More

    ಆದಿದ್ರಾವಿಡ ಕಾಲನಿಗಿಲ್ಲ ಅಭಿವೃದ್ಧಿ ಸ್ಪರ್ಶ

    ಬೀರೂರು: ಪಟ್ಟಣದ 60 ವರ್ಷಗಳ ಹಳೆಯ ಆದಿದ್ರಾವಿಡ (ಎಡಿ)ಕಾಲನಿಯಲ್ಲಿ ಸೌಲಭ್ಯ ಇರುವುದಕ್ಕಿಂತ ಕೊರತೆಯೇ ದೊಡ್ಡದಿದೆ. ಅನುದಾನ ಬಂದರೂ ಬಳಸಿಕೊಳ್ಳದಿದ್ದರಿಂದ ಕಾಲನಿಗೆ ಅಭಿವೃದ್ಧಿ ಸ್ಪರ್ಶ ಸಿಕ್ಕಿಲ್ಲ.

    ಆದಿದ್ರಾವಿಡ ಕಾಲನಿಯಲ್ಲಿ 35 ಕುಟುಂಬಗಳಿವೆ. ಮೇಲ್ಭಾಗದಲ್ಲಿ ಸರಸ್ವತಿಪುರಂ, ಕೆಳಭಾಗದಲ್ಲಿ ಅಂಬೇಡ್ಕರ್ ಕಾಲನಿಗಳು ಬಹಳಷ್ಟು ಅಭಿವೃದ್ಧಿಗೊಳಿಸಲಾಗಿದೆ. ಆದರೆ ಆದಿದ್ರಾವಿಡ ಕಾಲನಿ ಅಭಿವೃದ್ಧಿಗೊಳಿಸಲು ಯಾರೂ ಮನಸ್ಸು ಮಾಡಿಲ್ಲ. ಗ್ರಂಥಾಲಯ, ಸಮುದಾಯ ಭವನ, ಅಂಗನವಾಡಿ, ಪಾರ್ಕ್ ಮತ್ತು ಸಂಪರ್ಕ ರಸ್ತೆಗಳು ಹೀಗೆ ಹಲವು ಅಗತ್ಯದ ಸೌಲಭ್ಯಗಳೇ ಇಲ್ಲ.

    ಸಮುದಾಯ ಭವನ ನಿರ್ವಣಕ್ಕಾಗಿ 2011-12ನೇ ಸಾಲಿನಲ್ಲಿ 10 ಲಕ್ಷ ರೂ. ಮಂಜೂರಾಗಿದ್ದರೂ ಪುರಸಭೆ ನಿವೇಶನ ಒದಗಿಸದಿದ್ದರಿಂದ ಹಣ ಬಳಕೆ ಸಾಧ್ಯವಾಗಲಿಲ್ಲ. ಅಂಗನವಾಡಿ ಕಟ್ಟಡ ನಿರ್ವಣಕ್ಕಾಗಿ 2012-13ನೇ ಸಾಲಿನಲ್ಲಿ ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಣ ಮಂಜೂರಾಗಿತ್ತು. ಅದನ್ನೂ ನಿರ್ವಿುಸಲಿಲ್ಲ. 2011-12ನೇ ಸಾಲಿನಲ್ಲಿ ಎಡಿ ಕಾಲನಿ ಪಾರ್ಕ್ ಅಭಿವೃದ್ಧಿಗೆ 6 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಪಾರ್ಕ್ ಅಭಿವೃದ್ಧಿ ವಿಳಂಬದಿಂದ 3 ಲಕ್ಷ ರೂ. ರಾಜಾಜಿನಗರ ಪಾರ್ಕ್ ಮತ್ತು 3 ಲಕ್ಷ ರೂ. ಮಾರ್ಗದಕ್ಯಾಂಪ್ ಪಾರ್ಕ್ ಅಭಿವೃದ್ಧಿಗೆ ಬಳಸಲಾಯಿತು.

    ಬಡಾವಣೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪಾರ್ಕ್ ಅನ್ನು ನಿರ್ಲಕ್ಷಿ್ಯದ್ದರಿಂದ ಕೆಲವರು ಅಕ್ರಮವಾಗಿ ಗುಡಿಸಲು ನಿರ್ವಿುಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ. ಈಗಲೂ ಪಾರ್ಕ್ ಜಾಗ ಖಾಸಗಿಯವರ ವಶದಲ್ಲಿದೆ.

    ಡಾ. ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ಗ್ರಂಥಾಲಯ ಕಟ್ಟಡಕ್ಕೆ 2012-13ನೇ ಸಾಲಿನಲ್ಲಿ 2.25 ಲಕ್ಷ ರೂ. ಮಂಜೂರಾಗಿದ್ದು 60 ಸಾವಿರ ರೂ. ಮೊತ್ತದ ಪುಸ್ತಕ ಮತ್ತು ಪೀಠೋಪಕರಣಗಳನ್ನು ಪುರಸಭೆ ಖರೀದಿ ಮಾಡಿದ್ದರೂ ಗ್ರಂಥಾಲಯ ಕಟ್ಟಡವಿಲ್ಲದೆ ಸರ್ಕಾರಿ ಶಾಲೆಯಲ್ಲಿ ಇಡಲಾಗಿದೆ. ಎಡಿ ಕಾಲನಿಯಿಂದ ಹಾಲಪ್ಪ ಬಡಾವಣೆ ಮಾರ್ಗವಾಗಿ ಅಜ್ಜಂಪುರ ರಸ್ತೆಗೆ ಹೋಗಲು ಬಡಾವಣೆ ನಕ್ಷೆಯಂತೆ 3 ಸಾರ್ವಜನಿಕ ರಸ್ತೆಗಳಿದ್ದು ಇಲ್ಲಿ ಬಲಾಢ್ಯರು ಮನೆಗಳನ್ನು ನಿರ್ವಿುಸಿಕೊಂಡಿದ್ದಾರೆ. ಹೀಗಾಗಿ ಸಂಚಾರಕ್ಕೂ ಅಡ್ಡಿಯಾಗಿದೆ. ಅಧಿಕಾರಿಗಳು ಗಮನಹರಿಸಿದರೆ ಮಾತ್ರ ಬಡಾವಣೆ ಅಭಿವೃದ್ಧಿಗೊಳಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts