More

    ಸಿಎಂ ವಿರುದ್ಧ ಬಂಡಾಯ ಎದ್ದು ದೆಹಲಿಗೆ ತೆರಳಿದ್ದ ಸಚಿನ್​ ಪೈಲಟ್​ಗೆ ಕಾಂಗ್ರೆಸ್​ ‘ಹೈ’ ಶಾಕ್​…!

    ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ವಿರುದ್ಧ ಬಂಡಾಯ ಎದ್ದಿರುವ ಡಿಸಿಎಂ ಸಚಿನ್​ ಪೈಲಟ್ ತಮ್ಮ ಆಪ್ತರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಹಾಗೇ, ಹೈಕಮಾಂಡ್​ ಎದುರು ತಮ್ಮ ಬಲಪ್ರದರ್ಶನಕ್ಕೆ ಎಲ್ಲ ಸಿದ್ಧತೆಯನ್ನೂ ನಡೆಸಿದ್ದರು.

    ಆದರೆ ಸಚಿನ್​ ಪೈಲಟ್​ಗೆ ಕಾಂಗ್ರೆಸ್ ಹೈಕಮಾಂಡ್​ ಬಹುದೊಡ್ಡ ಶಾಕ್​ ನೀಡಿದೆ. ಕೂಡಲೇ ಜೈಪುರಕ್ಕೆ ತೆರಳಿ, ಅಶೋಕ್​ ಗೆಹ್ಲೋಟ್​​ ನಾಯಕತ್ವದ ಆಡಳಿತದಲ್ಲೇ ಕೆಲಸ ಮಾಡಿಕೊಂಡಿರಲು ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಇಂದು ರಾತ್ರಿಯೇ ಜೈಪುರಕ್ಕೆ ವಾಪಸ್​ ಹೋಗಬೇಕು ಮತ್ತು ಅಲ್ಲಿ ಕಾಂಗ್ರೆಸ್​ ವೀಕ್ಷಕರಾದ ಅಜಯ್​ ಮೇಕನ್​, ರಾಜಸ್ಥಾನ ಕಾಂಗ್ರೆಸ್​ ಪ್ರದೇಶ ಸಮಿತಿ ಮುಖ್ಯಸ್ಥ ಅವಿನಾಶ್​ ಪಾಂಡೆ ಮತ್ತು ಪಕ್ಷದ ಹಿರಿಯ ವಕ್ತಾರ ರಣದೀಪ್​ ಸಿಂಗ್​ ಸರ್ಜೇವಾಲಾ ಅವರನ್ನು ಭೇಟಿಯಾಗಬೇಕು ಎಂದು ಸಚಿನ್​ ಅವರಿಗೆ ಕಾಂಗ್ರೆಸ್​ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.

    ಈ ಮೂವರನ್ನೂ ರಾಜಸ್ಥಾನದಲ್ಲಿ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದ್ದು, ಇಂದು ರಾತ್ರಿಯ ಫ್ಲೈಟ್​ನಲ್ಲಿ ಅವರೂ ಕೂಡ ಜೈಪುರಕ್ಕೆ ತೆರಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ರಷ್ಯಾದಲ್ಲಿ ಸಿದ್ಧವಾಯ್ತು ಜಗತ್ತಿನ ಮೊದಲ ಕೊವಿಡ್​-19 ಲಸಿಕೆ; ಕ್ಲಿನಿಕಲ್​ ಪ್ರಯೋಗ ಸಂಪೂರ್ಣ ಯಶಸ್ವಿ

    ನಾಳೆ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಆ ಸಭೆಗೆ ಹಾಜರಾಗಬೇಕು ಎಂದೂ ಸಚಿನ್ ಪೈಲಟ್​​ಗೆ ಸೂಚಿಸಲಾಗಿದೆ.

    ಇನ್ನು ಎಂಎಲ್​ಎಗಳನ್ನು ಅಪಹರಿಸಿದ್ದಾರೆ ಎಂಬ ಆರೋಪದಡಿ ತನಗೆ ರಾಜಸ್ಥಾನ ಪೊಲೀಸರು ನೋಟಿಸ್​ ಕೊಟ್ಟಿದ್ದು, ತನಿಖೆ ಶುರು ಮಾಡಿದ್ದರ ಬಗ್ಗೆ ಸಚಿನ್​ ಪೈಲಟ್​ ಕೂಡ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

    ಸಚಿನ್​ ಪೈಲಟ್​ ಪರಿಸ್ಥಿತಿ ನೋಡಿದರೆ ತುಂಬ ನೋವಾಗುತ್ತದೆ ಎಂದ ಜ್ಯೋತಿರಾದಿತ್ಯ ಸಿಂಧಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts