More

    ನಗರ ಪೊಲೀಸ್ ಆಯುಕ್ತ ತನಿಖೆಗೆ ಹಾಜರ್

    ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸ್ಟೇಟ್‌ಬ್ಯಾಂಕ್ ಹಾಗೂ ಬಂದರು ಬಳಿ ಕಳೆದ ಡಿ.19ರಂದು ನಡೆದ ಘರ್ಷಣೆ ಹಾಗೂ ಗೋಲಿಬಾರ್‌ಗೆ ಸಂಬಂಧಿಸಿ ಮ್ಯಾಜಿಸ್ಟ್ರಿಯಲ್ ತನಿಖೆ ಮುಂದುವರಿದಿದ್ದು, ಗುರುವಾರ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಹಾಜರಾಗಿ 21 ಪುಟಗಳ ಲಿಖಿತ ಹೇಳಿಕೆ ಮತ್ತು 936 ಪುಟಗಳ ಸಾಕ್ಷಾೃಧಾರಗಳನ್ನು ತನಿಖಾಧಿಕಾರಿಗೆ ಸಲ್ಲಿಸಿದರು.
    ಘಟನೆಗೆ ಸಂಬಂಧಿಸಿ ನಗರದ ಮಿನಿ ವಿಧಾನಸೌಧದಲ್ಲಿರುವ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತಾಲಯದ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೀಯಲ್ ವಿಚಾರಣೆ ಬಳಿಕ ತನಿಖಾಧಿಕಾರಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಸುದ್ದಿಗಾರರೊಂದಿಗೆ ಮಾತನಾಡಿದರು.

    49 ಮಂದಿ ಸಾಕ್ಷೃ: ಪೊಲೀಸ್ ಆಯುಕ್ತರು ಸೇರಿದಂತೆ ಒಟ್ಟು 49 ಮಂದಿ ಸಾಕ್ಷೃ ಹೇಳಿ, ತಮ್ಮಲ್ಲಿದ್ದ ದಾಖಲೆಗಳನ್ನು ಸಲ್ಲಿಸಿದರು. ಮೂವರು ಗೃಹರಕ್ಷಕರು, ಸಿವಿಲ್, ಸಶಸ್ತ್ರ ಪೊಲೀಸರು, ಪಿಎಸ್‌ಐ, ಇನ್‌ಸ್ಪೆಕ್ಟರ್‌ಗಳು ಆಗಮಿಸಿ ಸಾಕ್ಷೃ ಹೇಳಿದರು. ಇಬ್ಬರು ಸಾರ್ವಜನಿಕರು ಆಗಮಿಸಿದ್ದು, ಅವರಲ್ಲಿದ್ದ ದಾಖಲೆಯ ಸಿಡಿ ಸೂಚಿಸಿದ್ದ ಮಾದರಿಯಲ್ಲಿ ಇಲ್ಲದೆ ಇದ್ದುದರಿಂದ ಅವರನ್ನು ಮಾ.19ರಂದು ನಡೆಯುವ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿದೆ.

    320 ಮಂದಿಯ ವಿಚಾರಣೆ ಪೂರ್ಣ
    ಇದುವರೆಗೆ ಸಾರ್ವಜನಿಕರು ಮತ್ತು ಪೊಲೀಸರು ಸೇರಿದಂತೆ ಒಟ್ಟು 320 ಮಂದಿ ದಾಖಲೆ ಹಾಗೂ ಸಾಕ್ಷೃಗಳನ್ನು ಸಲ್ಲಿಸಿದ್ದಾರೆ. ಡಿಸಿಪಿ ಅರುಣಾಂಗ್ಶು ಗಿರಿ ಮತ್ತು ಪ್ರಕರಣದ ನೋಡೆಲ್ ಅಧಿಕಾರಿ ಕೆ.ಯು.ಬೆಳ್ಳಿಯಪ್ಪ ಅವರು ದಾಖಲೆಗಳು ಸಿಗಲು ವಿಳಂಬವಾಗುವ ಕಾರಣ ಹೆಚ್ಚಿನ ಸಮಯಾವಕಾಶ ಕೇಳಿದ್ದಾರೆ. ಎಫ್‌ಎಸ್‌ಎಲ್ ವರದಿ, ಇಬ್ಬರು ಸಾವಿಗೆ ಕಾರಣವಾದ ಅಂಶದ ವರದಿ ಮುಖ್ಯವಾಗಿದೆ ಎಂದು ತನಿಖಾಧಿಕಾರಿ ತಿಳಿಸಿದರು.

    ಡಿಸಿ, ಎಸಿ, ವೈದ್ಯರ ವಿಚಾರಣೆ
    ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಎಸಿ ಮದನ್ ಮೋಹನ್ ಹಾಗೂ ಘಟನೆಯಲ್ಲಿ ಮೃತಪಟ್ಟ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ವಿಚಾರಣೆ ನಡೆಸಲಾಗುವುದು. ಈಗಾಗಲೇ ಸಲ್ಲಿಕೆಯಾಗಿರುವ ವಿಡಿಯೋ ದೃಶ್ಯಾವಳಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸಬೇಕಾಗಿದೆ. ಮಾ.23ಕ್ಕೆ ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲು ತಿಳಿಸಿದೆ. ಆದರೆ ಕೆಲವೊಂದು ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ತನಿಖೆಗೆ ಹೆಚ್ಚಿನ ಕಾಲಾವಧಿ ಕೇಳುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಮಾ.19ರ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಜಗದೀಶ್ ತಿಳಿಸಿದರು.

    ಪಾಟೀ ಸವಾಲಿಗೆ ಅವಕಾಶ
    ಎಲ್ಲರ ವಿಚಾರಣೆ ಮುಗಿದ ಬಳಿಕ ಪಾಟೀ ಸವಾಲಿಗೆ ಅವಕಾಶ ನೀಡಲಾಗುವುದು. ಸಾರ್ವಜನಿಕರು, ಪೊಲೀಸರು ಇದರಲ್ಲಿ ಭಾಗವಹಿಸಬಹುದು ಎಂದು ತನಿಖಾಧಿಕಾರಿ ಜಗದೀಶ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts