More

    ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಬಳಕೆ ಅಗತ್ಯ

    ಬೆಳಗಾವಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಅಗತ್ಯವಾಗಿದೆ. ಯುವಕರು ತಂತ್ರಜ್ಞಾನ ಬಳಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಅಭಿಪ್ರಾಯಪಟ್ಟರು.

    ನಗರದ ಕೇಂದ್ರ ಗ್ರಂಥಾಲಯದಲ್ಲಿ ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ನೊಂದಣಿ ಅಭಿಯಾನದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸದ್ಯ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯದಲ್ಲಿ 9 ಲಕ್ಷಕ್ಕೂ ಅಧಿಕ ಜನ ನೋಂದಣಿ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 13,400 ನೋಂದಣಿಯಾಗಿದೆ. ಈ ಡಿಜಿಟಲ್ ವೇದಿಕೆಯನ್ನು ವೆಬ್ ಆಧಾರಿತವಾಗಿ ಡಿಡಿಡಿ.ಚ್ಟ್ಞಠಿಜಿಜಜಿಠಿಚ್ಝಟ್ಠಚ್ಝಿಜ್ಚ್ಝಿಜಿಚ್ಟಿಚ್ಟಟ್ಟಜ/್ಝಟಜಜ್ಞಿ ಮತ್ತು ಆ್ಯಪ್ ಆಧಾರಿತವಾಗಿ ಛಿ.ಖಚ್ಟಚ್ಜಚ್ಞಜಿಎ್ಟಚ್ಞಠಿಚ್ಝ ಬಳಕೆ ಮಾಡಿಕೊಳ್ಳಬಹುದು ಎಂದರು.

    ವೆಬ್‌ನಲ್ಲಿ ಲಭ್ಯವಿರುವ ಎಲ್ಲ ವಿಷಯಗಳು ಆ್ಯಪ್‌ನಲ್ಲಿಯೂ ಲಭ್ಯವಾಗುತ್ತವೆ. ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೌಡ್ ಮಾಡಿಕೊಂಡರೆ, ನೇರ ಡಿಜಿಟಲ್ ಗ್ರಂಥಾಲಯದೊಳಗೆ ಪ್ರವೇಶ ಮಾಡಿದಂತೆ ಎಂದರು.

    ವಿದ್ಯಾರ್ಥಿಗಳ ಅನುಕೂಲಕ್ಕಾಗಿ 61,500 ದೇಶಿಯ, ಅಂತಾರಾಷ್ಟ್ರೀಯ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಈ ಡಿಜಿಟಲ್ ಗ್ರಂಥಾಲಯದಲ್ಲಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿ ಡಾ.ಸತೀಶಕುಮಾರ ಅವರನ್ನು ಸನ್ಮಾನಿಸಲಾಯಿತು. ಉಪನಿರ್ದೇಶಕ ರಾಮಯ್ಯ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಉಪನಿರ್ದೇಶಕ ಡಿ.ಎ.ಕುಲಕರ್ಣಿ, ಎ.ಎ.ಕಾಂಬಳೆ, ಇ.ಎನ್.ಅಂಬೇಕರ, ನೀಲಮ್ಮ ಪಟ್ಟೇದ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts