More

    ವಾಲ್ಮೀಕಿ ಜಾತ್ರೆ ಯಶಸ್ವಿಗೊಳಿಸಿ

    ಕನಕಗಿರಿ: ವಾಲ್ಮೀಕಿ ಗುರುಪೀಠ ರಾಜೇನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆ ವೈಚಾರಿಕಾವಾಗಿದ್ದು, ಯಶಸ್ವಿಗೊಳಿಸಲು ಪ್ರತಿಯೊಬ್ಬರ ಶ್ರಮ ಅಗತ್ಯ ಎಂದು ವಾಲ್ಮೆಕಿ ಜಾತ್ರಾ ಸಮಿತಿ ತಾಲೂಕು ಘಟಕದ ಅಧ್ಯಕ್ಷ ರಾಮನಗೌಡ ಬುನ್ನಟ್ಟಿ ಹೇಳಿದರು.

    ತಾಲೂಕಿನ ಚಿಕ್ಕಮಾದಿನಾಳದಲ್ಲಿ ಹಮ್ಮಿಕೊಂಡಿದ್ದ ವಾಲ್ಮೆಕಿ ಜಾತ್ರೆಯ ಜಾಗೃತಿ ಸಭೆಯಲ್ಲಿ ಬುಧವಾರ ಮಾತನಾಡಿದರು. ಫೆ.8 ಹಾಗೂ 9ರಂದು ನಡೆಯುವ ಜಾತ್ರೆ 6ನೇ ವರ್ಷದಾಗಿದ್ದು, ಸಾವಿರಾರು ಜನರ ಸಮ್ಮುಖದಲ್ಲಿ ರಥೋತ್ಸವ ಜತೆಗೆ ಸಮುದಾಯದ ಸಂಘಟನೆ, ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ವಿಪಕ್ಷ ನಾಯಕ ಆರ್. ಅಶೋಕ, ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸೇರಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

    ತಾಲೂಕಿನ 11 ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಜಾತ್ರಾ ಸಮಿತಿ ಹಾಗೂ ಅಖಿಲ ಕರ್ನಾಟಕ ವಾಲ್ಮೆಕಿ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಸಂಚರಿಸಿ ಜಾತ್ರೆಗೆ ಆಮಂತ್ರಣ ನೀಡುವ ಮೂಲಕ ಆಹ್ವಾನಿಸಲಾಗುತ್ತಿದೆ. ಅದರಂತೆ ನಾಯಕ ಸಮಾಜದವರು ಶ್ರೀಗಳ ಹಾಗೂ ನಮ್ಮ ಕರೆಗೆ ಒಗೊಟ್ಟು ಜಾತ್ರೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

    ಅಖಿಲ ಕರ್ನಾಟಕ ವಾಲ್ಮೆಕಿ ನಾಯಕ ಮಹಾಸಭಾ ತಾಲೂಕು ಘಟಕದ ಗೌರವಾಧ್ಯಕ್ಷ ಮುದಿಯಪ್ಪ ಮಲ್ಲಿಗೆವಾಡ, ಅಧ್ಯಕ್ಷ ನಾಗರಾಜ ಇದ್ಲಾಪುರ, ಉಪಾಧ್ಯಕ್ಷರಾದ ನಿಂಗಪ್ಪ ನಾಯಕ ನವಲಿ, ಹುಲಿಗೆಮ್ಮ ನಾಯಕ, ವೆಂಕಟೇಶ ತೀರ್ಥಭಾವಿ, ಸಮಾಜದ ಪ್ರಮುಖರಾದ ಹನುಮೇಶ ನಾಯಕ, ಶರಣಪ್ಪ ಸೋಮಸಾಗರ, ಶೇಖರಗೌಡ ಸೋಮಸಾಗರ, ಪಂಪಾಪತಿ ತರ್ಲಕಟ್ಟಿ, ಬಸವರಾಜ ಗಣವಾರಿ, ರಂಗಸ್ವಾಮಿ, ಮಾದಿನಾಳಪ್ಪ, ಮಾರುತಿ ಹಿರೇಮಾದಿನಾಳ, ಕನಕಪ್ಪ ಹುಡೇಜಾಲಿ, ರಮೇಶ ರಾಮದುರ್ಗಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts