More

    ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರ, ಕೊಟ್ಟೂರು ತಹಸೀಲ್ದಾರ್ ಅನಿಲ್ ಕುಮಾರ್ ಮಾಹಿತಿ

    ಕೊಟ್ಟೂರು: ಕಂದಾಯ ಇಲಾಖೆ ಮತ್ತು ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಸ್ವರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಯುವವರಿಗೆ ಉಚಿತ ತರಬೇತಿ ಕಾರ್ಯಾಗಾರ ಶೀಘ್ರ ಹಮ್ಮಿಕೊಳ್ಳಲಾಗುವುದು ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಹೇಳಿದರು.

    ಶುಕ್ರವಾರ ಸಂಜೆ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಗ್ರಂಥಾಲಯದಲ್ಲಿ ಓದುಗರರ ಸಂಖ್ಯೆ ಹೆಚ್ಚಿದೆ. ಆದರೆ ಸ್ಥಳಾವಕಾಶದ ಕೊರತೆ ಇರುವುದನ್ನು ಮನಗಂಡು ಬೇಸರ ವ್ಯಕ್ತಪಡಿಸಿದರು.

    ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಗ್ರಾಮೀಣ ಮತ್ತು ಪಟ್ಟಣದ ಯುವಕ-ಯುವತಿಯರಿಗೆ ಉಚಿತ ತರಬೇತಿ ಕಾರ್ಯಾಗಾರ ಏರ್ಪಡಿಸಿ ಕೆಎಎಸ್, ಐಎಎಸ್ ತೇರ್ಗಡೆ ಹೊಂದಿದವರಿಂದ ಬೋಧನೆ ಕೊಡಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ 50ಕ್ಕೂ ಹೆಚ್ಚು ಜನರು ಗ್ರಂಥಾಲಯದಲ್ಲಿ ಹೆಸರು ನೋಂದಾಯಿಸಿಕೊಂಡರೆ ತರಬೇತಿಗಾಗಿ ಪ್ರತ್ಯೇಕ ಸ್ಥಳ ಆಯ್ಕೆ ಮಾಡಲಾಗುವುದು. ಅಲ್ಲದೆ ಸ್ವಂತ ಖರ್ಚಿನಲ್ಲಿ ಸ್ಪರ್ಧಾತ್ಮಕ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಲಾಗುವುದು ಎಂದ ಅವರು, ಎರಡು ಕಂಪ್ಯೂಟರ್ ಹಾಗೂ ಯುಪಿಸಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಬಳಿಕ ಓದುಗರಿಂದ ಗ್ರಂಥಾಲಯದ ಮಾಹಿತಿ ಪಡೆದರು. ಅಲ್ಲದೆ ಗ್ರಂಥಾಲಯದ ಸದಸ್ಯತ್ವ ಪಡೆದರು. ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts