More

    ಅಮ್ಮನಾದ ಬಳಿಕ ಮೊದಲ ಪದಕ ಜಯಿಸಿದ ದಂಗಲ್​ ತಾರೆ ಗೀತಾ ಪೋಗಟ್

    ಗೊಂಡಾ (ಉತ್ತರ ಪ್ರದೇಶ): ‘ದಂಗಲ್’ ಸಿನಿಮಾ ಖ್ಯಾತಿಯ ಕುಸ್ತಿ ತಾರೆ ಗೀತಾ ಪೋಗಟ್ ತಾಯಿಯಾದ ಬಳಿಕ ಮೊದಲ ಪದಕ ಜಯಿಸುವ ಮೂಲಕ ಬೀಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆ ಹೊಂದಿರುವ ಗೀತಾ ಪೋಗಟ್ ಅವರ ಕುಟುಂಬದ ಯಶೋಗಾಥೆಯನ್ನು ಆಧರಿಸಿಯೇ ಆಮೀರ್ ಖಾನ್ ಅಭಿನಯದ ‘ದಂಗಲ್’ ಸಿನಿಮಾ ರೂಪುಗೊಂಡಿತ್ತು.

    2010ರ ದೆಹಲಿ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಗೀತಾ ಪೋಗಟ್, ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ರಜತ ಪದಕ ಜಯಿಸುವ ಮೂಲಕ ಯಶಸ್ವಿ ಪುನರಾಗಮನ ಕಂಡಿದ್ದಾರೆ. 59 ಕೆಜಿ ವಿಭಾಗದ ಫೈನಲ್‌ನಲ್ಲಿ ಅವರು ಸರಿತಾ ಮೋರ್ ವಿರುದ್ಧ ಸೋಲು ಕಂಡರು. ಇತ್ತೀಚೆಗಷ್ಟೇ ವಿಶ್ವ ಕಂಚಿನ ಪದಕ ಜಯಿಸಿದ್ದ 26 ವರ್ಷದ ಸರಿತಾ ಎದುರು 32 ವರ್ಷದ ಗೀತಾ ಹೆಚ್ಚಿನ ಪೈಪೋಟಿ ಒಡ್ಡಲು ಶಕ್ತರಾಗಲಿಲ್ಲ. ಗೀತಾ ಅವರ ಕಿರಿಯ ಸಹೋದರಿ ಸಂಗೀತಾ ಪೋಗಟ್ 62 ಕೆಜಿ ವಿಭಾಗದಲ್ಲಿ ಸ್ವರ್ಣ ಜಯಿಸಿದರು.

    2016ರ ನವೆಂಬರ್‌ನಲ್ಲಿ ಪೈಲ್ವಾನ್ ಪವನ್ ಕುಮಾರ್ ಅವರನ್ನು ವಿವಾಹವಾಗಿದ್ದ ಗೀತಾ ಪೋಗಟ್, 2019ರ ಡಿಸೆಂಬರ್‌ನಲ್ಲಿ ಗಂಡು ಮಗುವಿನ ತಾಯಿಯಾಗಿದ್ದರು. ತಾಯ್ತನದಿಂದಾಗಿ ಗೀತಾ ಸುಮಾರು 3 ವರ್ಷಗಳ ಕಾಲ ಕುಸ್ತಿ ಅಖಾಡದಿಂದ ಹೊರಗುಳಿದಿದ್ದರು. ತಾಯ್ತನದ ವೇಳೆ ಸಾಕಷ್ಟು ದೇಹತೂಕ ಹೆಚ್ಚಿಸಿಕೊಂಡಿದ್ದ ಗೀತಾ, ಅದನ್ನು ಕುಗ್ಗಿಸಲು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದರು.

    ಪತ್ನಿಯನ್ನು ಮೆಚ್ಚಿಸಲು ಕ್ಯಾಚ್ ಕೈಚೆಲ್ಲಿದರಂತೆ ಪಾಕ್​ ಕ್ರಿಕೆಟಿಗ ಹಸನ್ ಅಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts