More

    ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಸಹಪಾಠಿಯ ಮೇಲೆ ನಾಲ್ವರು ವಿದ್ಯಾರ್ಥಿನಿಯರಿಂದ ಹಲ್ಲೆ: ವಿಡಿಯೋ ವೈರಲ್​

    ಲಾಹೋರ್​: ತಮ್ಮೊಂದಿಗೆ ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ನಾಲ್ವರು ವಿದ್ಯಾರ್ಥಿನಿಯರು ಸೇರಿ, ಸಹಪಾಠಿ ವಿದ್ಯಾರ್ಥಿನಿ ಮೇಲೆ ಶಾಲೆಯ ಕ್ಯಾಂಟಿನ್​ನಲ್ಲೇ ಹಲ್ಲೆ ಮಾಡಿ, ಕಿರುಕುಳ ನೀಡಿರುವ ಆತಂಕಕಾರಿ ಘಟನೆ ಪಾಕಿಸ್ತಾನ ರಾಜಧಾನಿ ಲಾಹೋರ್​ನಲ್ಲಿರುವ ಅಮೆರಿಕನ್​ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದಿದೆ.

    ಈ ಘಟನೆ ಪಾಕಿಸ್ತಾನದಾದ್ಯಂತ ಚರ್ಚೆ ಹುಟ್ಟು ಹಾಕಿರುವುದಲ್ಲದೆ, ವಿದ್ಯಾರ್ಥಿನಿಯರ ವರ್ತನೆ ನೋಡಿ ಶಾಕ್​ ಆಗಿದ್ದಾರೆ. ಅದರಲ್ಲೂ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳನ್ನು ಹೇರುವ ಪಾಕ್​ನಂತಹ ದೇಶದಲ್ಲೇ ಈ ರೀತಿಯ ಘಟನೆ ನಡೆದಿರುವುದು ಅಚ್ಚರಿಯೇ ಸರಿ.

    ಹಲ್ಲೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಹಪಾಠಿ ವಿದ್ಯಾರ್ಥಿನಿಯ ಕೂದಲು ಹಿಡಿದೆಳೆದು, ಕೆಳಗೆ ಬೀಳಿಸಿರುವುದು ಮತ್ತು ಆಕೆಯ ಮೇಲೆ ಇಬ್ಬರು ವಿದ್ಯಾರ್ಥಿನಿಯರು ಕುಳಿತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿನಿಯ ಕಪಾಳಕ್ಕೆ ಬಾರಿಸಿ, ಕಾಲಲ್ಲಿ ಒದ್ದು, ಕ್ಷಮೆ ಕೋರುವಂತೆ ಆಗ್ರಹಿಸುತ್ತಿರುವುದನ್ನು ನೋಡಬಹುದಾಗಿದೆ.

    ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸದಸ್ಯ ಮಾಹೀನ್ ಫೈಸಲ್ ಎಂಬುವರು ತಮ್ಮ ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು, ಇದು ಸಂಪೂರ್ಣ ಅಸಹ್ಯವಾಗಿದೆ. ಇದು ಲಾಹೋರ್‌ನಲ್ಲಿರುವ ಸ್ಕಾರ್ಸ್‌ಡೇಲ್ ಅಮೆರಿಕನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ದೃಶ್ಯಗಳು. ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕಾಗಿ ಸಹಪಾಠಿಯ ಮೇಲೆ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ಆ ವಿದ್ಯಾರ್ಥಿನಿಯರ ವಿರುದ್ಧ ಕಠಿಣ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ಇಮ್ರಾನ್ ಯೂನಸ್, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆ ಮಾಡಿದವರಲ್ಲಿ ಒಬ್ಬಳಾದ ಜನ್ನತ್ ಮಾದಕ ವ್ಯಸನಿ. ನನ್ನ ಮಗಳು ಅವರ ಗುಂಪಿನ ಜೊತೆ ಸೇರಲು ಬಯಸಿದ್ದರು. ಆದರೆ, ಮಗಳು ನಿರಾಕರಿಸಿದಳು. ಹೀಗಾಗಿ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

    ಲುಡೋ ಗೇಮ್​ನಿಂದ ಹುಟ್ಟಿದ ಪ್ರೀತಿ! ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದ ಯುವತಿ ಸೇರಿ ಮೂವರ ಬಂಧನ

    ಮೆಗಾ ಪ್ಲಾನ್ ಮಾಡಿಕೊಂಡು ಡಿಕೆಶಿ ಕ್ಷೇತ್ರ ಬದಲಾವಣೆ!? ಮದ್ದೂರಿನಿಂದ ಸ್ಪರ್ಧೆ ಮಾಡುವ ಚಿಂತನೆ ಹಿಂದಿದೆ ಮತ್ತೊಂದು ಗೇಮ್!

    1947ರಲ್ಲಿ ಭಾರತ-ಪಾಕ್​​​ ನಡುವಿನ ರೈಲು ಸಂಚಾರದ ಟಿಕೆಟ್ ದರ ಎಷ್ಟಿತ್ತು ಗೊತ್ತಾ? ಹಳೇ ಟಿಕೆಟ್​ ಫೋಟೋ ವೈರಲ್​ ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts