More

    ಪಾಕಿಸ್ತಾನದ ನಿರ್ಣಯವನ್ನು ಮುಸ್ಲಿಂ ಲೀಗ್‌ಗಿಂತ ಮುನ್ನ ಅಂಗೀಕರಿಸಿದ ಮೊದಲ ವಕೀಲ ವೀರ ಸಾವರ್ಕರ್​: ಕಾಂಗ್ರೆಸ್​ ಮುಖಂಡ ಶಶಿ ತರೂರ್​

    ಜೈಪುರ: ಮುಸ್ಲಿಂ ಲೀಗ್‌ಗಿಂತ ಮೂರು ವರ್ಷಗಳ ಮುನ್ನ ಪಾಕಿಸ್ತಾನದ ನಿರ್ಣಯವನ್ನು ಅಂಗೀಕರಿಸುವ ವಿಚಾರವನ್ನು ಪ್ರಸ್ತಾಪಿಸಿದ ಮೊದಲ ವಕೀಲ ವೀರ ಸಾವರ್ಕರ್​ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿವಾದಿತ ಹೇಳಿಕೆ ನೀಡಿದ್ದಾರೆ.

    ಜೈಪುರ ಸಾಹಿತ್ಯ ಸಮ್ಮೇಳನ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಎರಡು ರಾಷ್ಟ್ರಗಳ ಸಿದ್ಧಾಂತ ಸಾವರ್ಕರ್​ ಅವರದ್ದು, ಹಿಂದು ಮಹಾಸಭಾವು ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಗುರುತಿಸಬೇಕು ಎಂದರೆ, ಮುಸ್ಲಿಮರಿಗೆ ಬೇರೆ ರಾಷ್ಟ್ರಬೇಕು ಎಂದಿತ್ತು ಎಂದು ಹೇಳಿದರು.

    ಹೀಗಾಗಲೇ ಸಾವರ್ಕರ್​ ಬಗ್ಗೆ ರಾಜಕೀಯದ ಹಲವು ನಾಯಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಶಶಿ ತರೂರ್​ ಅವರು ಈ ವಿವಾದಿತ ಹೇಳಿಕೆ ನೀಡಿದ್ದಾರೆ.

    ವೀರ ಸಾವರ್ಕರ್​ ಅವರಿಗೆ ಭಾರತ ರತ್ನ ನೀಡಬೇಕು ಎಂದು ಬಿಜೆಪಿ ಮತ್ತು ಶಿವಸೇನೆ ಪ್ರತಿಪಾದಿಸಿವೆ. ಇದಕ್ಕೆ ಕೆಲ ಪಕ್ಷಗಳು ವಿರೋಧಿಸಿವೆ.

    ಜನವರಿ 18ರಂದು ಶಿವಸೇನಾ ಮುಖಂಡ ಸಂಜಯ್​ ರಾವತ್​ ಅವರು, ಸಾವರ್ಕರ್​ ಅವರನ್ನು ನಾವು ಗೌರವಿಸುತ್ತೇವೆ. ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಲು ವಿರೋಧಿಸುವವರನ್ನು ಅವರಿದ್ದ ಜೈಲಿನಲ್ಲಿ ಎರಡು ದಿನ ಇಡಬೇಕು. ಆಗ ದೇಶಕ್ಕೆ ಸಾವರ್ಕರ್​ ಅವರ ಕೊಡುಗೆ ಏನು ಎಂಬುದು ಅರ್ಥವಾಗುತ್ತದೆ ಎಂದಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts