More

    ಚಹಾ ಕುಡಿಯುವಾಗ ಹೊಳೆದಿತ್ತು ಐಪಿಎಲ್ ಆಟಗಾರರ ಹರಾಜು ಕಾನ್ಸೆಪ್ಟ್!

    ನವದೆಹಲಿ: ಬಹುಬೇಡಿಕೆಯ ವಸ್ತುಗಳನ್ನು ಹರಾಜಿಗೆ ಇಡುವುದು ಸಾಮಾನ್ಯ ಸಂಗತಿ. ಆದರೆ ಕ್ರಾಂತಿಕಾರಿ ಟಿ20 ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಂಡಾಗ ಕ್ರಿಕೆಟ್ ಆಟಗಾರರನ್ನೇ ಹರಾಜಿಗೆ ಇಟ್ಟಿದ್ದು ಬಹಳ ವಿಚಿತ್ರ ಎನಿಸಿತ್ತು. ಕ್ರಿಕೆಟಿಗರನ್ನು ಹರಾಜಿಗೆ ಇಡುವ ಈ ಕಾನ್ಸೆಪ್ಟ್ ಹೇಗೆ ಹುಟ್ಟಿಕೊಂಡಿತ್ತು ಎಂಬ ಬಗ್ಗೆ ಐಪಿಎಲ್ ಮಾಜಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ (ಸಿಒಒ) ಸುಂದರ್ ರಾಮನ್ ವಿವರಣೆ ನೀಡಿದ್ದಾರೆ.

    ಇದನ್ನೂ ಓದಿ: ಶಾರ್ದೂಲ್ ಠಾಕೂರ್ ಜತೆ ಡೇಟಿಂಗ್ ಹೋಗ್ತಾರಂತೆ ಸುರೇಶ್ ರೈನಾ!

    ‘ನಾವು ಫ್ರಾಂಚೈಸಿಗಳನ್ನು ಮಾರಾಟ ಮಾಡಿದ್ದೆವು. ಟೂರ್ನಿಯ ದಿನಾಂಕ ನಿಗದಿಪಡಿಸಿದ್ದೆವು. ತಂಡಗಳು ಎಲ್ಲೆಲ್ಲಿ ಆಡಬೇಕು ಎಂಬುದನ್ನು ನಿರ್ಧರಿಸಿದ್ದೆವು. ಆದರೆ ಆಟಗಾರರನ್ನು ವಿವಿಧ ತಂಡಗಳಿಗೆ ಹಂಚಿಕೆ ಮಾಡುವುದು ಹೇಗೆ ಎಂಬುದು ಇನ್ನೂ ನಿರ್ಧಾರವಾಗಿರಲಿಲ್ಲ. ಈ ಬಗ್ಗೆ ಚರ್ಚಿಸುತ್ತ ಸಂಜೆಯವರೆಗೂ ಮಾತುಕತೆ ಮುಂದುವರಿದಿತ್ತು. ಕೊನೆಗೆ ಸಂಜೆ ಚಹಾ ವಿರಾಮದ ವೇಳೆಗೆ ಫ್ರಾಂಚೈಸಿಯೊಂದರ ಮಾಲೀಕರು, ನೀವು ಯಾಕೆ ಆಟಗಾರರನ್ನು ಹರಾಜಿಗೆ ಇಡಬಾರದು ಎಂದು ಪ್ರಶ್ನಿಸಿದ್ದರು. 2 ನಿಮಿಷಗಳ ಆಲೋಚನೆಯ ಬಳಿಕ ಇದೊಂದು ಉತ್ತಮ ಉಪಾಯ ಎಂದು ನಾನು ಹೇಳಿದೆ. ಇದರಿಂದ ಸಾಕಷ್ಟು ಕುತೂಹಲ ಹುಟ್ಟಿಕೊಳ್ಳುತ್ತದೆ ಎಂದೆ. ಅದರ ಬೆನ್ನಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ನಿರ್ಧಾರ ಕೈಗೊಂಡೆವು’ ಎಂದು ಸುಂದರ್ ರಾಮನ್ ಯುಟ್ಯೂಬ್ ಚಾನಲ್ ಒಂದರ ಜತೆಗೆ ಮಾತನಾಡುತ್ತ ವಿವರಿಸಿದ್ದಾರೆ.

    ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಫಿಕ್ಸಿಂಗ್ ಆರೋಪ ಹೊರಿಸಿ ಉಲ್ಟಾ ಹೊಡೆತ ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ

    ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ಆಗಿನ ಭಾರತ ತಂಡದ ಕೆಲ ಪ್ರಮುಖ ಆಟಗಾರರನ್ನು ಮಾರ್ಕೀ ಆಟಗಾರರನ್ನಾಗಿ ಮಾಡಿ ಅವರ ತವರು ರಾಜ್ಯದ ತಂಡಗಳಿಗೆ ಹಂಚಿಕೆ ಮಾಡಲಾಗಿತ್ತು. ಸಚಿನ್ ತೆಂಡುಲ್ಕರ್ ಅವರು ತವರು ಮುಂಬೈ ಹೊರತಾಗಿ ಬೇರೆ ತಂಡದ ಪರ ಆಡಲು ಒಪ್ಪಲಾರರು ಎಂಬ ಲೆಕ್ಕಾಚಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಸುಂದರ್ ರಾಮನ್ ಹೇಳಿದ್ದಾರೆ.

    ಧೋನಿ ಚೆನ್ನೈ ತಂಡ ಸೇರಿದ್ದು ಹೇಗೆ?

    ಚಹಾ ಕುಡಿಯುವಾಗ ಹೊಳೆದಿತ್ತು ಐಪಿಎಲ್ ಆಟಗಾರರ ಹರಾಜು ಕಾನ್ಸೆಪ್ಟ್!

    2008ರಲ್ಲಿ ನಡೆದ ಐಪಿಎಲ್ ಟೂರ್ನಿಯ ಮೊದಲ ಹರಾಜು ಪ್ರಕ್ರಿಯೆಯಲ್ಲಿ ಆಗಿನ ಟಿ20 ನಾಯಕ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡಿದ್ದು ಹೇಗೆ ಎಂಬ ಬಗ್ಗೆಯೂ ಸುಂದರ್ ರಾಮನ್ ವಿವರಣೆ ನೀಡಿದ್ದಾರೆ. ಆಗ ಸಚಿನ್ ಮುಂಬೈ, ಯುವರಾಜ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ವೀರೇಂದ್ರ ಸೆಹ್ವಾಗ್ ಡೆಲ್ಲಿ, ರಾಹುಲ್ ದ್ರಾವಿಡ್ ಆರ್‌ಸಿಬಿ ಮತ್ತು ಸೌರವ್ ಗಂಗೂಲಿ ಕೋಲ್ಕತ ನೈಟ್‌ರೈಡರ್ಸ್‌ಗೆ ಮಾರ್ಕೀ ಆಟಗಾರರಾಗಿದ್ದರು. ಆದರೆ ಚೆನ್ನೈ ಸೂಪರ್‌ಕಿಂಗ್ಸ್‌ಗೆ ಯಾವುದೇ ಮಾರ್ಕೀ ಆಟಗಾರ ಇರಲಿಲ್ಲ. ಹೀಗಾಗಿ ಆ ತಂಡದ ಬಳಿ ಬಿಡ್ ಮಾಡಲು ಹೆಚ್ಚಿನ ಮೊತ್ತವಿತ್ತು. ಹೀಗಾಗಿ ಸಿಎಸ್‌ಕೆ ತಂಡ ಇತರೆಲ್ಲ ತಂಡಗಳ ಪೈಪೋಟಿಯನ್ನು ಮೀರಿ ಧೋನಿಗೆ ಹೆಚ್ಚಿನ ಬಿಡ್ ಸಲ್ಲಿಸಲು ಯಶಸ್ವಿಯಾಗಿತ್ತು ಎಂದು ಸುಂದರ್ ರಾಮನ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts