More

    ಸಿಸಿಐನಿಂದ ಹತ್ತಿ ಖರೀದಿ ಆರಂಭ

    ಜೇವರ್ಗಿ: ಭಾರತೀಯ ಹತ್ತಿ ನಿಗಮದಿಂದ ಹತ್ತಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಕೂಡಲೇ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಭಾರತೀಯ ಹತ್ತಿ ನಿಗಮ (ಸಿಸಿಐ)ದ ಜೇವರ್ಗಿ ಶಾಖಾಧಿಕಾರಿ ಚಂದ್ರಕಾAತ ಪಕಾಡೆ ತಿಳಿಸಿದರು.

    ಅವರಾದನಲ್ಲಿ ಹತ್ತಿ ಖರೀದಿ ಕೇಂದ್ರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಭಾರತೀಯ ಹತ್ತಿ ನಿಮಗದಿಂದ 2023-24ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿಗೆ ರಾಜ್ಯದಲ್ಲಿ 24 ಕಡೆ ಕೇಂದ್ರ ಪ್ರಾರಂಭಿಸಲಾಗಿದೆ. ತಾಲೂಕಿನ ಮಂಜಿತ್ ಕಾಟನ್ ಪ್ರೆÊವೇಟ್ ಲಿ. ಚಿಗರಹಳ್ಳಿ, ಶ್ರೀ ಇಂಡಸ್ಟಿçÃಜ್ ಚಿಗರಹಳ್ಳಿ, ಶಿವ ಪಾರ್ವತಿ ಇಂಡಸ್ಟಿçÃಜ್ ಚಿಗರಹಳ್ಳಿ, ಸಿದ್ಧಾರ್ಥ ಪೈಬರ್ ಅವರಾದ ಕ್ರಾಸ್, ಸೋಮಜಾಳಿ ಕಾಟನ್ ಇಂಡಸ್ಟಿçÃಜ್ ಜೇವರ್ಗಿ ಸೇರಿ 5 ಕಡೆಯಲ್ಲಿ ಹತ್ತಿ ಖರೀದಿಸಲಾಗುವುದು. ಪ್ರತಿ ಕ್ವಿಂಟಾಲ್‌ಗೆ ಕೇಂದ್ರ ಸರ್ಕಾರ 7020 ರೂ. ನಿಗದಿ ಪಡಿಸಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

    ಅಧಿಕಾರಿಗಳಾದ ಬಸವರಾಜ ದುದಮಿ, ಚಂದ್ರಹಾಸ ಶೆಟ್ಟಿ, ಆರ್.ಬಿನ್ನುಮೋನ್, ಎಪಿಎಂಸಿ ಕಾರ್ಯದರ್ಶಿ ಸುಮಂಗಲಾದೇವಿ ಹೂಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts