More

    ಕೆಪಿಸಿಸಿ ವಕ್ತಾರರ ವಿರುದ್ಧ ಜಿಲ್ಲಾಧ್ಯಕ್ಷರಿಗೆ ದೂರು

    ಶಿವಮೊಗ್ಗ: ಕೆಪಿಸಿಸಿ ವಕ್ತಾರರ ವಿರುದ್ಧವೇ ಕಾಂಗ್ರೆಸ್ ಮುಖಂಡರು ಪಕ್ಷದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಬಳಿ ದೂರುಗಳ ಸರಮಾಲೆಯನ್ನೇ ಕೊಂಡೊಯ್ದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಸಿ.ಯೋಗೇಶ್ ಯಾರು? ಎಂದು ಪ್ರಶ್ನೆ ಮಾಡಿದ್ದ ಆಯನೂರು ಮಂಜುನಾಥ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

    ಯೋಗೇಶ್ ಯಾರು? ಎಂದು ಸುದ್ದಿಗೋಷ್ಠಿಯಲ್ಲಿ ಲಘುವಾಗಿ ಮಾಧ್ಯಮದವರನ್ನು ಪ್ರಶ್ನಿಸಿದ ಆಯನೂರು ಬಗ್ಗೆ ಈಗ ಸ್ವಪಕ್ಷೀಯರು ತಿರುಗಿ ಬಿದ್ದಿದ್ದಾರೆ. ಆರು ತಿಂಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಏಳು ಸಾವಿರ ಮತ ಪಡೆದ ಆಯನೂರು, ತಮ್ಮ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಎಚ್.ಸಿ.ಯೋಗೇಶ್ 70 ಸಾವಿರ ಮತ ಪಡೆದಿರುವುದನ್ನು ಮರೆತಿದ್ದಾರೆ ಎಂದು ಹಲವು ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
    ಆರು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಬಂದಿರುವ ಆಯನೂರು ಮಂಜುನಾಥ್, ಎಲ್ಲಿ ರಾಜಕೀಯದಲ್ಲಿ ಮೂಲೆಗುಂಪು ಆಗುತ್ತೇನೋ ಎನ್ನುವ ಆತಂಕದಿಂದ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿನ್ನೂ ಬಿಜೆಪಿ ಮನಸ್ಥಿತಿಯಿಂದ ಹೊರ ಬಂದಂತಿಲ್ಲ. ಸುದ್ದಿಗೋಷ್ಠಿಗಳಲ್ಲಿ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ಮಾತ್ರ ಆಯನೂರು ವಾಗ್ದಾಳಿ ನಡೆಸುತ್ತಾರೆ. ಉಳಿದ ನಾಯಕರ ಬಗ್ಗೆ ಮೃದು ದೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
    ಈ ಹಿಂದೆ ಬಿಜೆಪಿಯಲ್ಲಿದ್ದಾಗ ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕ, ಸಿದ್ದರಾಮಯ್ಯ ಮುಂತಾದವರನ್ನು ಆಯನೂರು ಮಂಜುನಾಥ್ ಮನಸ್ಸಿಗೆ ಬಂದಂತೆ ಟೀಕಿಸುತ್ತಿದ್ದರು. ಈಗಲೂ ಅವರ ಬಿಜೆಪಿ ಮನಸ್ಥಿತಿ ಬದಲಾದಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts