More

    1 ರೂಪಾಯಿ ಬಂಡವಾಳಕ್ಕೆ 4 ರೂ. ಲಾಭದ ಅಣಬೆ ಕೃಷಿ!

    1 ರೂಪಾಯಿ ಬಂಡವಾಳಕ್ಕೆ 4 ರೂ. ಲಾಭದ ಅಣಬೆ ಕೃಷಿ!ಕೃಷಿ ಭೂಮಿ ಇಲ್ಲ, ಹೆಚ್ಚು ನೀರಿನ ವ್ಯವಸ್ಥೆ ಇಲ್ಲ, ದೊಡ್ಡ ಬಂಡವಾಳವಿಲ್ಲ. ಆದರೆ, ಕಷ್ಟಪಟ್ಟು ದುಡಿಯಲು ಸಿದ್ಧರಿದ್ದೇವೆ ಎನ್ನುವವರಿಗೆ ಅಣಬೆ ಕೃಷಿ ಹೇಳಿ ಮಾಡಿಸಿದಂತಿದೆ. 10-20 ಸಾವಿರ ರೂ. ಬಂಡವಾಳದೊಂದಿಗೆ 20*30 ಜಾಗ ಇದ್ದರೂ ಸಾಕು ಪ್ರತಿದಿನ ಸುಮಾರು 12 ಕೆಜಿ ಅಣಬೆ ಬಿಡಿಸಿಕೊಂಡು ದಿನಕ್ಕೆ 2,400 ರೂ. ಆದಾಯ ಗಳಿಸಬಹುದು. ಸಣ್ಣ ಪ್ರಮಾಣದಲ್ಲಿ ಅಣಬೆ ಕೃಷಿ ಮಾಡಲು ಕಾರ್ವಿುಕರ ಅಗತ್ಯವಿರುವುದಿಲ್ಲ. ಮನೆಯವರೇ ಸೇರಿಕೊಂಡು ಅಣಬೆ ಕೃಷಿಯಲ್ಲಿ ತೊಡಗಬಹುದು. ಒಂದು ರೂಪಾಯಿ ಬಂಡವಾಳಕ್ಕೆ ನಾಲ್ಕು ರೂಪಾಯಿ ಲಾಭ ಕೊಡುವ ಕೃಷಿ ಅಂದ್ರೆ ಅದು ಅಣಬೆ ಕೃಷಿ. ಇದು ಯಾರೋ ಹೇಳುತ್ತಿರುವ ಮಾತಲ್ಲ. ಕೃಷಿ ತಜ್ಞರು, ರೈತರೇ ಅಣಬೆ ಕೃಷಿಯಲ್ಲಿ ಇಷ್ಟೊಂದು ಲಾಭ ಗಳಿಸಲು ಸಾಧ್ಯ ಎನ್ನುವುದನ್ನು ನಿರೂಪಿಸಿದ್ದಾರೆ. ಇನ್ನು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಅಣಬೆ ಕೃಷಿ ಮಾಡಿದರೆ ಹೆಚ್ಚು ಲಾಭ ಗಳಿಸಲು ಕೂಡ ಸಾಧ್ಯವಿದೆ. ಯೋಜಿತವಾಗಿ ಅಣಬೆ ಕೃಷಿಗೆ ಇಳಿದರೆ ತಿಂಗಳಿಗೆ 1 ಲಕ್ಷ ರೂ. ಆದಾಯ ಗಳಿಸುವುದು ಸುಲಭ ಸಾಧ್ಯ.

    ವರ್ಷವಿಡೀ ಬೆಳೆಯಬಹುದು: ವರ್ಷವಿಡೀ ಅಣಬೆ ಕೃಷಿ ಮಾಡಬಹುದು. ಅತ್ಯಧಿಕ ಪೊ›ಟೀನ್ ಇರುವ ಆಹಾರ ವರ್ಧಕ ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು. ಅಣಬೆ ಕೃಷಿಯನ್ನು ಒಳಾಂಗಣದಲ್ಲಿ ಅಂದರೆ ಒಂದು ಶೆಡ್​ನಲ್ಲಿ , ರೂಮ್ಲ್ಲಿ ಮಾಡಬೇಕಾಗುತ್ತದೆ. ಭಾರತದಲ್ಲಿ ಆಯಿಸ್ಟರ್ ಅಣಬೆ , ಬಿಳಿ ಅಣಬೆ, ಕಪ್ಪೆಚಿಪ್ಪಿನ ಅಣಬೆ, ಭತ್ತದ ಹುಲ್ಲಿನ ಅಣಬೆ ಗುಂಪಿಗೆ ಸೇರಿದ ಎಲ್ಲ ಅಣಬೆ ತಳಿಗಳನ್ನು ಬೆಳೆಯಬಹುದು. ಕಪ್ಪೆಚಿಪ್ಪಿನ ಅಣಬೆಯನ್ನು ಬೆಳೆಸುವುದು ಅತಿ ಸುಲಭ. ಇದಕ್ಕೆ 22 ಡಿಗ್ರಿ ಸೆಲ್ಶಿಯಸ್​ನಿಂದ 30 ಡಿಗ್ರಿ ಸೆಲ್ಶಿಯಸ್​ವರೆಗಿನ ಎಲ್ಲ ಹವಾಮಾನವನ್ನು ಹೊಂದಿಕೊಂಡು ಬೆಳೆಯುವ ಸಾಮರ್ಥ್ಯವಿದೆ. ಅಣಬೆ ಕೃಷಿ ಮಾಡಲು ವಿವಿಧ ಹಂತಗಳಿವೆ. ಸುಮಾರು 45 ದಿನಗಳ ಬೇಸಾಯ ಇದಾಗಿದ್ದು ನಾಟಿ ಮಾಡಿದ 20 ದಿನಗಳಿಗೆ ಅಣಬೆ ಬಿಡಿಸಿಕೊಳ್ಳಬಹುದು.

    1 ರೂಪಾಯಿ ಬಂಡವಾಳಕ್ಕೆ 4 ರೂ. ಲಾಭದ ಅಣಬೆ ಕೃಷಿ!ಒಣಗಿಸಿರುವ ಅಣಬೆ ಕೆ.ಜಿ.ಗೆ 3 ಸಾವಿರ ರೂ.!: ಅಣಬೆಯನ್ನು ನೀವು ಒಂದೊಮ್ಮೆ ಸರಿಯಾದ ಸಮಯಕ್ಕೆ ಮಾರಾಟ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಒಣಗಿಸಿಡಬಹುದು. ಒಣಗಿಸಿದ ಅಣಬೆ ಕೆಜಿಗೆ 3 ಸಾವಿರ ರೂ. ವರೆಗೂ ಮಾರಾಟವಾಗುತ್ತದೆ. ಅಣಬೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿಕೊಂಡು ಕುಡಿಯಬಹುದು. ಅನ್ನ, ರಸಂ, ತರಕಾರಿ ಹೀಗೆ ಯಾವುದೇ ಬಗೆಯ ಅಡುಗೆಯಲ್ಲಾದರೂ ಪುಡಿ ಬೆರಸಬಹುದು. ಶೇಂಗಾ, ಎಳ್ಳು ಮುಂತಾದ ಬಗೆಬಗೆಯ ಚಟ್ನಿ ಪುಡಿಗಳಲ್ಲೂ ಅಣಬೆ ಬೆರೆಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.

    ಅತಿವೃಷ್ಟಿಯ ತಲೆನೋವಿಲ್ಲ: ಅತಿವೃಷ್ಟಿ, ನೆರೆಯಿಂದ ತತ್ತರಿಸಿರುವ ರೈತರಿಗೆ ಅಣಬೆ ಒಂದು ಒಳ್ಳೆಯ ಪರ್ಯಾಯ ಬೇಸಾಯ. ಪ್ರಾಕೃತಿಕ ವಿಕೋಪಗಳಿಂದ ಇದಕ್ಕೆ ತೊಂದರೆಯಾಗುವುದಿಲ್ಲ. ಅಣಬೆ ಬೆಳೆಯುವ ರೂಮ್ಲ್ಲಿ ಕೆಲ ಉಪಕರಣಗಳ ಸಹಾಯದಿಂದ ಹವಾಮಾನ ಕಾಪಾಡಿಕೊಂಡರೆ ಆಯಿತು, ಅಣಬೆ ಕೃಷಿಯಲ್ಲಿ ನಿರಂತರ ಆದಾಯ ಗಳಿಸಲು ಸಾಧ್ಯವಿದೆ.

    ಅಣಬೆಯಲ್ಲಿದೆ ಆರೋಗ್ಯ ಭಾಗ್ಯ!: ಅಣಬೆಯ ಪದಾರ್ಥಗಳು ಪೊ›ಟೀನ್, ಜೀವಸತ್ವಗಳು, ಖನಿಜಾಂಶಗಳಿಂದ ಕೂಡಿವೆ. ಸಕ್ಕರೆ, ಕೊಬ್ಬಿನಾಂಶ ಕಡಿಮೆ ಪ್ರಮಾಣದಲ್ಲಿದ್ದು ಡಯಾಬಿಟೀಸ್ ಮತ್ತು ಹೃದ್ರೋಗಿಗಳಿಗೆ ಇದು ಉತ್ತಮ ಆಹಾರ. ಅಣಬೆ ಸಸ್ಯವರ್ಗಕ್ಕೆ ಸೇರಿದ ಶಿಲೀಂದ್ರ. ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಅಣಬೆಯನ್ನು ತರಕಾರಿ ಎಂದು ಗುರುತಿಸಲಾಗುತ್ತದೆ. ಇದೊಂದು ಉತ್ತಮ ಆಹಾರ. ಹಲವಾರು ವಿಧದ ಅಣಬೆಗಳಿದ್ದು ಅವುಗಳಲ್ಲಿ ಬಹುಪಾಲು ಅಣಬೆಗಳು ತಿನ್ನಲು ಯೋಗ್ಯವಾಗಿವೆ.

    ಸರ್ಕಾರದಿಂದ ಸಿಗುವ ಸವಲತ್ತು: ಅಣಬೆ ಬೆಳೆಯುವ ರೈತರಿಗೆ, ಸ್ವಸಹಾಯ ಗುಂಪುಗಳಿಗೆ ಶೆಡ್ ನಿರ್ವಣಕ್ಕಾಗಿ ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ. ಶೆಡ್​ಗಾಗಿ 95 ಸಾವಿರ ರೂ. ನೀಡಲಾಗುತ್ತದೆ. ವ್ಯವಸಾಯ ಮೂಲದಿಂದ ಬರುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಮನೆ ಅಂಗಳದಲ್ಲಿಯೇ ಆಣಬೆ ಬೆಳೆಯಬಹುದು. ಹೆಚ್ಚಿನ ಭೂಮಿಯ ಅಗತ್ಯವಿಲ್ಲ. ಕಡಿಮೆ ಅವಧಿಯಲ್ಲಿ, ಅತ್ಯಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು. ವಿದ್ಯಾವಂತ ನಿರುದ್ಯೋಗಿ ಯುವಕರಿಗೆ, ಮಹಿಳೆಯರಿಗೆ ಅಣಬೆ ಕೃಷಿ ವರದಾನವಾಗಿದೆ. ಹಾಗಾಗಿ ಈ ಸೌಲಭ್ಯಗಳನ್ನು ನೀಡಲಾಗುತ್ತಿದೆ.

    ಫೈನಾನ್ಶಿಯಲ್ ಫ್ರೀಡಂ ಆಪ್​ನಲ್ಲಿ ಅಣಬೆ ಕೃಷಿ ಕೋರ್ಸ್: ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಶಿಯಲ್ ಫ್ರೀಡಂ ಆಪ್​ನಲ್ಲಿ ಅಣಬೆ ಕೃಷಿ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಅಣಬೆ ಕೃಷಿ ಬಗ್ಗೆ ಸಮಗ್ರ ಮಾಹಿತಿ ಕೋರ್ಸ್​ನಲ್ಲಿದೆ. ಅಣಬೆ ಕೃಷಿ ಹೇಗೆ ಆರಂಭಿಸಬೇಕು? ಎನ್ನುವುದರಿಂದ ಹಿಡಿದು ಮಾರುಕಟ್ಟೆ ಎಲ್ಲಿದೆ? ಅಣಬೆ ರಫ್ತು ಮಾಡಲು ಇರುವ ಅವಕಾಶ ಎಷ್ಟು? ಎಲ್ಲೆಲ್ಲಿ ಅಣಬೆಗೆ ಬೇಡಿಕೆ ಇದೆ? ಬೇಡಿಕೆ ಇಲ್ಲದ ಕಡೆಯೂ ಅಣಬೆಗೆ ಹೇಗೆ ಮಾರ್ಕೆಟ್ ಕಂಡುಕೊಳ್ಳಬಹುದು? ಹೀಗೆ ಪ್ರತಿಯೊಂದು ಮಾಹಿತಿ ಕೂಡ ವಿಡಿಯೋ ವಿವರಣೆ ಸಮೇತ ಇದೆ. ಅಣಬೆ ಕೃಷಿಯಲ್ಲಿ ಸಾಧನೆ ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸಿರುವ ಸಾಧಕ ರೈತರು ಮತ್ತು ಕೃಷಿ ವಿಜ್ಞಾನಿಗಳು ವಾಣಿಜ್ಯ ಅಣಬೆ ಕೃಷಿ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ ಅಣಬೆ ಕೃಷಿ ಆರಂಭಿಸಿ.

    ಮಾರ್ಗದರ್ಶಕರು: ಜಿ. ಡಿ. ರಮೇಶ್, ಅಣಬೆ ಕೃಷಿಕ; ಡಾ. ಸೋಮಶೇಖರ್, ಅಣಬೆ ಬೇಸಾಯದ ವಿಷಯ ತಜ್ಞರು

    ವಿಜಯವಾಣಿ ಓದುಗರಿಗೆ 2,000 ರೂ. ಸ್ಕಾಲರ್​ಶಿಪ್

    ಫೈನಾನ್ಶಿಯಲ್ ಫ್ರೀಡಂ ಆ್ಯಪ್​ ಡೌನ್​ಲೋಡ್ ಮಾಡಿ, VIJAYAVANI ಎಂದು ರೆಫರಲ್ ಕೋಡ್ ಬಳಸಿ, 2,000 ರೂ. ಸ್ಕಾಲರ್​ಶಿಪ್ ಪಡೆಯಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts