More

    ಸಿದ್ದು-ಡಿಕೆ ಬೆಂಬಲಿಗರ ಹೈಡ್ರಾಮಾ: ಪೊಲೀಸರೊಂದಿಗೂ ಅಭಿಮಾನಿಗಳ ಸಂಘರ್ಷ

    ಬೆಂಗಳೂರು: ಮುಖ್ಯಮಂತ್ರಿ ರೇಸ್‌ನಲ್ಲಿರುವ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬೆಂಬಲಿಗರು ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿರುವ ಹೋಟೆಲ್‌ ಮುಂದೆ ಪರಸ್ಪರ ಘೋಷಣೆ ಹಾಕಿ ಪೈಪೋಟಿಗಿಳಿದ ಪ್ರಸಂಗ ನಡೆಯಿತು.

    ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಕರೆದಿರುವ ಸಭೆಗೆ ಎಐಸಿಸಿ ನಿಯೋಜಿಸಿರುವ ಮೂವರು ವೀಕ್ಷಕರು ಆಗಮಿಸಿದ್ದು, ಹೋಟೆಲ್‌ನಲ್ಲಿ ಸಭೆ ನಡೆಸುತ್ತಿದ್ದರು.

    ಈ ನಡುವೆ ಸಭೆ ಆರಂಭಕ್ಕೆ ಎರಡು ತಾಸು ಮುಂಚೆಯೇ ಜಮಾಯಿಸಿದ್ದ ಡಿಕೆಶಿ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಘೋಷಣೆ ಮೊಳಗಿಸಲಾರಂಭಿಸಿದರು. ಡಿಕೆ ಡಿಕೆ.. ಎಂದು ಒಂದು ಬಣ ಕೂಗಿದರೆ, ಮತ್ತೊಂದು ಬಣ ಸಿದ್ದು ಸಿದ್ದು.. ಎಂದು ಅಬ್ಬರಿಸಿತು.

    ಇದನ್ನೂ ಓದಿ: ಚುನಾವಣಾ ಫಲಿತಾಂಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ಅಭ್ಯರ್ಥಿ ನಿರ್ಧಾರ

    ಮಾಧ್ಯಮದವರು ಪ್ರತಿಕ್ರಿಯೆ ಪಡೆಯುವಾಗಲೂ ಎರಡೂ ಬಣದವರು ಕೂಗಿ ಅಡ್ಡಿ ಪಡಿಸುತ್ತಿದ್ದರು. ಎರಡೂ ಬಣದವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಹಾಗೆಯೇ ಶಾಸಕಾಂಗ ಪಕ್ಷ ನಡೆದಿರುವ ಹೋಟೆಲ್‌ಗೆ ಬರುವ ಗ್ರಾಹಕರು ಪರದಾಡಬೇಕಾಯಿತು.

    ಇದನ್ನೂ ಓದಿ: ಜಗತ್ತು ನಿಮ್ಮನ್ನು ತಿರಸ್ಕರಿಸಿದರೂ..: ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಮ್ಮನ ಬಳಿಗೆ ತೆರಳಿ ಹೀಗಂದಿದ್ದೇಕೆ?

    ಹೀಗೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿರುವ ಹೋಟೆಲ್ ಮುಂದೆ ಎರಡೂ ಬಣಗಳ ಹೈಡ್ರಾಮಾ ಮುಂದುವರಿದು ಪೈಪೋಟಿ ತೀವ್ರಗೊಂಡ ಕಾರಣ ಹೆಚ್ಚಿನ ಪೊಲೀಸ್ ಪಡೆ ಆಗಮನವಾಯಿತು. ತಮ್ಮನ್ನು ಚದುರಿಸಲು ಮುಂದಾದ ಪೊಲೀಸರೊಂದಿಗೂ ಅಭಿಮಾನಿಗಳು ಸಂಘರ್ಷ ನಡೆಸಿದರು.

    ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ: ಸಿಎಂ ಆಯ್ಕೆ ಕುರಿತು ಆಯ್ತು ಈ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts