More

    ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ನಾಳೆಯಿಂದ

    ಸುಭಾಷ ಕಾಂಬಳೆ ಸಂಬರಗಿ: ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಕುಂಡಲ ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೆ. 11 ರಂದು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.

    ಕರ್ನಾಟಕದ ಗಡಿಯಲ್ಲಿ ಪಲುಸ ತಾಲೂಕಿನ ಕುಂಡಲ ಪಟ್ಟಣ ವೀರರ ಭೂಮಿ. ದೇಶಕ್ಕಾಗಿ ಗ್ರಾಮದ ಹಲವರು ಪ್ರಾಣ ನೀಡಿದ್ದಾರೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಸಾರ್ವಜನಿಕ ಗಣೇಶ ಮಂಡಳ ಶತಮಾನೋತ್ಸವ ಅಂಗವಾಗಿ ರಾಷ್ಟ್ರಮಟ್ಟದ ನೂರಾರು ಪೈಲ್ವಾನರು ಕುಸ್ತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಕುಸ್ತಿಯಲ್ಲಿ ವಿಜೇತ ಪೈಲ್ವಾನ್‌ರಿಗೆ ವಿವಿಧ ವಿಭಾಗಗಳಲ್ಲಿ 100 ರೂ.ದಿಂದ 10 ಲಕ್ಷ ರೂ. ವರೆಗೆ ಬಹುಮಾನ ನೀಡಲಾಗುವುದು. ಕುಸ್ತಿ ಪಂದ್ಯಾವಳಿಗೆ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಪಂಜಾಬ್, ಹರಿಯಾಣ, ದಿಲ್ಲಿ, ಒಡಿಶಾ ಸೇರಿ ಹಲವು ರಾಜ್ಯದ ರಾಷ್ಟ್ರಮಟ್ಟದ ಪೈಲ್ವಾನ್‌ಗಳಾದ ಹಿಂದ ಕೇಸರಿ ಮಚ್ಚವಾಡಾ, ಅಜಯ ಗುಜ್ಜರ, ಕಿರಣ ಭಗತ್, ಮಾವುಲಿ ಜಮದಾಳೆ, ಪೃಥ್ವಿರಾಜ್ ಪಾಟೀಲ, ಮೋನು ಕುರಾನಾ, ಬಾಲಾ ರಫೀಕ್ ಶೇಖ್, ಮೋನು ದಹಿಯಾ, ದೀಪಕ ಕಗರಾನ- ಭಾರತ ಮದನಿ, ಕಾರ್ತಿಕ ಕಾಟೆ, ದಾದಾ ಶೇಳಕೆ, ಮಾವುಲಿ ಕೊಕಾಟೆ -ಲವಪ್ರೀತ್ ಪಾಲ್ಗೊಳ್ಳಲಿದ್ದಾರೆ.
    ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲು ಬರುವ ಪೈಲ್ವಾನ್‌ರಿಗೆ ಉತ್ಸವ ಮಂಡಳದವರು ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮಕ್ಕೆ ಆಗಮಿಸುವ ಕುಸ್ತಿ ಪಟುಗಳಿಗೆ ಬಸ್ ಹಾಗೂ ರೈಲ್ವೆ ಸೌಲಭ್ಯದ ವ್ಯವಸ್ಥೆ ಇದೆ. ಕರೊನಾ ಹಿನ್ನೆಲೆಯಲ್ಲಿ 2 ವರ್ಷ ಗಣೇಶೋತ್ಸವ ರದ್ದುಪಡಿಸಲಾಗಿತ್ತು. ಈ ವರ್ಷ ಅತೀ ಉತ್ಸಾಹದಿಂದ ಗಣೇಶೋತ್ಸವ ಹಾಗೂ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದು ಸಾರ್ವಜನಿಕ ಉತ್ಸವ ಮಂಡಳ ಅಧ್ಯಕ್ಷ ಬಾಳಾಸಾಬ ಲಾಡ್ ತಿಳಿಸಿದ್ದಾರೆ. ಮುಖಂಡರಾದ ವಸಂತರಾವ ಜಾಧವ, ಶ್ರೀಕಾಂತ ಲಾಡ್, ರಾಜೇಂದ್ರ ಲಾಡ್, ಹೈಬತ್ತಿರಾವ ರಾಡ್, ವಿಷ್ಣುಪಂತ ಲಾಡ್, ವಿಲಾಸ ಎಡಕೆ, ಶ್ರೀಕಾಂತ ಮಾನೆ ಸೇರಿ ಅನೇಕ ರಾಜಕೀಯ ನಾಯಕರು ಪಂದ್ಯಾವಗಳಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts