More

    ಹೆಣ್ಣು ಮಕ್ಕಳಿಗೆ ಧೈರ್ಯ ಅಗತ್ಯ

    ಅಳವಂಡಿ: ಸಮಾಜದಲ್ಲಿ ಹೆಣ್ಣು ಎದುರಿಸುತ್ತಿರುವ ತಾರತಮ್ಯ ಹೋಗಲಾಡಿಸಲು ನಾಯಕತ್ವ ಹಾಗೂ ಸಂವಹನ ಕೌಶಲ ಅಗತ್ಯ ಎಂದು ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಕ್ಷೇತ್ರ ಸಂಯೋಜಕಿ ಸುಷ್ಮಾ ಸಂಗರಡ್ಡಿ ತಿಳಿಸಿದರು.

    ಇದನ್ನೂ ಓದಿ:

    ಬೆಳಗಟ್ಟಿ ಗ್ರಾಮದಲ್ಲಿ ಕೆಎಚ್‌ಪಿಟಿದಿಂದ ನಡೆದ ನಾಯಕತ್ವ ಮತ್ತು ಸಂವಹನ ಶಿಬಿರದಲ್ಲಿ ಸೋಮವಾರ ಮಾತನಾಡಿದರು. ಹೆಣ್ಣುಮಕ್ಕಳು ಕಠಿಣ ಪರಿಸ್ಥಿತಿಗಳನ್ನ ನಿಭಾಯಿಸುವ ಗುಣ ಬೆಳಸಿಕೊಳ್ಳಬೇಕು.

    ಸಮಸ್ಯೆಗಳನ್ನು ಧೈರ್ಯವಾಗಿ ಆತ್ಮವಿಶ್ವಾಸದಿಂದ ಎದುರಿಸಬೇಕು. ಹೆಣ್ಣಿಗೆ ಸಿಗಬೇಕಾದ ಗೌರವ, ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿ ಎಂದರು. ವಿವಿಧ ಸ್ಪರ್ಧೆಗಳ ಮೂಲಕ ಕೌಶಲ ವೃದ್ಧಿ ತರಬೇತಿ ನೀಡಲಾಯಿತು.

    ಗ್ರಾಪಂ ಅಧ್ಯಕ್ಷೆ ಪರವಿನಬಾನು ಆಲೂರ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ವಿಧ್ಯಾಬ್ಯಾಸವನ್ನು ಅರ್ಧದಲ್ಲಿ ನಿಲ್ಲಿಸುವ ಬದಲು ಉನ್ನತ ಶಿಕ್ಷಣ ಪಡೆಯಬೇಕು. ಹೆಣ್ಣು ಮಕ್ಕಳನ್ನು ಸಬಲರನ್ನಾಗಿಸಬೇಕು ಎಂದರು. ಕೆಎಚ್‌ಪಿಟಿ ಸಮುದಾಯ ಸಂಘಟಕರಾದ ಯಲ್ಲಪ್ಪ ಮೆಣೆಗಾರ, ಅರುಣಾ, ಗಾಯತ್ರಿ, ಪವಿತ್ರಾ, ಅನಿತಾ, ಇಂದಿರಾ, ಪೂಜಾ, ಅಕ್ಷತಾ, ಶಿಲ್ಪಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts