More

    ಬ್ಲೇಡ್​ನಿಂದ APPU ಅಂತ ಕೈ ಮೇಲೆ ಕೊಯ್ದುಕೊಂಡು, ಐ ಲವ್​ ಯೂ ಅಪ್ಪು ಎಂದು ರಕ್ತದಲ್ಲಿ ಬರೆದ ವಿದ್ಯಾರ್ಥಿನಿ!

    ಚಾಮರಾಜನಗರ: ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ ಅಗಲಿಕೆ ಬೆನ್ನಿಗೇ ಅವರ ಅಭಿಮಾನಿಗಳ ಅಭಿಮಾನದ ತೀವ್ರತೆ ಒಂದೊಂದಾಗಿ ಬಯಲಾಗುತ್ತಿದೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ತಾವೂ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದೂ ನಡೆದಿದೆ.

    ವಿದ್ಯಾರ್ಥಿನಿಯೊಬ್ಬಳು ಬ್ಲೇಡ್​​ನಿಂದ APPU ಅಂತ ಕಾಣಿಸುವ ಹಾಗೆ ಕೈಯನ್ನು ಕೊಯ್ದುಕೊಂಡಿದ್ದಲ್ಲದೆ, ತನ್ನದೇ ರಕ್ತದಿಂದ ಕರವಸ್ತ್ರ ಹಾಗೂ ಬಿಳಿಹಾಳೆ ಮೇಲೆ ಐ ಲವ್​ ಯೂ ಅಪ್ಪು, ಐ ಮಿಸ್​ ಯೂ ಅಪ್ಪು ಎಂದು ಬರೆದಿದ್ದಾಳೆ. ಮೈಸೂರಿನ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿನಿ ಯಶಸ್ವಿನಿ ಎಂಬಾಕೆ ತನ್ನ ಅಭಿಮಾನ ಹೀಗೆ ವ್ಯಕ್ತಪಡಿಸಿದ್ದಾಳೆ.

    ಮೂಲತಃ ಚಾಮರಾಜನಗರ ನಿವಾಸಿ ಆಗಿರುವ ಈಕೆ ಮೈಸೂರಿನ ಹಾಸ್ಟೆಲ್​ವೊಂದರಲ್ಲಿ ನೆಲೆಸಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಹಾಸ್ಟೆಲ್​​ನಲ್ಲೇ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೀಗೆ ಮಾಡಿಕೊಂಡಿದ್ದರಿಂದ ರಕ್ತಸ್ರಾವಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ಈ ವಿದ್ಯಾರ್ಥಿನಿ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಾಲ್ಯದಿಂದಲೂ ಈಕೆ ಪುನೀತ್ ಅಭಿಮಾನಿ ಎಂಬುದು ತಿಳಿದುಬಂದಿದೆ.

    ಬ್ಲೇಡ್​ನಿಂದ APPU ಅಂತ ಕೈ ಮೇಲೆ ಕೊಯ್ದುಕೊಂಡು, ಐ ಲವ್​ ಯೂ ಅಪ್ಪು ಎಂದು ರಕ್ತದಲ್ಲಿ ಬರೆದ ವಿದ್ಯಾರ್ಥಿನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts