More

    ಸಂಕಷ್ಟದ ಸಂಕ್ರಮಣ ಕಾಲದಲ್ಲಿ ಕುರುಬ ಸಮಾಜ

    ಶಿಕಾರಿಪುರ: ಕುರುಬ ಸಮಾಜ ಇನ್ನೂ ಅಭಿವೃದ್ಧಿ ಕಾಣದೇ ಸಂಕಷ್ಟದ ಸಂಕ್ರಮಣ ಕಾಲದಲ್ಲಿದೆ. ಈಗ ಈ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೋರಾಟ ಆರಂಭವಾಗಿದ್ದು ಗುರಿಮುಟ್ಟುವವರೆಗೆ ವಿರಮಿಸುವುದಿಲ್ಲ ಎಂದು ಎಸ್ಟಿ ಹೋರಾಟ ಸಮಿತಿ ಖಜಾಂಚಿ ಕೆ.ಇ.ಕಾಂತೇಶ್ ಹೇಳಿದರು.

    ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಹೊಸಸಂತೆ ಮೈದಾನದಲ್ಲಿ ಜ.7ರಂದು ನಡೆಯವ ಶಿವಮೊಗ್ಗ ವಿಭಾಗ ಮಟ್ಟದ ಕುರುಬ ಸಮಾಜದ ಸಮಾವೇಶದ ಭಿತ್ತಿ ಪತ್ರಗಳನ್ನು ಶುಕ್ರವಾರ ಬಿಡುಗಡೆ ಮಾಡಿ ಮಾತನಾಡಿ, ಇದು ಸಮಾಜದ ಅಭಿವೃದ್ಧಿಗೆ ಗುರುಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ. ಇದರಲ್ಲಿ ಯಾವ ರಾಜಕೀಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

    ತಲೆತಲಾಂತರದಿಂದ ಅತ್ಯಂತ ಹಿಂದುಳಿದ ಕುರುಬ ಸಮಾಜಕ್ಕೆ ಸಲ್ಲಬೇಕಾಗಿರುವ ಎಸ್ಟಿ ಮೀಸಲಾತಿ ದೊರಕಿಸಿಕೊಡಲು ಸಮಾಜದ ಎಲ್ಲರೂ ಒಟ್ಟಾಗಿ ನಡೆಸುತ್ತಿರುವ ಜನಾಂದೋಲನ. ಸರ್ಕಾರ ಎಸ್ಟಿ ಮೀಸಲಾತಿ ಘೊಷಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

    ಕುರುಬ ಸಮಾಜದ ಮುಖಂಡರಾದ ಟಿ.ಎಸ್.ಮೋಹನ್, ಗೋಣಿ ಮಾಲತೇಶ್, ಭದ್ರಾಪುರ ಹಾಲಪ್ಪ, ಪುರಸಭೆ ಸದಸ್ಯರಾದ ಪ್ರಶಾಂತ್ ಜೀನಳ್ಳಿ, ಪ್ರಕಾಶ್, ಬಿ.ಎಲ್.ರಾಜು ಇತರರಿದ್ದರು.

    25 ಸಾವಿರ ಜನ: ಸಮಾವೇಶಕ್ಕೆ ಪೂರಕವಾಗಿ ತಾಲೂಕಿನಿಂದ ಸಮುದಾಯದ 10 ಸಾವಿರ ಜನ ಸೇರಲಿದ್ದಾರೆ. ಸಮಾವೇಶದಲ್ಲಿ 25,000ಕ್ಕೂ ಹೆಚ್ಚು ಜನ ಆಗಮಿಸಲಿದ್ದಾರೆ. ಇದೊಂದು ಹೋರಾಟದ ಅಡಿಪಾಯ. ಯಶಸ್ಸು ದೊರೆಯುವವರೆಗೆ ನಮ್ಮ ಹೆಜ್ಜೆಗಳು ನಿಲ್ಲುವುದಿಲ್ಲ. ಇದು ಸಮಾಜದ ಸಂಕಲ್ಪ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಣ್ಣ ಹೇಳಿದರು.

    ನಮ್ಮ ಹೋರಾಟದಲ್ಲಿ ಎಲ್ಲ ಪಕ್ಷದವರೂ ಇದ್ದಾರೆ. ನಮ್ಮ ಕಣ್ಮುಂದೆ ಎಸ್ಟಿ ಹೋರಾಟವಿದೆ. ಅದರ ಹೊರತಾಗಿ ಬೇರೇನೂ ಕಾಣುತ್ತಿಲ್ಲ. ಎಸ್ಟಿ ಹೋರಾಟಕ್ಕೆ ಪೂರಕವಾಗಿ ಕಾಗಿನೆಲೆಯಲ್ಲಿ ನಡೆದ ಮಹಿಳಾ ಸಮಾವೇಶ ಅದ್ಭುತವಾಗಿತ್ತು. ಶ್ರೀಗಳ ಮಾರ್ಗದರ್ಶನದಲ್ಲಿ ಎಸ್ಟಿ ಹೋರಾಟಕ್ಕೆ ಜಯ ಸಿಗಲಿದೆ.

    | ಕೆ.ಇ.ಕಾಂತೇಶ್, ಎಸ್ಟಿ ಹೋರಾಟ ಸಮಿತಿ ಖಜಾಂಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts