More

    ಬಹಿರಂಗ ಚರ್ಚೆಗೆ ಬನ್ನಿ, ಕಾಂಗ್ರೆಸ್​ಗೆ ಸಚಿವ ಡಾ.ಸುಧಾಕರ್ ಸಡ್ಡು

    ಬೆಂಗಳೂರು: ಭ್ರಷ್ಟಾಚಾರದಲ್ಲಿ ಮುಳುಗೆದ್ದಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಯಾವುದೇ ನೈತಿಕತೆಯಿಲ್ಲ. ಭ್ರಷ್ಟಾಚಾರ ಹಾಗೂ ಸಾಧನೆ ಕುರಿತು ಬಹಿರಂಗ ಚರ್ಚೆಗೆ ಬನ್ನಿ. ದಾಖಲೆ ಸಹಿತ ಉತ್ತರಿಸಲು ಸಿದ್ಧವೆಂದು ಕಾಂಗ್ರೆಸ್ ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸಡ್ಡು ಹೊಡೆದರು.

    ಬಿಜೆಪಿ ರಾಜ್ಯ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಸುಳ್ಳು ಆರೋಪ ಹಾಗೂ ತಪ್ಪು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಫಲಿಸುವುದಿಲ್ಲ. ಒಂದು ನರೇಟಿವ್ ಸೆಟ್ ಮಾಡಿ ಉತ್ತಮ, ಜನಪರವಾಗಿ ಕೆಲಸ ಮಾಡುತ್ತಿರುವುದಕ್ಕೆ ಕಳಂಕ ಮೆತ್ತುವ ಕೀಳು ರಾಜಕೀಯವನ್ನು ಸರ್ಕಾರ ಹಾಗೂ ಪಕ್ಷ ತೀವ್ರವಾಗಿ ಖಂಡಿಸುತ್ತದೆ.

    ಸಿದ್ದರಾಮಯ್ಯ ನೇತೃತ್ವದ ಆಡಳಿತಾವಧಿಯ ಭ್ರಷ್ಟಾಚಾರ, ಅವ್ಯವಹಾರಗಳ ಕುರಿತು ನಿರ್ದಿಷ್ಟ ದೂರೊಂದನ್ನು ಪಕ್ಷದ ವತಿಯಿಂದ ಲೋಕಾಯುಕ್ತ ಸಂಸ್ಥೆಯಲ್ಲಿ ಇಂದು ದಾಖಲಿಸಲಾಗುತ್ತಿದೆ ಎಂದು ಸುಧಾಕರ್ ಹೇಳಿದರು.

    ಕಾಂಗ್ರೆಸ್ 80 ರಿಂದ 90 ಸ್ಥಾನ
    ಕಾಂಗ್ರೆಸ್ ನಡೆಸಿರುವುದು ಪ್ರಜಾಧ್ವನಿಯಲ್ಲ, ಪ್ರಜಾದ್ರೋಹದ ಯಾತ್ರೆ. ಆಡಳಿತದ ಅವಧಿಯುದ್ದಕ್ಕೂ ಜನ ವಿರೋಧಿ ಕೆಲಸ ಮಾಡಿದ್ದರಿಂದಲೇ ಕಾಂಗ್ರೆಸ್ ಪಕ್ಷವು ಜನರಿಂದ ತಿರಸ್ಕೃತವಾಗಿದೆ. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಹಗಲುಗನಸು ಕಾಣುತ್ತಿದ್ದು, ಏನೇ ತಿಪ್ಪರಲಾಗ ಹಾಕಿದರೂ 80 ರಿಂದ 90 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದರು.

    ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿದ್ದು, 125 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಡಾ.ಸುಧಾಕರ್, ಜೆಡಿಎಸ್ ಗೆ ಎಷ್ಟು ಸ್ಥಾನ ಬರುತ್ತವೆ ಎನ್ನುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

    ಹೃದಯಾಘಾತದಿಂದ ಸ್ಯಾಂಡಲ್​ವುಡ್​ ಹಿರಿಯ ನಟ ಲಕ್ಷ್ಮಣ್​ ವಿಧಿವಶ

    ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಸಹಪಾಠಿಯ ಮೇಲೆ ನಾಲ್ವರು ವಿದ್ಯಾರ್ಥಿನಿಯರಿಂದ ಹಲ್ಲೆ: ವಿಡಿಯೋ ವೈರಲ್​

    ಲುಡೋ ಗೇಮ್​ನಿಂದ ಹುಟ್ಟಿದ ಪ್ರೀತಿ! ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದ ಯುವತಿ ಸೇರಿ ಮೂವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts