More

    ಕೋವಿಡ್​ಗೆ ಬಲಿಯಾದ ಕಾಂಗ್ರೆಸ್​ ಸಂಸದ

    ನವದೆಹಲಿ: ಕಾಂಗ್ರೆಸ್​ನ ಲೋಕಸಭಾ ಸದಸ್ಯ ಎಚ್​. ವಸಂತಕುಮಾರ್​ ಕೋವಿಡ್​ ಕಾಯಿಲೆಯಿಂದ ಶುಕ್ರವಾರ (ಆಗಸ್ಟ್​ 28) ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

    ಇದೇ ಮೊದಲ ಬಾರಿಗೆ ಸಂಸದರಾಗಿದ್ದ ಎಚ್​. ವಸಂತಕುಮಾರ್​ ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕರೊನಾ ಸೋಂಕಿಗೆ ಒಳಗಾಗಿ ಆಗಸ್ಟ್​ 10 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ನ್ಯುಮೋನಿಯಾಗೂ ತುತ್ತಾಗಿದ್ದರಿಂದ ಅವರ ಸ್ಥಿತಿ ಗಂಭೀರವಾಗಿತ್ತು.

    ಇದನ್ನೂ ಓದಿ; ಕೋವಿಡ್​ನಿಂದಾಗಿ ಚುನಾವಣೆ ನಿಲ್ಲಿಸೋಕಾಗಲ್ಲ; ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್​

    ಸಂಸದರಾಗುವ ಮುನ್ನ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ವಸಂತಕುಮಾರ್​ ನಿಧನಕ್ಕೆ ಪ್ರಧಾನಿ ನರೇಮದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಪ್ರಗತಿ ಬಗ್ಗೆ ಅವರಿಗಿದ್ದ ಕಾಳಜಿ ಪ್ರಶಂಸನೀಯ ಎಂದು ಅವರೊಂದಿಗಿನ ಮಾತುಕತೆಯನ್ನು ಸ್ಮರಿಸಿದ್ದಾರೆ.

    ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಸಂತಾಪ ಸೂಚಿಸಿದ್ದಾರೆ. ವಸಂತಕುಮಾರ್​ ಸಾವು ಆಘಾತ ನೀಡಿದೆ. ಕಾಂಗ್ರೆಸ್​ ತತ್ವ- ಸಿದ್ಧಾಂತದ ಮೇಲೆ ಅವರಿಗಿದ್ದ ನಂಬಿಕೆ ಹಾಗೂ ಜನಸೇವೆ ಸದಾ ಹಸಿರಾಗಿರುತ್ತದೆ ಎಂದು ಹೇಳಿದ್ದಾರೆ.

    ಕೋವಿಡ್​ಗಷ್ಟೇ ಅಲ್ಲ, ಎಲ್ಲ ಬಗೆ ಕರೊನಾಗೂ ಇದು ರಾಮಬಾಣ; ಕೇಂಬ್ರಿಡ್ಜ್​ ವಿವಿಯಿಂದ ಸಜ್ಜಾಗ್ತಿದೆ ಲಸಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts