More

    ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​

    ನವದೆಹಲಿ: ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ಇನ್ನಿಲ್ಲದ ವೇಗದಲ್ಲಿ ಹಬ್ಬುತ್ತಿದೆ. ನೂರು, ಸಾವಿರ ಲೆಕ್ಕದಲ್ಲಿರುತ್ತಿದ್ದ ಹೊಸ ಕೇಸ್​ಗಳ ಸಂಖ್ಯೆಯೀಗ ದಿನವೂ 10 ಸಾವಿರದ ಆಸುಪಾಸಿನಲ್ಲಿ ಹೆಚ್ಚಾಗುತ್ತಿದೆ.

    ಪ್ರಸ್ತುತ ಕರೊನಾ ಪ್ರಕರಣಗಳ ಸಂಖ್ಯೆ 3 ಲಕ್ಷ ಸಮೀಪಿಸುತ್ತಿದೆ. ಹೀಗಾಗಿ ಇದನ್ನು ನಿಯಂತ್ರಿಸಲು ದೇಶಾದ್ಯಂತ ಜೂನ್​ 15ರಿಂದ ಮತ್ತೊಂದು ಸುತ್ತಿನ ಸಂಪೂರ್ಣ ಲಾಕ್​ಡೌನ್​ ವಿಧಿಸಲಾಗುತ್ತಿದೆ ಎಂಬ ಸುದ್ದಿ ಭಾರಿ ವೈರಲ್​ ಆಗಿದೆ.

    ಇದನ್ನೂ ಓದಿ; 80 ವರ್ಷಗಳಲ್ಲಿ ಆಗದ್ದು ಮೂರೇ ತಿಂಗಳಲ್ಲಿ ಸಾಧ್ಯವಾಯ್ತು; ಎಲ್ಲವೂ ಲಾಕ್​ಡೌನ್​ ಮಹಿಮೆ

    ಆರ್ಥಿಕ ಚಟುವಟಿಕೆಗಳಿಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಿ ಜನ ಹಾಗೂ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹೀಗಿರುವಾಗ ಮತ್ತೊಂದು ಸುತ್ತಿನ ಲಾಕ್​​ಡೌನ್​ ಸುದ್ದಿ ಸಹಜವಾಗಿಯೇ ಜನಸಾಮಾನ್ಯರನ್ನು ಆತಂಕಕ್ಕೆ ತಳ್ಳಿದೆ.

    ಜೂನ್​ 15ರಿಂದ ಮತ್ತೊಮ್ಮೆ ಲಾಕ್​ಡೌನ್​ ವಿಧಿಸುವ ಸಂಭವವಿದೆ. ಕೇಂದ್ರ ಗೃಹ ಸಚಿವಾಲಯವೇ ಇಂಥದ್ದೊಂದು ಸೂಚನೆ ನೀಡಿದೆ. ರೈಲು ಹಾಗೂ ವಿಮಾನಗಳ ಸಂಚಾರ ರದ್ದಾಗಲಿದೆ ಎಂದು ವೈರಲ್​ ಸುದ್ದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಾರ್ವಡ್​ ಆಗುತ್ತಿದ್ದು, ಗೂಗಲ್​ನಲ್ಲಿ ಭಾರಿ ಶೋಧಕ್ಕೊಳಗಾಗಿದೆ.

    ಇದನ್ನೂ ಓದಿ; ಬಿಸಿಲಲ್ಲಿ ಒಣಗೋದಕ್ಕೂ ಕರೊನಾ ತಗಲೋದಕ್ಕೂ ಸಂಬಂಧ ಇದೆ….!

    ಆದರೆ, ಇಂಥದ್ದೊಂದು ಸುದ್ದಿಯನ್ನು ಸುಳ್ಳು ಎಂದು ಪ್ರೆಸ್​ ಟ್ರಸ್ಟ್​ ಬ್ಯೂರೋದ ಫ್ಯಾಕ್ಟ್​ಚೆಕ್​ ತಿಳಿಸಿದೆ. ಸುದ್ದಿಸಂಸ್ಥೆಯೊಂದರಿಂದ ಹೊರಡಿಸಲಾಗಿದೆ ಎಂಬ ವರದಿಯು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದೆ.

    ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್​; ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಗಂಗೂಲಿ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts