More

    ಜೆ.ಟಿ. ಮಹಾವಿದ್ಯಾಲಯದಲ್ಲಿ​ ವಿಶೇಷ ಉಪನ್ಯಾಸ

    ವಿಜಯವಾಣಿ ಸುದ್ದಿಜಾಲ ಗದಗ

    ಶ್ರಮ ಜೀವಿಯೂ ಎಂದೆಂದಿಗೂ ಆರೋಗ್ಯದಿಂದ ಇರುತ್ತಾನೆ. ಶ್ರಮ ವಹಿಸುವುದನ್ನು ವಿದ್ಯಾಥಿರ್ಗಳು ರುಢಿಸಿಕೊಳ್ಳಬೇಕು ಎಂದು ಮನೋವಿಜ್ಞಾನಿ, ಪದ್ಮಶ್ರೀ ಪುರಸತ ಡಾ. ಸಿ. ಆರ್​. ಚಂದ್ರಶೇಖರ್​ ಹೇಳಿದರು.
    ನಗರದ ಕೆ.ಎಲ್​.ಇ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲವನಿಗೆ ಜಗಳವಿಲ್ಲ. ಕೌಶಲ್ಯವಿದ್ದವನಿಗೆ ನಿರುದ್ಯೋಗವಿಲ್ಲ ಎಂಬ ಗಾದೆಯಂತೆ ಆರೋಗ್ಯಕರ ಆಹಾರ ಸೇವನೆಯಿಂದ ರೋಗವೆಂಬ ಕ್ಷುದ್ರಶಕ್ತಿ ಮನುಷ್ಯನತ್ತ ಸುಳಿಯದಂತೆ ನೋಡಿಕೊಳ್ಳಬಹುದು. ಪ್ರಕೃತಿ ಮನುಷ್ಯನಿಗೆ 100 ರಿಂದ 120 ವರ್ಷಗಳ ಆಯುಷ್ಯವನ್ನು ಕೊಟ್ಟಿದೆ. ಆದರೆ ಇಂದಿನ ದಿನಗಳಲ್ಲಿ ಅವೈಜ್ಞಾನಿಕ ಆಹಾರ ಪದ್ಧತಿ, ಅಸಂಬದ್ಧ ಜೀವನ ಶೈಲಿಯಿಂದಾಗಿ ಶೇ.90ರಷ್ಟು ಜನರು ಅತಿ ಚಿಕ್ಕವಯಸ್ಸಿನಲ್ಲೇ ಹೃದಾಯಘಾತ, ರಕ್ತದೊತ್ತಡ, ಮಧುಮೇಹದ ಕಾರಣಗಳಿಂದಾಗಿ ಮರಣ ಹೊಂದುತ್ತಿದ್ದಾರೆ. ಪೌಷ್ಟಿಕಾಂಶವುಳ್ಳ ಆಹಾರ ಸೇವನೆಯಿಂದಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು ಹಾಗೂ ಉತ್ತಮ ಶಿಸ್ತಿನ ಜೀವನ ಶೈಲಿಯನ್ನು ರೂಡಿಸಿಕೊಂಡರೆ ದೀರ್ಘಾಯುಷ್ಯಗಳಾಗಿ ಬದುಕಬಹುದು ಎಂದರು.
    ಚಂದನವಾಹಿಯ ಥಟ್​ ಅಂತಾ ಹೇಳಿ ಕಾರ್ಯಕ್ರಮದ ಖ್ಯಾತಿಯ ಡಾ. ಎನ್​. ಸೋಮೇಶ್ವರ ಮಾತನಾಡಿ, ಬದುಕಿನಲ್ಲಿ ಮನುಷ್ಯನಿಗೆ ಸಂಸತಿ ಮತ್ತು ಸಂಸ್ಕಾರ ಬಹಳ ಮುಖ್ಯ. ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯಲ್ಲಿ ಅಸಾಧಾರಣ ವ್ಯಕ್ತಿ ಹಾಗೂ ವ್ಯಕ್ತಿತ್ವ ಅಡಗಿರುತ್ತದೆ. ಆ ಅಸಾಧಾರಣ ವ್ಯಕ್ತಿಯನ್ನು ನಾವು ಬಡಿದಬ್ಬಿಸಿ ಏಕಾಗ್ರತೆ, ತನ್ಮಯತೆಯಿಂದ ಸಾಧನೆಯತ್ತ ಸಾಗಬಹುದು ಎಂದು ಹೇಳಿದರು.
    ಎಸ್​.ಪಿ. ಸಂಶಿಮಠ, ಡಾ. ರಾಜೇಂದ್ರ ಬಸರಿಗಿಡದ, ಪಿ. ಜಿ.ಪಾಟೀಲ, ಸೋಮಶೇಖರ ಬಿಜ್ಜಳ ಹಲವರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts