More

    ಅಡಕೆ ಟಾಸ್ಕ್​ಫೋರ್ಸ್​ಗೆ 10 ಕೋಟಿ ರೂ. ಬಿಡುಗಡೆ

    ಶಿವಮೊಗ್ಗ: ಅಡಕೆ ಕಾರ್ಯಪಡೆಯ ಚಟುವಟಿಕೆಗೆ ರಾಜ್ಯ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅನುದಾನವು ಅಡಕೆ ಬೆಳೆಗಿರುವ ಸಂದಿಗ್ಧತೆ ನಿವಾರಣೆ ಜತೆಗೆ ಕಾರ್ಯಚಟುವಟಿಕೆಗೂ ಸಹಕಾರಿಯಾಗಲಿದೆ ಎಂದು ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದರು.

    ಮೂರು ದಿನಗಳ ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ದೇಶನದಂತೆ ತೋಟಗಾರಿಕೆ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಅಡಕೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗೆ ಅನುದಾನ ಬಳಸಿಕೊಳ್ಳಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಕಾರ್ಯಪಡೆ ಜತೆಗೆ ಅಡಕೆ ಬೆಳೆಗಾರರ ಒಕ್ಕೂಟವನ್ನೂ ರಚಿಸಲಾಗಿದೆ. ಅಡಕೆ ಬೆಳೆಗಿರುವ ಸಂಕಷ್ಟ ನಿವಾರಿಸಲು 10 ಕೋಟಿ ರೂ. ಅನ್ನು ಹಂತ ಹಂತವಾಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

    ಅಡಕೆಯಲ್ಲಿ ಕ್ಯಾನ್ಸರ್ ಅಂಶಗಳಿದ್ದು ಅದು ಆರೋಗ್ಯಕ್ಕೆ ಹಾನಿಕರ’ ಎಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಪ್ರೀಂಕೋರ್ಟ್​ಗೆ ವರದಿ ಕೊಡಲಾಗಿತ್ತು. ಇದೀಗ ಬಿಜೆಪಿ ಸರ್ಕಾರ ಬಂದಿದ್ದರೂ ಆ ವರದಿ ಹಿಂಪಡೆಯಲು ಸಂಶೋಧನಾ ವರದಿಯ ಅಗತ್ಯವಿದೆ. ಅದಕ್ಕಾಗಿ ಈಗಾಗಲೇ ಬೆಂಗಳೂರಿನ ರಾಮಯ್ಯ ಕಾಲೇಜ್ ಆಫ್ ಅಪ್ಲಾಯಿಡ್ ಸೈನ್ಸ್​ಗೆ 8 ತಿಂಗಳಲ್ಲಿ ವರದಿ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿರುವ ಕಾರಣ ಹಿರಿಯ ವಕೀಲರನ್ನೇ ನಿಯೋಜಿಸಬೇಕಿದೆ ಎಂದು ಹೇಳಿದರು.

    ಅಡಕೆ ಮಾರಾಟ ಸಹಕಾರ ಮಹಾಮಂಡಳದ ಅಧ್ಯಕ್ಷ ಕೊಂಕೊಡಿ ಪದ್ಮನಾಭ, ಮ್ಯಾಮ್ೋಸ್ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ, ಕಾರ್ಯಪಡೆ ಸದಸ್ಯ ಶಿವಕುಮಾರ್, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ, ತುಮ್ಕೋಸ್ ಅಧ್ಯಕ್ಷ ರವಿ, ಸಾಗರದ ದೇವಪ್ಪ, ಗಿರಿ, ಸುಬ್ರಾಯ ಹೆಗಡೆ, ಸದಾಶಿವಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts