More

    ಜಿಲ್ಲಾಸ್ಪತ್ರೆಯ ಕಾಂಗ್ರೊ ಕೇರ್ ಕೇಂದ್ರದಲ್ಲಿ 6 ತಿಂಗಳ ಮಗುವಿನ ಯಶಸ್ವಿ ಚಿಕಿತ್ಸೆ.

    ಶಿವಾನಂದ ಹಿರೇಮಠ ಗದಗ,
    ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಸ್ಪಂಧಿಸುವುದಿಲ್ಲ ಎಂಬ ಆರೋಪಗಳ ನಡುವೆ ವೈದ್ಯರು ಮಗವೊಂದನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಶ್ವಾಸಕೋಶ ಬೆಳವಣಿಗೆ ಕಾಣದ ಹಿನ್ನೆಲೆ ಪೋಷಕರು ಕೂಡ ಮಗುವಿನ ಮೇಲಿನ ಮಮತೆಯನ್ನೇ ಕೈಚೆಲ್ಲಿದ್ದರು. ಆಸರೆ, ವೈದ್ಯರು ಮಾತ್ರ ತಮ್ಮ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ. ಕಾಂಗ್ರೊ ಕೇರ್​ ಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಿದ್ದಾರೆ. ಮಗು ಬದುಕಿದ್ದನ್ನು ಕಂಡು ಹೆತ್ತಮ್ಮನ ಆನಂದಬಾಷ್ಪಕ್ಕೆ ಪಾರವೇ ಇರಲಿಲ್ಲ. ಇಂತಹ ಅಪರೂಪದ ಟನೆ ನಡೆದಿದ್ದು ಗದಗ ಜಿಲ್ಲಾಸ್ಪತ್ರೆಯಲ್ಲಿ.
    ಗದಗ ತಾಲೂಕಿನ ದುಂದೂರು ಗ್ರಾಮದ ರಾಜೇಶ್ವರಿ ಚಿಕ್ಕನಗೌಡ ಎಂಬ ಮಹಿಳೆಯು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಇತ್ತೀಚೆಗೆ ಅವಧಿ ರ್ಪೂಣ ಹೆರಿಗೆಯಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಕೇವಲ 24 ವಾರಗಳು ಮಾತ್ರ ದಿನಗಳು ಕಳೆದಿದ್ದರಿಂದ ಕಂದಮ್ಮಗಳು ಬೆಳವಣಿಗೆಯಾಗಿರಲಿಲ್ಲ. ಹೀಗಾಗಿ ಹುಟ್ಟಿದ ಎರಡನೇ ದಿನಕ್ಕೆ ಹೆಣ್ಣು ಮಗುಮೊಂದು ತೀರಿಹೋಗಿತ್ತು. ಇನ್ನೊಂದು ಗಂಡುಮಗು ಕೇವಲ 700 ಗ್ರಾಂ ತೂಕ ಹೊಂದಿತ್ತು. ಶ್ವಾಸಕೋಶ ಸೂಕ್ತ ರೀತಿಯಲ್ಲಿ ಬೆಳವಣಿಗೆಯಾಗದೇ ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ನಾನಾ ಕಾರಣಗಳಿಂದ ಮಗುವಿನ ಮೇಲಿನ ಆಸೆಯನ್ನ ಪೋಷಕರು ಕೈ ಚೆಲ್ಲಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚವೂ ಸಹ ದುಬಾರಿಯಾಗಿತ್ತು. ಚಿಕಿತ್ಸೆಗೆ ಲಕ್ಷಾಂತರ ರೂ. ಮೊದಲೇ ಕಳೆದುಕೊಂಡಿದ್ದ ಪೋಷಕರು ಕೊನೆಗೆ ನಿರಾಸೆ ಭಾವನೆಯಿಂದ ಗದಗ ಜಿಲ್ಲಾಸ್ಪತ್ರೆಗೆ ಮಗುವನ್ನು ಚಿಕಿತ್ಸೆಗೆ ದಾಖಲು ಮಾಡಿದ್ದರು.

    ಚಿಕಿತ್ಸೆ ಯಶಸ್ವಿ:
    ಗರ್ಭಾವಸ್ಥೆಯಲ್ಲಿರುವ ಮಗುವಿಗೆ ತಾಯಿಯಿಂದ ರಕ್ಷಣೆ ಮತ್ತು ಪೋಷಣೆ ಸಿಗುವಂತೆಯೇ ಕಾಂಗ್ರೊ ಕೇರ್​ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅದೇ ರೀತಿ 25 ವಾರದಲ್ಲಿ ಜನಿಸಿದ ಈ ಮಗು 40 ವಾರ ರ್ಪುಣಗೊಳಿಸುವವರೆಗೂ ತಾಯಿಯ ಎದೆ ಮತ್ತು ಮಗುವಿನ ಎದೆಯನ್ನು ತಾಕಿಸಿಡಲಾಗುತ್ತದೆ. ನಂಜಾಗಂದಂತೆ ತಡೆಟ್ಟುವುದು, ವೆಂಟಿಲೇಟರ್​, ಆಕ್ಸಿಜೆನ್​, ಔಷಧಿಗಳ ಸೌಲಭ್ಯಗಳ ಮೂಲಕ ಪೋಷಿಸಿ ಅಂಗಾಗಳೆಲ್ಲವೂ ಪರಿರ್ಪೂಣವಾಗಿ ಬೆಳೆಯುವಂತೆ ಮಾಡಿದ್ದಾರೆ. ಈಗ ಮಗು ಸಂರ್ಪೂಣ ಗುಣಮುಖ ಹೊಂದಿದ್ದು, 700 ಗ್ರಾಂ ನಿಂದ 1.5 ಕೆಜಿ ತೂಕ ಕ್ಕೆ ಏರಿಕೆ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಏನಿದು ಕಾಂಗ್ರೊ ಕೇರ್​:
    ಕಾಂಗ್ರೊ ತನ್ನ ಮಗುವನ್ನು ಹೊಟ್ಟಯ ಭಾಗದ ಚೀಲದಲ್ಲಿ ಇಟ್ಟು ರಸುವಂತೆಯೇ ಮಗುವನ್ನು ರಸುವ, ಪೋಷಿಸುವ ವಿಧಾನವೇ ಕಾಂಗ್ರೊ ಕೇರ್​ ಸೆಂಟರ್​. 40 ವಾರದ ನಂತರ ಮಗು ಸಾಮಾನ್ಯವಾಗಿ ಜನ್ಮ ತಾಳುತ್ತವೆ. ಅವಧಿ ರ್ಪೂಬದಲ್ಲಿ ಜನಿಸಿದ ಮಗುವಿನ ಚಿಕಿತ್ಸೆಗೆ ಈ ವಿಧಾನ ಬಳಸಲಾಗುತ್ತದೆ. ಇದೇ ಚಿಕಿತ್ಸೆಯನ್ನು ಐಸಿಯುನಲ್ಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರೆ 10 ರಿಂದ 15 ಲಕ್ಷ ಖಾರ್ಚಾಗುತ್ತದೆ.

    ಕೋಟ್​:
    ಅವಧಿ ಪೂರ್ವ ಜನಿಸಿದ ಮಗು ರಕ್ಷಣೆ, ಚಿಕಿತ್ಸೆ ಸಾಧ್ಯ ಇರುತಿರಲಿಲ್ಲ. ನಮ್ಮಲ್ಲಿರುವ ವೈದ್ಯರು, ಶೂಷ್ರುಕರು, ನರ್ಸ್​ ಗಳಿಗೆ ವಾರಕ್ಕೊಮ್ಮೆ ಕಾಂಗ್ರೊ ಕೇರ್​ ಬಗ್ಗೆ ತರಬೇತಿ ನೀಡುತ್ತೇವೆ. ತರಬೇತಿ ಪರಿಣಾಮವೇ ಇಂತಹ ಮಕ್ಕಳನ್ನು ರಸಲು ಸಾಧ್ಯ.
    – ಡಾ. ಬಸವರಾಜ ಬೊಮ್ಮನಹಳ್ಳಿ, ನಿರ್ದೇಶಕರು. ಜಿಮ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts