ಐಸ್​ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿದ ಕಿರಾತಕ! ಗಂಡಹೆಂಡತಿ ಜಗಳಕ್ಕೆ ಮಕ್ಕಳಿಗೆ ಸಜೆ!

ಮುಂಬೈ : ಗಂಡಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಅದನ್ನು ಪೂರ್ಣ ರೀತಿಯಲ್ಲಿ ನಿರೂಪಿಸುವಂಥ ಪ್ರಸಂಗವೊಂದು ಮುಂಬೈನಲ್ಲಿ ನಡೆದಿದೆ. ಹೆಂಡತಿಯೊಂದಿಗೆ ನಡೆದ ಜಗಳದ ಹಿನ್ನೆಲೆಯಲ್ಲಿ ಪುರುಷನೊಬ್ಬ ತನ್ನ ಮಕ್ಕಳಿಗೆ ಐಸ್​ಕ್ರೀಮಿನಲ್ಲಿ ಇಲಿ ಪಾಷಾಣ ಬೆರೆಸಿ ನೀಡಿರುವ ಘಟನೆ ವರದಿಯಾಗಿದೆ. ಮುಂಬೈನ ಮನ್​​ಖುರ್ದ್​ ಪ್ರಾಂತ್ಯದ ನಿವಾಸಿ ಮೊಹಮ್ಮದ್ ಅಲಿ ನೌಶಾದ್​ ಎಂಬುವ ಜೂನ್ 25 ರ ಶುಕ್ರವಾರ ಜಗಳದ ನಂತರ ತನ್ನ ಇಬ್ಬರು ಗಂಡು ಮಕ್ಕಳಿಗೆ ಮತ್ತು ಒಬ್ಬ ಹೆಣ್ಣುಮಗುವಿಗೆ ಐಸ್​ಕ್ರೀಂನಲ್ಲಿ ಇಲಿ ಪಾಷಾಣ ಸೇರಿಸಿ ನೀಡಿದ್ದಾನೆ. … Continue reading ಐಸ್​ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿದ ಕಿರಾತಕ! ಗಂಡಹೆಂಡತಿ ಜಗಳಕ್ಕೆ ಮಕ್ಕಳಿಗೆ ಸಜೆ!