More

    ದೇಶದಲ್ಲಿನ ಆರ್ಥಿಕ ಅಪರಾಧಕ್ಕೆ ಗಾಂಧಿ ಕುಟುಂಬದ ನಂಟು ಎಂದ ಬಿಜೆಪಿ, ಮೂರು ಪ್ರಶ್ನೆಗೆ ಉತ್ತರ ಕೊಡಿ ಎಂದ ಕಾಂಗ್ರೆಸ್​ !

    ನವದೆಹಲಿ: ಯೆಸ್​ ಬ್ಯಾಂಕ್​ನ ಆರ್ಥಿಕ ದಿವಾಳಿ ಮಾಡಿದ ರಾಣಾ ಕಪೂರ್​, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರಿಂದ ಪೇಂಟಿಂಗ್​ವೊಂದನ್ನು ಬರೋಬ್ಬರಿ 2 ಕೋಟಿ ರೂಪಾಯಿಗೆ ಪರ್ಚೇಸ್ ಮಾಡಿದ್ದರು. ಈ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದೆ. ಕಾಂಗ್ರೆಸ್ ನಾಯಕರು ಈಗ ಪ್ರಿಯಾಂಕಾ ಗಾಂಧಿಯ ಬೆಂಬಲಕ್ಕೆ ನಿಂತಿದ್ದಾರೆ. ಗಾಂಧಿ ಕುಟುಂಬದ ವಿರುದ್ಧ ಇದೊಂದು ಪಿತೂರಿಯ ತಂತ್ರ ಅಂತ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

    ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು, ಟ್ವಿಟರ್​ನಲ್ಲಿ ಗಾಂಧಿ ಕುಟುಂಬದ ಫೋಟೋಗಳನ್ನು ಅಪ್​ಲೋಡ್​ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಭಾರತದಲ್ಲಿ ನಡೆದಿರುವ ಆರ್ಥಿಕ ಅಪರಾಧಗಳ ಹಿಂದೆ ಗಾಂಧಿ ಕುಟುಂಬಕ್ಕೆ ಲಿಂಕ್ ಇದೆ ಅಂತ ಆರೋಪಿಸಿದ್ರು. ಸೋನಿಯಾ ಗಾಂಧಿಗೆ ವಿಮಾನದ ಅಪ್​ಗ್ರೇಡ್ ಟಿಕೆಟ್​ಗಳನ್ನು ವಿಜಯ್ ಮಲ್ಯ ಕಳಿಸಿದ್ದ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರ ಪ್ರಯಾಣಕ್ಕೂ ಸಹಕರಿಸಿದ್ದ. ಬಳಿಕ ಮಲ್ಯ ದೇಶ ಬಿಟ್ಟು ಓಡಿ ಹೋದ. ಇನ್ನು ರಾಹುಲ್ ಗಾಂಧಿ, ವಂಚಕ ನೀರವ್ ಮೋದಿ ಅವರ ವಜ್ರಾಭರಣದ ಶೋ ರೂಮ್ ಉದ್ಘಾಟಿಸಿದ್ದರು. ಆತ ಕೂಡ ಆರ್ಥಿಕ ಅಪರಾಧಿ. ಈಗ ಯೆಸ್​ ಬ್ಯಾಂಕ್​ನ ರಾಣಾ ಕಪೂರ್ ಪ್ರಿಯಾಂಕ ಗಾಂಧಿಯ ಪೇಂಟಿಂಗ್​ ಖರೀದಿಸಿದ್ದಾರೆ ಅಂತ ಮಾಳವೀಯ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.

    ಬಿಜೆಪಿಯ ಈ ಆರೋಪಕ್ಕೆ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲ ಮೂರು ಪ್ರಶ್ನೆಗಳನ್ನು ಎತ್ತಿ ತಿರುಗೇಟು ನೀಡಿದ್ದಾರೆ. ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿಯಾಗಲಿ, ಫೈನಾನ್ಸ್ ಮಿನಿಸ್ಟರ್ ನಿರ್ಮಲ ಸೀತಾರಾಮನ್ ಅವರಾಗಲಿ ತುಟಿ ಬಿಚ್ಚುತ್ತಿಲ್ಲ ಏಕೆ ಅಂತ ಪ್ರಶ್ನಿಸಿದ್ದಾರೆ. ಯೆಸ್​ ಬ್ಯಾಂಕ್​ ದಿವಾಳಿ ಹೇಗಾಯಿತು ? ಯೆಸ್ ಬ್ಯಾಂಕ್ ದಿವಾಳಿಯಾಗಲು ಕಾರಣ ಯಾರು ? ಈ ವೇಳೆ ಕೇಂದ್ರ ಸರ್ಕಾರ ಏನು ನಿದ್ದೆ ಮಾಡುತ್ತಿತ್ತಾ ಅಥವಾ ಕೇಂದ್ರ ಸರ್ಕಾರ ಯೆಸ್​ ಬ್ಯಾಂಕ್ ಅನ್ನು ಆರ್ಥಿಕ ದಿವಾಳಿ ಮಾಡಿತಾ ? ಎಂದು ರಂದೀಪ್ ಸುರ್ಜೇವಾಲ ಬಿಜೆಪಿಗೆ ಮೂರು ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.

    ಎಂ.ಎಫ್ ಹುಸೇನ್ ಅವರ ಪೇಂಟಿಂಗ್ ಅ​ನ್ನು ಪ್ರಿಯಾಂಕಾ ಗಾಂಧಿ ರಾಣಾಗೆ 2 ಕೋಟಿಗೆ ಸೇಲ್ ಮಾಡಿರುವುದು ನಿಜ. ತಂದೆ ರಾಜೀವ್ ಗಾಂಧಿ ಅವರಿಂದ ಆ ಪೇಂಟಿಂಗ್​ ಅನ್ನು ಪ್ರಿಯಾಂಕ ಪಡೆದಿದ್ದರು. ರಾಣಾ ಕಪೂರ್ ಈ ಪೇಂಟಿಂಗ್​ ಅನ್ನು 2 ಕೋಟಿಗೆ ಖರೀದಿಸಿ 10 ವರ್ಷ ಆಗಿದೆ. ಅದನ್ನ ವಾರ್ಷಿಕ ತೆರಿಗೆಯಲ್ಲೂ ಅವರು ನಮೂದಿಸಿದ್ದಾರೆ. ಇದಕ್ಕೂ ಕಾಂಗ್ರೆಸ್​ಗೂ ಏನು ಸಂಬಂಧ ಎಂದು ಸುರ್ಜೇವಾಲ ಸಮರ್ಥಿಸಿಕೊಂಡಿದ್ದಾರೆ. ಇನ್ನು ಯೆಸ್​ ಬ್ಯಾಂಕ್​ ಮಾರ್ಚ್ 2014 ರಿಂದ ಮಾರ್ಚ್ 2019ರ ಅವಧಿಯಲ್ಲಿ 55 ಸಾವಿರ ಕೋಟಿಯಿಂದ 2 ಲಕ್ಷದ 42 ಸಾವಿರ ಕೋಟಿಯಷ್ಟು ಭಾರೀ ಸಾಲ ನೀಡಿದ್ದು ಹೇಗೆ ? ನೋಟ್ ಬ್ಯಾನ್ ವೇಳೆ ಬ್ಯಾಂಕ್​ನ ಲೋನ್ ಬುಕ್ ಶೇಕಡ 100ರಷ್ಟು ಏರಿಕೆಯಾಗಿದ್ದು ಹೇಗೆ ಎಂದು ಕೂಡ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್, ಮಗಳ ಮನೆ ಸೇರಿ ಮುಂಬೈನಲ್ಲಿ 7 ಕಡೆ ಏಕಕಾಲದಲ್ಲಿ ಸಿಬಿಐ ದಾಳಿ

    ಚೆಕ್ ಬೌನ್ಸ್ ಆಗಿ ವಂಚನೆ ಆಗಿದೆಯೇ? ಪರಿಹಾರಕ್ಕೆ ವರ್ಷಾನುಗಟ್ಟಲೆ ಕಾಯಬೇಕಾಗಿಲ್ಲ, ಭವಿಷ್ಯದಲ್ಲಿ ಶೀಘ‍್ರವೇ ಸಿಗಲಿದೆ ನ್ಯಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts