More

    ಬಂಗಾರಪೇಟೆ ತಹಸೀಲ್ದಾರ್ ಹತ್ಯೆಗೆ ಖಂಡನೆ

    ಮಂಡ್ಯ: ಕೋಲಾರ ಜಿಲ್ಲೆ ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ನಗರ ಸೇರಿ ಜಿಲ್ಲೆಯ ವಿವಿಧ ಕಡೆ ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

    ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಂದಾಯ ಇಲಾಖೆ ನೌಕರರು, ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಸದಸ್ಯರು, ಜಂಟಿ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದ ತಹಸೀಲ್ದಾರ್ ಅವರನ್ನು ನಿವೃತ್ತ ಶಿಕ್ಷಕ ವೆಂಕಟಾಚಲಪತಿ ಪೊಲೀಸರ ಸಮ್ಮುಖದಲ್ಲೇ ಅವಾಚ್ಯವಾಗಿ ನಿಂದಿಸಿ, ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಅತ್ಯಂತ ಘೋರ ಎಂದು ಖಂಡಿಸಿದರು.

    ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭ ಇಂಥ ಹಲವಾರು ಘಟನೆ ಸಂಭವಿಸುತ್ತಿರುತ್ತವೆಯಾದರೂ ಕಠಿಣ ಕ್ರಮದ ಕೊರತೆಯಿಂದಾಗಿ ಸರ್ಕಾರಿ ನೌಕರರು ಭಯದ ವಾತಾವರಣದಲ್ಲೇ ಕೆಲಸ ಮಾಡುವಂತಾಗಿದೆ. ಸರ್ಕಾರ ಶೀಘ್ರ ಗತಿಯಲ್ಲಿ ತನಿಖೆ ಮುಗಿಸಿ ಜೀವಾವಧಿ ಶಿಕ್ಷಕೆಗೆ ಒಳಪಡಿಸಬೇಕು. ಮುಂದೆ ಇಂಥ ಕೃತ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಶಾಸನ ರೂಪಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.

    ಸರ್ಕಾರಿ ಸಂಘದ ಅಧ್ಯಕ್ಷ ಶಂಭೂಗೌಡ, ತಮ್ಮಣ್ಣಗೌಡ, ಮಂಜುನಾಥ್, ಕೃಷ್ಣಯ್ಯ, ಶ್ರೀನಿವಾಸ್, ದೇವರಾಜು, ಗೋಪಾಲ್, ರಮೇಶ್, ಮೂಗುರೇಗೌಡ ಮತ್ತಿತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts