More

    ಸರಳತೆ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ

    ಕೂಡ್ಲಿಗಿ: ಅಹಿಂಸೆಯನ್ನೇ ಅಸ್ತ್ರ ಮಾಡಿಕೊಂಡು ಹೋರಾಡಿದ ಮಹಾತ್ಮ ಗಾಂಧೀಜಿ ಜೀವನ ಆದರ್ಶವಾಗಿದೆ ಎಂದು ಅಂಚೆ ಪಾಲಕ ಅಂಚೆ ಕೊಟ್ರೇಶ್ ಹೇಳಿದರು.

    ಪಟ್ಟಣದ ಅಂಚೆ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅತ್ಯಾಧುನಿಕ ಸಂಪರ್ಕ ಸಾಧನಗಳಿಲ್ಲದ ಕಾಲದಲ್ಲಿ ಗಾಂಧೀಜಿ ಕರೆಕೊಟ್ಟರೆ ಊರಿಂದ ಊರಿಗೆ ತಲುಪಿ ದೇಶಾದ್ಯಂತ ಹರಡಿ ಸ್ವಾತಂತ್ರೃ ಹೋರಾಟಗಾರರನ್ನು ಬಡಿದೆಬ್ಬಿಸುವಂತಿತ್ತು. ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿಗಳೇ ಇದಕ್ಕೆ ಸಾಕ್ಷಿ. ಈ ಮೂಲಕ ಬ್ರಿಟಿಷರನ್ನು ಭಾರತದಿಂದ ಓಡಿಸಿ ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರೃ ತಂದುಕೊಟ್ಟರು ಎಂದರು.

    ಗಾಂಧೀಜಿ ಅವರ ಸರಳತೆ, ಪ್ರಾಮಾಣಿಕತೆ ಹಾಗೂ ಆತ್ಮವಿಶ್ವಾಸ, ಅಹಿಂಸಾ ತತ್ವವನ್ನು ಯುವಜನತೆ ಕಲಿಯಬೇಕು. ಗಾಂಧಿ ಬದುಕು ಬರಹಗಳನ್ನು ಓದಬೇಕು. ಅವರ ಸಿದ್ಧಾಂತಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

    ಕೂಡ್ಲಿಗಿ ಉಪ ವಿಭಾಗದ ಅಂಚೆ ನಿರೀಕ್ಷಕ ರಾಜಪ್ಪ ಬಾರಿಕರ್ ಮಾತಾನಾಡಿ, ಗಾಂಧೀಜಿ ವಿಶ್ವಕ್ಕೆ ಮಾದರಿಯಾದವರು ಎಂದರು. ಅಂಚೆ ನೌಕರರ ಸಂಘದ ಹೊಸಪೇಟೆ ವಿಭಾಗದ ಕಾರ್ಯದರ್ಶಿ ಸುರೇಶ್ ಕುಮಾರ್ ಎಲ್.ಎಸ್., ಹಬೊಹಳ್ಳಿ ಅಂಚೆ ಸಹಾಯಕ ರಮೇಶ್ ನವಲಿ ಮಾತನಾಡಿದರು.

    ಪ್ರಮುಖರಾದ ರವಿಕುಮಾರ್, ಗಂಗಪ್ಪ, ಪರಸಪ್ಪ, ಕುರಿ ಚಿಕ್ಕಪ್ಪ, ಮಹಮ್ಮದ್ ರಫೀಕ್, ಅಂಬಿಕಾ, ಸಂಜನಾ, ಎಚ್.ಎನ್.ಸಿದ್ದೇಶ್ ಕುಮಾರ್, ಹುಲಿ ರಾಜ, ಚಂದ್ರಶೇಖರ, ಗುರುರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts