ ದಾಟಿದ ಅಂತರದೇಶೀಯ ನವವಿವಾಹಿತರು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts