More

    ಮನಿಮಾತು | ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭ ಹೇಗೆ?

    ಮನಿಮಾತು | ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭ ಹೇಗೆ?ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಪ್ರತಿ ವರ್ಷ 3 ಕೋಟಿ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳು ರಸ್ತೆಗಿಳಿಯುತ್ತವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ಳಿಂದ ನಮಗೆ ಬಹಳ ಸುಲಭವಾಗಿ ತಿಳಿಯೋದೇನಂದ್ರೆ, ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ! ಹೀಗಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೇಡಿಕೆ ದಿನೇದಿನೆ ಹೆಚ್ಚುತ್ತಲೇ ಇದೆ.

    ವಿಶ್ವದಲ್ಲೇ ಅತಿಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಮೂರನೇ ರಾಷ್ಟ್ರ ಭಾರತ. ಇಡೀ ದೇಶಕ್ಕೆ ಬೇಕಾಗುವ ಶೇ.85 ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುಲಾಗುತ್ತಿದೆ. ಚೀನಾ ಮತ್ತು ಅಮೆರಿಕದಲ್ಲಿ ಲಕ್ಷಕ್ಕೂ ಹೆಚ್ಚು ಪೆಟ್ರೋಲ್ ಬಂಕ್​ಗಳಿವೆ, ಭಾರತದಲ್ಲಿ 65 ಸಾವಿರಕ್ಕೂ ಅಧಿಕ ಪೆಟ್ರೋಲ್ ಬಂಕ್​ಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರದ ಇತ್ತೀಚಿನ ಹೇಳಿಕೆ ಪ್ರಕಾರ 75 ಸಾವಿರ ಹೊಸ ಪೆಟ್ರೋಲ್ ಬಂಕ್​ಗಳನ್ನು ಆರಂಭ ಮಾಡಲು ಯೋಜನೆ ರೂಪಿಸಲಾಗಿದೆ. ಅಂದಾಜಿನ ಪ್ರಕಾರ ಪ್ರತಿ ವರ್ಷ 2,500ಕ್ಕೂ ಹೆಚ್ಚು ಹೊಸ ಪೆಟ್ರೋಲ್ ಬಂಕ್​ಗಳು ಜನ್ಮತಾಳುತ್ತಿವೆ. 2011 ರಿಂದ 2018ರ ವರೆಗೆ ಪೆಟ್ರೋಲ್ ಬಂಕ್ ಬಿಸಿನೆಸ್ ವಾರ್ಷಿಕ ಸರಾಸರಿ ಶೇ.6 ಬೆಳವಣಿಗೆ ಹೊಂದಿದೆ. ಇವೆಲ್ಲದರಿಂದ ನಮಗೆ ತಿಳಿಯೋದೇನಂದ್ರೆ, ಬೇಡಿಕೆ ಕುಸಿತಗೊಳ್ಳದ ಬಿಸಿನೆಸ್ ಅಂದ್ರೆ ಅದು ಪೆಟ್ರೋಲ್ ಬಂಕ್ ಅನ್ನೋದು. ಈ ಕಾರಣದಿಂದಾಗಿ ಹೊಸದಾಗಿ ಪೆಟ್ರೋಲ್ ಬಂಕ್ ಆರಂಭ ಮಾಡ್ಬೇಕು ಅನ್ನೋರಿಗೆ ಇದು ಒಳ್ಳೆಯ ಅವಕಾಶ. ನಾನು ಕೂಡ ಪೆಟ್ರೋಲ್ ಬಂಕ್ ಆರಂಭ ಮಾಡಬಹುದಾ? ಇದಕ್ಕೆ ಎಷ್ಟು ಬಂಡವಾಳ ಬೇಕಾಗಬಹುದು? ಸ್ಥಳದ ಆಯ್ಕೆ ಹೇಗಿರಬೇಕು ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಅಂಕಣದಲ್ಲಿದೆ.

    ಹೆಚ್ಚಲಿದೆ ವಾಣಿಜ್ಯ ವಾಹನಗಳು, ತೈಲ ಸಂಸ್ಕರಣಾ ಘಟಕಗಳ ಸಂಖ್ಯೆ: ವರದಿವೊಂದರ ಪ್ರಕಾರ 2022ರ ವೇಳೆಗೆ ಭಾರತ ಜಗತ್ತಿನ ಮೂರನೇ ಅತಿ ಹೆಚ್ಚು ಪ್ರಯಾಣಿಕರ ವಾಹನ ಮಾರುಕಟ್ಟೆ ಅಂದ್ರೆ ಪ್ಯಾಸೆಂಜರ್ ವೆಹಿಕಲ್ ಮಾರ್ಕೆಟ್ ಆಗಲಿದೆ. ಅಷ್ಟೇ ಅಲ್ಲ, ಏಷ್ಯಾದಲ್ಲೇ ಅತಿ ಹೆಚ್ಚು ಆಯಿಲ್ ರಿಫೈನ್ ಮಾಡುವ 2ನೇ ರಾಷ್ಟ್ರ ನಮ್ಮ ಭಾರತ. ವಿವಿಧ ದೇಶಗಳಿಂದ ಆಮದಾಗುವ ಕಚ್ಚಾ ತೈಲವನ್ನು ಸಂಸ್ಕರಣೆ ಮಾಡಿದ ನಂತರ ಅದನ್ನು ಜನಸಾಮಾನ್ಯರಿಗೆ ಮಾರಾಟ ಮಾಡುವಲ್ಲಿ ರಿಟೇಲ್ ಬಂಕ್​ಗಳ ಪಾತ್ರ ಗಣನೀಯವಾದದ್ದು.

    ಡೀಲರ್​ಶಿಪ್ ಪಡೆಯೋದು ಹೇಗೆ?: ಸಾಮಾನ್ಯವಾಗಿ, ತೈಲ ಮಾರ್ಕೆಟಿಂಗ್ ಕಂಪನಿಗಳು (ಒಎಂಸಿಗಳು) ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಪೆಟ್ರೋಲ್ ಪಂಪ್​ಗಳನ್ನು ಸ್ಥಾಪಿಸಲು ಪತ್ರಿಕೆ ಅಥವಾ ಅದರ ವೆಬ್​ಸೈಟ್​ನಲ್ಲಿ ಜಾಹೀರಾತು ಪ್ರಕಟಿಸುತ್ತವೆ. ಆಸಕ್ತರು ಆಪ್ಲಿಕೇಷನ್ ಫಾರಂ ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಪೆಟ್ರೋಲ್ ಬಂಕ್ ಆರಂಭಿಸಲು ಆಧಾರ್ ನೋಂದಣಿ ಅವಶ್ಯಕ. ಅಗ್ನಿಶಾಮಕ ದಳ ಹಾಗೂ ಮತ್ತಿತರ ಸರ್ಕಾರಿ ಸಂಸ್ಥೆಗಳಿಂದ ಅನುಮತಿ ಪತ್ರ ಮತ್ತು ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕಾಗುತ್ತದೆ. ಜತೆಗೆ ಸ್ಥಳೀಯ ಸಂಸ್ಥೆ (ಪಾಲಿಕೆ/ಪುರಸಭೆ) ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಪೆಟ್ರೋಲ್ ಬಂಕ್​ಗೆ ನೀವು ಆಯ್ಕೆ ಮಾಡುವ ಜಾಗ ವಿಶಾಲವಾಗಿ ರಸ್ತೆ ಬದಿಯಲ್ಲೇ ಇದ್ದು ಜಾಸ್ತಿ ವಾಹನಗಳು ಓಡಾಡುವ ಸ್ಥಳವಾಗಿದ್ದರೆ ಹೆಚ್ಚಿನ ಲಾಭ ಪಡೆಯಬಹುದು.

    ಫೈನಾನ್ಶಿಯಲ್ ಫ್ರೀಡಂ ಆಪ್​ನಲ್ಲಿ ಪೆಟ್ರೋಲ್ ಬಂಕ್ ಆರಂಭಿಸುವ ಬಗ್ಗೆ ಕೋರ್ಸ್: ಪೆಟ್ರೋಲ್ ಬಂಕ್ ಆರಂಭಿಸಲು ಹೂಡಿಕೆ ಎಷ್ಟು ಬೇಕು? ಸ್ವಂತ ಜಾಗ ಇರಬೇಕಾ? ಸ್ಥಳದ ಆಯ್ಕೆ ಹೇಗಿರಬೇಕು? ವಿದ್ಯಾರ್ಹತೆ ಏನಿರಬೇಕು? ಜಂಟಿ ಮಾಲೀಕತ್ವದಲ್ಲಿ ಪೆಟ್ರೋಲ್ ಬಂಕ್ ತೆರೆಯಲು ಸಾಧ್ಯಾನಾ? ಪೆಟ್ರೋಲ್ ಬಂಕ್ ನೋಂದಣಿ ಹೇಗೆ? ಪೆಟ್ರೋಲ್ ಗುಣಮಟ್ಟ ಅಳೆಯೋದು ಹೇಗೆ? ಯಾವೆಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು? ಟ್ಯಾಕ್ಸ್ ಏನಾದ್ರು ಪಾವತಿ ಮಾಡ್ಬೇಕಾ? ಲೆಕ್ಕಪತ್ರ ನಿರ್ವಹಣೆ ಮಾಡೋದು ಹೇಗೆ? ಯಾವುದಾದರೂ ಸಾಫ್ಟ್ವೇರ್ ಅವಶ್ಯಕತೆ ಇದ್ಯಾ? ಕೆಲಸಗಾರರು ಎಷ್ಟು ಜನ ಬೇಕಾಗಬಹುದು? ಅವರ ನಿರ್ವಹಣೆ ಹೇಗೆ? ಜಾಗರೂಕತೆ ವಹಿಸೋದು ಹೇಗೆ? ಈ ರೀತಿಯ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಇಂಡಿಯನ್ ಮನಿ ಡಾಟ್ ಕಾಮ್ ಫೈನಾನ್ಶಿಯಲ್ ಫ್ರೀಡಂ ಆಪ್​ನಲ್ಲಿರುವ ಪೆಟ್ರೋಲ್ ಬಂಕ್ ಆರಂಭಿಸೋದು ಹೇಗೆ? ಎಂಬ ಕೋರ್ಸ್​ನಲ್ಲಿ ಲಭ್ಯ. ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್​ನ ಡೀಲರ್​ಶಿಪ್ ಪಡೆದು ಹಲವಾರು ವರ್ಷದಿಂದ ವಜ್ರಕಾಯ ಪೆಟ್ರೋಲ್ ಬಂಕ್ ಮುನ್ನಡೆಸುತ್ತಿರುವ ಮ್ಯಾನೇಜರ್ ತೇಜಸ್ ಕುಮಾರ್ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ಹಾಗಾದ್ರೆ, ಇನ್ನೇಕೆ ತಡ ಆದಷ್ಟು ಬೇಗ ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ ಮತ್ತು ಪೆಟ್ರೋಲ್ ಬಂಕ್ ಆರಂಭಿಸೋದು ಹೇಗೆ? ಕೋರ್ಸ್ ಅನ್ನು ನೋಡಲು ಶುರು ಮಾಡಿ. ನೀವು ಪೆಟ್ರೋಲ್ ಬಂಕ್ ಆರಂಭಿಸಿ ಶ್ರೀಮಂತಿಕೆ ಪ್ರಯಾಣ ಶುರು ಮಾಡಿ.

    ಪೆಟ್ರೋಲ್ ಬಂಕ್​ನಲ್ಲಿ ಸಿಗುವ ಕಮಿಷನ್ ಎಷ್ಟು?: ಸದ್ಯ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ ಕಡಿಮೆ ಅಂದ್ರು 3 ರೂಪಾಯಿ ಕಮಿಷನ್ ಪಡೆಯಬಹುದಾಗಿದೆ. ಪ್ರತಿದಿನ ಒಂದು ಪೆಟ್ರೋಲ್ ಬಂಕ್ ಕನಿಷ್ಠ 40 ಸಾವಿರ ಲೀಟರ್ ಪೆಟ್ರೋಲ್- ಡಿಸೇಲ್ ಪೂರೈಕೆ ಮಾಡುತ್ತದೆ. ಇನ್ನು ಹೈವೇಗಳಲ್ಲಿ ಇದು ಇನ್ನು ಜಾಸ್ತಿ, ಅಂದ್ರೆ ದಿನಕ್ಕೆ ಕಡಿಮೆ ಅಂದ್ರು 1 ರಿಂದ 2 ಲಕ್ಷ ರೂ. ಸಂಪಾದನೆ ಮಾಡಬಹುದು.

    ವಿಜಯವಾಣಿ ಓದುಗರಿಗೆ 2,000 ರೂ. ಸ್ಕಾಲರ್​ಶಿಪ್

    ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ. VIJAYAVANI ಎಂದು ರೆಫರಲ್ ಕೋಡ್ ಬಳಸಿ, 2,000 ರೂ. ಸ್ಕಾಲರ್ ಶಿಪ್ ಪಡೆಯಿರಿ.

    ಕೋರ್ಸ್​ನಲ್ಲಿ ಏನೆಲ್ಲ ಮಾಹಿತಿ ?

    1. ಕೋರ್ಸ್ ಪರಿಚಯ

    2. ಮಾರ್ಗದರ್ಶಕರ ಪರಿಚಯ

    3. ಪೆಟ್ರೋಲ್ ಬಂಕ್ ಪ್ರಾರಂಭಕ್ಕೆ ಅರ್ಹತೆ

    4. ಪೆಟ್ರೋಲ್ ಬಂಕ್​ಗೆ ಸ್ಥಳದ ಆಯ್ಕೆ

    5. ಪೆಟ್ರೋಲ್ ಬಂಕ್ – ಬಂಡವಾಳ ಮತ್ತು ಶುಲ್ಕಗಳು

    6. ಡೀಲರ್ ಶಿಪ್​ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

    7. ಅಗತ್ಯ ಪ್ರಮಾಣಪತ್ರಗಳು ಮತ್ತು ಅನುಮತಿ

    8. ನೋಂದಣಿ, ಮಾಲೀಕತ್ವ ಮತ್ತು ತೆರಿಗೆ

    9. ಅಗತ್ಯ ಸಿಬ್ಬಂದಿ ಮತ್ತು ಸುರಕ್ಷತೆ

    10. ಲೆಕ್ಕ ನಿರ್ವಹಣೆ ಮತ್ತು ಲಾಭ

    11. ಪೆಟ್ರೋಲ್ ಬಂಕ್​ನಲ್ಲಿ ಇತರ ಸೇವೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts