More

    ಮೈಸೂರು ಬಳಿ ಭೀಕರ ಅಪಘಾತ ಪ್ರಕರಣ: ಮೃತ 10 ಜನರ ಪೈಕಿ 7 ಮಂದಿಗೆ ಮಾತ್ರ ಪರಿಹಾರ, ವೃದ್ಧೆ ಕಂಗಾಲು

    ಬಳ್ಳಾರಿ: ಮೈಸೂರಿನ ಕುರುಬೂರು ಬಳಿ ಕಾರು ಮತ್ತು ಖಾಸಗಿ ಬಸ್​ ನಡುವೆ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 10 ಜನರ ಪೈಕಿ ಏಳು ಜನರ ಸಾವಿಗೆ ಮಾತ್ರ ಸರ್ಕಾರ ಪರಿಹಾರ ನೀಡಿದ್ದು, ಉಳಿದ ಮೂವರ ಸಾವಿಗೆ ಪರಿಹಾರ ನೀಡದೇ ಮೀನಾಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಮೇ 29 ರಂದು ಮೈಸೂರಿನ ಟಿ. ನರಸೀಪುರ ತಾಲೂಕಿನ ಕುರುಬೂರು ಬಳಿ ಅಪಘಾತ ನಡೆದಿತ್ತು. ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದ 12 ಮಂದಿ ಪ್ರವಾಸ ಹೋಗಿದ್ದಾಗ ಈ ಭೀಕರ ಅಪಘಾತ ಸಂಭವಿಸಿತು. ಮೈಸೂರಿನ ಕಾರು ಚಾಲಕ ಸೇರಿ 11 ಮಂದಿ ಮೃತಪಟ್ಟರು. ಈ ಪೈಕಿ 7 ಜನರಿಗೆ ಮಾತ್ರ ಪರಿಹಾರ ಸಿಕ್ಕಿದೆ.

    ಕುಟುಂಬ ಸದಸ್ಯರನ್ನು ಕಳೆದುಕೊಂಡು ಸಂಗನಕಲ್ಲು ಗ್ರಾಮದ ವೃದ್ಧೆ ಹಾಲಮ್ಮ ಕಣ್ಣೀರು ಹಾಕುತ್ತಿದ್ದಾರೆ. ಹಾಲಮ್ಮನ ಮಗಳು ಸುಜಾತ, ಅಳಿಯ ಕೊಟ್ರೇಶ್ ಹಾಗೂ ಮೊಮ್ಮಗ ಸಂದೀಪ ಮೂವರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇದೀಗ ತಾಂತ್ರಿಕ ಕಾರಣ ನೀಡಿ ಪರಿಹಾರ ನೀಡಲು ಸರ್ಕಾರ ವಿಳಂಬ ಮಾಡುತ್ತಿದೆ. ಈಗಾಗಲೇ ಇಡೀ ಕುಟುಂಬವನ್ನು ಕಳೆದುಕೊಂಡು ಹಾಲಮ್ಮ ಧಿಕ್ಕಿಲ್ಲದಂತಾಗಿದ್ದಾರೆ. ಇದೀಗ ಪರಿಹಾರವೂ ಇಲ್ಲದೇ ಸಾಕಷ್ಟು ಕಷ್ಟಪಡುತ್ತಿದ್ದಾರೆ.

    ಮೃತ ಕೊಟ್ರೇಶ್ ಹಾಗೂ ಪತ್ನಿ 6 ಲಕ್ಷ ರೂ. ಸಾಲ ಮಾಡಿದ್ದರಿಂದ ನಿತ್ಯ ಹಣ ಕೊಡುವಂತೆ ಸಾಲಗಾರರು ಮನೆಗೆ ಅಲೆಯುತ್ತಿದ್ದಾರೆ. ಆದರೆ, ಹಾಲಮ್ಮ ಮಗಳು, ಅಳಿಯ ಮತ್ತು ಮೊಮ್ಮಗನ ಕಳೆದುಕೊಂಡು ದುಖಃದಲ್ಲಿದ್ದಾರೆ. ಇದರ ಮಧ್ಯೆ ಸಾಲಗಾರರ ಕಾಟಕ್ಕೆ ಕಂಗಾಲಾಗಿದ್ದಾರೆ. ಸರ್ಕಾರ ಪರಿಹಾರ ಕೊಟ್ಟರೆ ಆ ಹಣದಲ್ಲಿ ಸಾಲ ತೀರಿಸುವೆ ಎಂದು ಹಾಲಮ್ಮ ಅಂಗಲಾಚುತ್ತಿದ್ದಾರೆ.

    ಅದೇ ಅಪಘಾದಲ್ಲಿ ಸಾವಿಗೀಡಾದ ಇನ್ನುಳಿದ 7 ಜನರಿಗೆ ತಲಾ ಎರಡು ಲಕ್ಷ ರೂ. ಹಣವನ್ನು ಸರ್ಕಾರ ಪರಿಹಾರವಾಗಿ ನೀಡಿದೆ.

    ಮೇ 29ರಂದು ಕೊಳ್ಳೇಗಾಲ, ಟಿ.ನರಸೀಪುರ ಮುಖ್ಯರಸ್ತೆಯ ಕುರುಬೂರು ಬಳಿ ಖಾಸಗಿ ಬಸ್ ಮತ್ತು ಇನೋವಾ ಕಾರು ನಡುವೆ ಈ ಭೀಕರ ಅಪಘಾತ ಸಂಭವಿಸಿತು. ಮೈಸೂರು ಪ್ರವಾಸಕ್ಕೆ ಬಳ್ಳಾರಿಯಿಂದ ಬಂದಿದ್ದವರು ದುರಂತದಲ್ಲಿ ಮೃತಪಟ್ಟರು. (ದಿಗ್ವಿಜಯ ನ್ಯೂಸ್​)

    ಜಲ್ಲಿಕಲ್ಲು, ಮರಳು ದುಬಾರಿ?: ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ರಾಜ್ಯ ಸರ್ಕಾರ ಸರ್ಕಸ್

    ಧರ್ಮಕ್ಕೇ ಜಯವೆಂಬ ದಿವ್ಯಮಂತ್ರ: ಮನೋಲ್ಲಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts