More

    ಸಿ.ಎಂ.ದ್ಯಾವಪ್ಪ ಅಪರೂಪದ ವ್ಯಕ್ತಿ: ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು ಬಣ್ಣನೆ

    ಮಂಡ್ಯ: ಮೂರು ದಶಕಗಳಿಂದ ಸಮಾಜ ಸೇವಾ ಚಟುವಟಿಕೆಗಳಲ್ಲಿ ನಿರತರಾಗಿರುವ ದ್ಯಾವಪ್ಪ ಸಮಾನತೆ ಬಯಸುವ ಅಪರೂಪದ ವ್ಯಕ್ತಿ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಪ್ರಸಾದ್ ಕೆರಗೋಡು ಶ್ಲಾಸಿದರು.
    ಒಡನಾಡಿ ಸಿ.ಎಂ.ದ್ಯಾವಪ್ಪ ಅಭಿನಂದನಾ ಸಮಿತಿಯಿಂದ ನಗರದ ಹಿಂದಿ ಸಭಾಭವನದಲ್ಲಿ ಆಯೋಜಿಸಿದ್ದ ಆಪ್ತ ಮಾತು ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಯುವಜನರು ಇತರರಿಗೆ ಹೋರಾಟದ ಮನೋಭಾವ ಬೆಳೆಸಲು ಈ ಕಾರ್ಯಕ್ರಮಗಳು ಉಪಯುಕ್ತವಾಗಿದೆ ಎಂದರು.
    ಸಾಹಿತಿ ಕೆ.ಪಿ.ಮೃತ್ಯುಂಜಯ ಮಾತನಾಡಿ, ದ್ಯಾವಪ್ಪ ಎಂದಿಗೂ ಕೂಡ ಮಾನಸಿಕ ಬಡತನದಿಂದ ಬಳಲಿಲ್ಲ. ದೈಹಿಕವಾಗಿ ಬಡತನ ಅನುಭವಿಸಿದ್ದರೂ, ಆ ಧೈರ್ಯದಿಂದ ಏನನ್ನಾದರೂ ಸಾಧಿಸಬಹುದೆಂಬ ಮಹತ್ವಾಕಾಂಕ್ಷೆ ಹೊಂದಿ ಸುದೀರ್ಘವಾಗಿ ಸೇವೆ, ರಾಜಕೀಯ ಪಕ್ಷಗಳಲ್ಲಿ ತೊಡಗಿಸಿಕೊಂಡಿದ್ದು ಒಂದು ಸೋಜಿಗ ಎನಿಸುತ್ತದೆ. ವಿದ್ಯಾರ್ಥಿದಿಸೆಯಲ್ಲಿ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಸಾಕಷ್ಟು ಪೊಲೀಸ್ ಪ್ರಕರಣಗಳಲ್ಲಿದ್ದರೂ ಅದಕ್ಕೂ ಜಗ್ಗದೆ ಕಾವೇರಿ ಹೋರಾಟದಂತಹ ಚಳವಳಿಗಳಲ್ಲಿದ್ದುದು ಹೆಮ್ಮೆ ಎನಿಸುತ್ತದೆ ಎಂದರು.
    ನೈಸರ್ಗಿಕ ಕೃಷಿಕ ಕೆ.ಜೆ.ಅನಂತರಾವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಯುವ ಪ್ರಶಸ್ತಿ ಪುರಸ್ಕೃತ, ಸಾಮಾಜಿಕ ಹೋರಾಟಗಾರ ಸಿ.ಎಂ.ದ್ಯಾವಪ್ಪ ದಂಪತಿಯನ್ನು ಅಭಿನಂದಿಸಿದರು. ಶಾಸಕ ರವಿಕುಮಾರ್ ಗಣಿಗ, ಸಮಿತಿ ಅಧ್ಯಕ್ಷ ಸಿ.ತ್ಯಾಗರಾಜು, ಎಲ್.ಸಂದೇಶ್, ಕಾರಸವಾಡಿ ಮಹದೇವು, ಜಿ.ಎನ್.ಕೆಂಪರಾಜು, ಬಿ.ಎಸ್.ಅನುಪಮಾ, ತಿರುಮಲಾಪುರ ನಾರಾಯಣ್, ರವಿ ಮಾರಗೌಡನಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts