More

    ಕಾನ್ಪುರದಲ್ಲಿ ಒಂದೇ ವಾರದಲ್ಲಿ 98 ಮಂದಿ ಹೃದಯಾಘಾತದಿಂದ ಸಾವು! ಭೀಕರ ಚಳಿಯಿಂದ ಬಳಲುತ್ತಿದ್ದ 14 ರೋಗಿಗಳೂ ಸಾವು

    ಕಾನ್ಪುರ: ಇತ್ತೀಚಿಗೆ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವಿನ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಇದೆ. ಕರೊನಾ ಬಳಿಕ ಚಿಕ್ಕ ಮಕ್ಕಳು, ಯುವ ಜನತೆಯಲ್ಲೂ ಹೃದಯಾಘಾತ ಕಾಣಿಸಿಕೊಳ್ಳುತ್ತಿದ್ದು, ನಿತ್ಯ ಹತ್ತಾರು ಸಾವಿನ ಸುದ್ದಿಗಳು ಕಿವಿಗೆ ಬೀಳುತ್ತಲೇ ಇವೆ. ಇಂತಹ ಆತಂಕದ ಸ್ಥಿತಿಯಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ.

    ಉತ್ತರ ಪ್ರದೇಶದ ಕಾನ್ಪುರದಲ್ಲಿ ಒಂದೇ ವಾರದಲ್ಲಿ 98 ಮಂದಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ! ಇತ್ತೀಚಿಗೆ ಈ ಭಾಗದಲ್ಲಿ ವಿಪರೀತ ಚಳಿ ಇದೆ. ಭೀಕರ ಚಳಿಯಿಂದ ಬಳಲುತ್ತಿದ್ದ 14 ರೋಗಿಗಳೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಲಕ್ಷ್ಮೀಪತ್​ ಸಿಂಘಾನಿಯಾ ಇನ್​ಸ್ಟಿಟ್ಯೂಟ್​ ಆಫ್​ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್​ ಸರ್ಜರಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಕಳೆದ ಒಂದು ವಾರದಲ್ಲಿ 723 ಹೃದ್ರೋಗಿಗಳು ಆಸ್ಪತ್ರೆಯ ತುರ್ತು ಮತ್ತು ಹೊರರೋಗಿ ವಿಭಾಗಕ್ಕೆ ಬಂದಿದ್ದು, ಈ ಪೈಕಿ 98 ಜನರು ಮೃತಪಟ್ಟಿದ್ದಾರೆ. ಮೃತರ ಪೈಕಿ 44 ಜನರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇನ್ನುಳಿದವರು ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ತೀವ್ರ ಚಳಿಯಿಂದ ಬಳಲುತ್ತಿದ್ದ 14 ರೋಗಿಗಳು ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಪೈಕಿ 6 ಮಂದಿ ಹೃದ್ರೋಗ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಸಾವನ್ನಪ್ಪಿದ್ದಾರೆ. ಸದ್ಯ ಹೃದ್ರೋಗ ಸಂಸ್ಥೆಯಲ್ಲಿ ಒಟ್ಟು 604 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 54 ಹೊಸ ಮತ್ತು 27 ಹಳೆಯ ರೋಗಿಗಳು ಸೇರಿದ್ದಾರೆ.(ಏಜೆನ್ಸೀಸ್​)

    ರಾಜ್ಯದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರು ಇರುವ ಜಿಲ್ಲೆ ಯಾವುದು? ಸೇರಿದಂತೆ ಉಪಯುಕ್ತ ಮಾಹಿತಿ ಇಲ್ಲಿದೆ

    ಒಡತಿಗಾಗಿ 4 ದಿನ ಆಸ್ಪತ್ರೆಯ ಬಾಗಿಲು ಕಾದ ಪಪ್ಪಿ… ಒಡತಿ ಬದುಕಿ ಬರಲೇ ಇಲ್ಲ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts