More

    ಸಂವಹನ ಕೌಶಲಗಳಿದ್ದರೆ ಬದಕು ಸುಲಭ

    ಬೆಳಗಾವಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ ಆಧಾರಿತ ಶಿಕ್ಷಣದ ಜತೆಗೆ ಸಂವಹನ ಕೌಶಲ ಮತ್ತು ಉತ್ತಮ ಭಾಷಾ ಸಾಮರ್ಥ್ಯ ರೂಢಿಸಿಕೊಂಡರೆ ಮಾತ್ರ ವಿದ್ಯಾರ್ಥಿಗಳು ಜಗತ್ತಿನ ಯಾವುದೇ ಭಾಗದಲ್ಲಿ ಉದ್ಯೋಗ ಪಡೆದು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯ ಎಂದು ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ಎಂ.ರಾಮಚಂದ್ರಗೌಡ ಹೇಳಿದ್ದಾರೆ.

    ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ವತಿಯಿಂದ ‘ಜಾಗತಿಕ ಸ್ಪರ್ಧೆಗಾಗಿ ಸಂವಹನ ಕೌಶಲಗಳು’ ವಿಷಯ ಕುರಿತು ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರಮಟ್ಟದ ಆನ್‌ಲೈನ್,
    ಆಫ್‌ಲೈನ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಂವಹನ ಕೌಶಲ ಕೊರತೆಯಿಂದ ತಾವು ಪಡೆದ ಪದವಿಗೆ ತಕ್ಕ ಉದ್ಯೋಗ ಪಡಯಲು ಯುವ ಪೀಳಿಗೆಗೆ ಸಾಧ್ಯವಾಗುತ್ತಿಲ್ಲ.

    ಪದವೀಧರರಾಗಿದ್ದರೂ ಸಾಮಾನ್ಯ ರೈಲ್ವೆ ಗ್ಯಾಂಗ್‌ಮನ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವಶ್ಯ ಸಂವಹನ ಕೌಶಲ ಬೆಳೆಸಿಕೊಂಡಿದ್ದರೆ, ಉತ್ತಮ ಹುದ್ದೆ ಗಿಟ್ಟಿಸಿಕೊಳ್ಳಬಹುದು. ಜಗತ್ತಿನ ಯಾವುದೇ ಮೂಲೆಗೆ ಹೋದರೂ ಸಹ ಸಂವಹನ ಮುಖ್ಯ ಪಾತ್ರ ವಹಿಸುತ್ತದೆ. ಮುಂಬರುವ ದಿನಗಳಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿದೇಶಿ ಭಾಷಾ ಅಧ್ಯಯನ ವಿಭಾಗ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

    ಕೆಪಿಸಿಸಿ ಸದಸ್ಯ ಪ್ರೊ.ಎಂ.ಬಿ.ಹೆಗ್ಗಣ್ಣವರ, ಆರ್‌ಸಿಯು ಅಧ್ಯಾಪಕರ ಸಂಘದ ಅಧ್ಯಕ್ಷ ಶ್ರೀನಿವಾಸಗೌಡ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ, ಪ್ರೊ. ಎಂ.ಬಿ. ಸಂಗಾಪುರ ಅವರನ್ನು ಸತ್ಕರಿಸಲಾಯಿತು. ಕಾರ್ಯಾಗಾರದಲ್ಲಿ ಸಾವಿರಕ್ಕೂ ಹೆಚ್ಚು ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ನೋಂದಣಿ ಪಡೆದು ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಪ್ರಾಚಾರ್ಯ ಡಾ. ಎಂ.ಜಯಪ್ಪ, ಡಾ.ಶಾಂತಿ ವರದರಾಜನ್, ಸಹಾಯಕ ಪ್ರಾಧ್ಯಾಪಕಿ ಪೂಜಾ ಹಳ್ಯಾಳ, ಉಪಪ್ರಾಚಾರ್ಯ ಅನಿಲ ರಾಮದುರ್ಗ, ಡಾ.ಎಂ.ಎನ್.ರಮೇಶ, ಜಗದೀಶ ಗಸ್ತಿ, ಡಾ.ಕನಕಪ್ಪ ಪೂಜಾರ, ಡಾ.ಕವಿತಾ ಕುಸಗಲ್ಲ, ಡಾ.ಜ್ಯೋತಿ ಬಿರಾದರ, ಸುರೇಶ ಗಂಗೋತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts