More

    ಕಾಲನಿ ಸರಹದ್ದು ಸರ್ವೇ ಕಾರ್ಯ ಆರಂಭ

    ಬೈಲಹೊಂಗಲ: ಮನೆಗಳಿಗೆ ಹಕ್ಕು ಪತ್ರವಿತರಿಸಬೇಕೆಂದು ಪಟ್ಟಣದ ಹರಳಯ್ಯ ಕಾಲನಿ ನಿವಾಸಿಗಳು ಎಸಿ ಕಾರ್ಯಾಲಯದ ಎದುರು ನಡೆಸಿದ್ದ ಅಹೋರಾತ್ರಿ ಧರಣಿಗೆ ಶುಕ್ರವಾರ ಸ್ಪಂದನೆ ಸಿಕ್ಕಿದ್ದು ಕೊಳಚೆ ನಿರ್ಮೂಲನಾ ಮಂಡಳಿ ಸಹಾಯಕ ಅಭಿಯಂತ ಅಕ್ಷಯ ಅವರು ಕಾಲನಿಗೆ ಭೇಟಿ ನೀಡಿ, ಕಾಲನಿ ಸರಹದ್ದು ಸರ್ವೇ ಕಾರ್ಯ ಪ್ರಾರಂಭಿಸಿದರು. ಆದರೆ, ಪ್ರತಿಭಟನಾಕಾರರು ನಮಗೆ ಹಕ್ಕುಪತ್ರ ವಿತರಿಸುವವರೆಗೆ ಶನಿವಾರ 13ನೇ ದಿನವೂ ಧರಣಿ ಮುಂದುವರಿಸುತ್ತೇವೆ ಎಂದು ತಿಳಿಸಿದರು.

    ಎಸಿ ಪ್ರಭಾವತಿ ಫಕೀರಪುರ ಅವರು ಧರಣಿ ನಿರತರನ್ನು ಭೇಟಿ ಮಾಡಿ, ನಿಮ್ಮ ಮನೆಗಳ ಸರ್ವೇ ಕಾರ್ಯ ಪ್ರಾರಂಭವಾಗಿದ್ದು, ಧರಣಿ ಹಿಂಪಡೆದು ಸಹಕರಿಸಿ ಎಂದರು. ಕೊಳಚೆ ನಿರ್ಮೂಲನಾ ನಿಗಮದ ಎಇಇ ಶಂಭುಲಿಂಗಪ್ಪ ಬಿ.ಎಸ್.ಮಾತನಾಡಿ, ಕಾಲನಿ ಸರಹದ್ದು ಗುರುತಿಸಲಾಗುತ್ತಿದ್ದು, ನಂತರ ಮನೆಗಳ ಸರ್ವೇ ಮಾಡಿ 15 ರಿಂದ 20 ದಿನಗಳಲ್ಲಿ ನಿಯಮಾನುಸಾರ 600 ಚದರ ಅಡಿ ಹಕ್ಕು ಪತ್ರ ವಿತರಿಸಲು ಕ್ರಮ ಜರುಗಿಸಲಾಗುವುದು ಎಂದರು.

    ಪರಶುರಾಮ ರಾಯಬಾಗ, ರಾಜು ಅಗಸಿ, ಲಕ್ಷ್ಮಣ ಕಳಮಕರ, ಯಶವಂತ ರಾಯಬಾಗ, ನಾಗರಾಜ ಹಕಾತಿ, ನಾರಾಯಣ ಕಳಮಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts