More

    1 ರೂಪಾಯಿ ಸಹ ಖರ್ಚಿಲ್ಲ, ಹತ್ತೇ ನಿಮಿಷದಲ್ಲಿ ಕೋಲ್ಡ್​ವಾಟರ್ ರೆಡಿ! ಈ ತಂತ್ರ ನೀವೂ ಬಳಸಬಹುದು..​

    ನವದೆಹಲಿ: ದಾಹ ತೀರಿಸಿಕೊಳ್ಳಲು ತಣ್ಣೀರು ಯಾರಿಗೆ ತಾನೇ ಬೇಡ ಹೇಳಿ? ಕೆಲವರು ನೀರನ್ನು ತಂಪಾಗಿಸಲು ಫ್ರಿಡ್ಜ್​ಗಳನ್ನು ಬಳಸಿದರೆ, ಮತ್ತೆ ಕೆಲವರು ಮಡಕೆ ನೀರನ್ನು ಬಳಸುತ್ತಾರೆ. ಆದರೆ.. ರೆಫ್ರಿಜರೇಟರ್ ಮತ್ತು ಪಾತ್ರೆಗಳನ್ನು ಬಳಸದೆ 10 ನಿಮಿಷದಲ್ಲಿ ಕೋಲ್ಡ್​ ವಾಟರ್​ ಸಿಕ್ಕಿದರೆ..

    ಹೌದು, ನೀರನ್ನು ತಂಪಾಗಿಸುವ ತಂತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದೂ ಒಂದು ರೂಪಾಯಿ ಖರ್ಚು ಮಾಡದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

    ಇದನ್ನೂ ಓದಿ: ಕೋತಿ ಎಂದು ಬೀಳ್ಗಳೆಯದಿರಿ..ಕಪಿರಾಯ ಮಾಡಿದ ಕೆಲಸ ನೋಡಿದ್ರೆ ಸೆಲ್ಯೂಟ್​ ಹೊಡೆಯದೆ ಇರಲಾರಿರಿ!

    ದಿವ್ಯಾ ಸಿನ್ಹಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿನೂತನ ವೀಡಿಯೊಗಳನ್ನು ಪೋಸ್ಟ್ ಮಾಡುವ ಮಹಿಳೆ. ಇತ್ತೀಚೆಗಷ್ಟೇ ಆಕೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು ಅದು ವೈರಲ್ ಆಗಿದೆ.

    ಬೇಸಿಗೆಯಲ್ಲಿ ಫ್ರಿಡ್ಜ್ ಗಳು ಎಲ್ಲರ ಬಳಿ ಇರಬಹುದು. ಇನ್ನು ಕೆಲವರು ನೈಸರ್ಗಿಕವಾಗಿರಲೆಂದು ಮಡಕೆಗಳನ್ನು ಖರೀದಿಸಲು ಆಸಕ್ತಿ ತೋರಬಹುದು. ಆದರೆ ಸೆಕೆಂಡ್‌ಗಳಲ್ಲಿ ತಣ್ಣೀರು ನೀಡುವ ತಂತ್ರವನ್ನು ಈಕೆ ವಿಡಿಯೋ ಮಾಡಿ ತೋರಿಸಿದ್ದಾಳೆ.

    ಹಲವರು ನೀರನ್ನು ತಂಪಾಗಿಸಲು ಬಾಟಲಿಗಳಿಗೆ ಗೋಣಿ ಚೀಲ ಮತ್ತು ಬಟ್ಟೆಗಳನ್ನು ಸುತ್ತಿ ಮನೆಯಲ್ಲಿಡುತ್ತಾರೆ. ಆದರೆ ಮನೆಯಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಇವು ತಣ್ಣಗಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಒದ್ದೆ ಬಟ್ಟೆಯಲ್ಲಿ ಸುತ್ತಿದ ಬಾಟಲಿಗಳನ್ನು ಮರದ ಕೊಂಬೆಗಳಿಗೆ ಕಟ್ಟುವುದು ಪರಿಹಾರವಾಗಿದೆ. ಅಷ್ಟೇ ಅಲ್ಲ, ನೀರು 10 ನಿಮಿಷದಲ್ಲಿ ತಂಪಾಗುತ್ತದೆ.

    ಇದನ್ನು ದಿವ್ಯಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಟೆಕ್ನಿಕ್ ನಿಂದ ಸಮ್ಮರ್ ಕೂಲ್ ಮಾಡೋಕೆ ಸಾಧ್ಯವೇ ಇಲ್ಲ ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಇದುವರೆಗೆ 86 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

    ಬಸ್-ಲಾರಿ ನಡುವೆ ಅಪಘಾತ: ಆರು ಮಂದಿ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts