More

    ಮಲ್ಕಾರ ಘಟ್ಟದಲ್ಲಿ ಕುಸಿದ ರಸ್ತೆ

    ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ-ಹದಿನಾರನೇ ಮೈಲಿಕಲ್ ಮುಖ್ಯರಸ್ತೆಯ ಮಲ್ಕಾರ ಘಟ್ಟದ ರಸ್ತೆ ಒಂದು ಕಡೆ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

    ನಿತ್ಯ ನೂರಾರು ವಾಹನ ಸಂಚರಿಸುವ ರಸ್ತೆ ಇದಾಗಿದೆ. ವಾಹನ ಚಾಲಕರು ಇಲ್ಲಿ ಏನಾದರೂ ನಿರ್ಲಕ್ಷೃ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸುಮಾರು ಹತ್ತರಿಂದ ಹನ್ನೆರಡು ಅಡಿಯಷ್ಟು ಆಳದ ಕಂದಕ ಇಲ್ಲಿ ಬಿದ್ದಿದೆ.

    ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ರಸ್ತೆಯ ಮೇಲ್ಭಾಗದ ಗಟಾರದಿಂದ ನೀರು ತುಂಬಿ ಹರಿಯುತ್ತಿರುವುದರಿಂದ ಮತ್ತಷ್ಟು ರಸ್ತೆ ಕುಸಿಯವ ಸಾಧ್ಯತೆ ಇದೆ. ಇದರಿಂದ ರಸ್ತೆ ಸಂಪೂರ್ಣ ಕುಸಿದು ಸಂಚಾರ ಸ್ಥಗಿತಗೊಳ್ಳಬಹುದು. ಇದರಿಂದ ನಿತ್ಯ ಸಂಚರಿಸುವ ಸಾರಿಗೆ ಬಸ್, ಹಾಲಿನ ವಾಹನ, ಖಾಸಗಿ ವಾಹನದ ಸಂಚಾರಕ್ಕೆ ತೊಡಕುಂಟಾಗುವುದು.

    ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸಿದ್ದಾಪುರ-ಶಿರಸಿ ಪಟ್ಟಣಕ್ಕೆ ತೆರಳಲು, ಹಾರ್ಸಿಕಟ್ಟಾದಲ್ಲಿನ ಬ್ಯಾಂಕ್, ಸಹಕಾರಿ ಸಂಘ, ಅಂಚೆ ಕಚೇರಿ, ದಿನಸಿ ಅಂಗಡಿಗಳಿಗೆ ಬಂದು ಹೋಗುವ ಜನತೆಗೆ ತೊಂದರೆ ಉಂಟಾಗುತ್ತದೆ.

    ಆದ್ದರಿಂದ ರಸ್ತೆ ನಿರ್ವಹಣೆ ಮಾಡುತ್ತಿರುವ ಪಿಎಂಜಿಎಸ್‌ವೈ ಇಲಾಖೆ ಕೂಡಲೆ ರಸ್ತೆ ಕುಸಿತಗೊಂಡ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕೃಷ್ಣ ಹೆಗಡೆ ಹೊಲಗದ್ದೆ, ಕೋಡ್ಸರ, ಸಂಪಗೋಡ, ಭಂಡಾರಿಕೇರಿ ಗ್ರಾಮದ ಗ್ರಾಮಸ್ಥರು, ವಾಹನ ಸವಾರರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts