More

    ಮಳೆ ಬಿಸಿಲಿನಾಟಕ್ಕೆ ನಲುಗಿದ ಬೆಳೆಗಾರರು

    ಮೂಡಿಗೆರೆ: ಈ ವರ್ಷದ ಮಳೆಗಾಲದ ಮಧ್ಯದಲ್ಲಿ ಬಿಸಿಲು ಬರುತ್ತಿರುವುದರಿಂದ ಕಾಫಿ, ಕಾಳುಮೆಣಸು, ಅಡಕೆ ಬೆಳೆ ಸಾಕಷ್ಟು ಹಾನಿಯಾಗಿರುವುದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಆ.8ರಂದು ಆರಂಭವಾದ ಗಾಳಿ-ಮಳೆಯಿಂದ ಬಹುತೇಕ ಕಾಫಿ, ಕಾಳುಮೆಣಸು, ಅಡಕೆ ತೋಟಗಳು ನೆಲಕಚ್ಚಿದ್ದವು. ಪ್ರಾರಂಭದ 15 ದಿನದ ಮಳೆ ನಂತರ ಬಿಸಿಲು, ಮತ್ತೊಂದು ವಾರದ ನಂತರ ಮಳೆ ಬಂದಿದೆ. ಈಗ ಮತ್ತೆ ಬಿಡುವು ನೀಡದೆ ಮಳೆಯಾಗುತ್ತಿದೆ. ಬಿಸಿಲು ಮಳೆಯಾಟದಿಂದ ಕಾಫಿ, ಕಾಳುಮೆಣಸು, ಅಡಕೆ ಫಸಲು ಉದುರಿ ಹಾನಿಯಾಗುತ್ತಿದೆ.

    ಕಳೆದ ವರ್ಷದ ಬೆಳೆ ಕಟಾವಿನ ನಂತರ ಬೆಳೆಗಾರರು ಕಾಫಿ ತೋಟಕ್ಕೆ ಬೇಸಿಗೆಯಲ್ಲಿ ಬ್ಲಾಸಮ್ೆಂದು ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿ ಹೂವು ಅರಳಿದ ನಂತರ 15 ದಿನದಲ್ಲಿ ಮತ್ತೊಮ್ಮೆ ಬ್ಯಾಕಿಂಗ್ (ಕಾಯಿ ಕಟ್ಟುವಿಕೆ) ಗೆಂದು ಎರಡನೇ ಬಾರಿ ನೀರಾಯಿಸಿ ಗೊಬ್ಬರ ಹಾಕಿ, ಕೀಟಬಾಧೆ ಉಂಟಾಗದಂತೆ ರಾಸಾಯನಿಕ ಸಿಂಪಡಿಸಿ ಕಾಫಿ ಕಾಯಿ ಕಟ್ಟಿದ ಬಳಿಕ ಬೆಳೆಗಾರರು ತೋಟದಲ್ಲೇ ಬೀಡುಬಿಟ್ಟು ಕಾದು ಕುಳಿತುಕೊಳ್ಳುತ್ತಾರೆ.

    ಆದರೆ ಮಳೆಗಾಲದಲ್ಲಿ ವಿಪರೀತ ಮಳೆ ಮಧ್ಯೆ ಬಿಸಿಲು ಬರುತ್ತಿರುವುದರಿಂದ ಮುಂದಿನ ವರ್ಷದ ಬೆಳೆ ಸಂಪೂರ್ಣ ನೆಲಕಚ್ಚುತ್ತದೆ. ಈ ವರ್ಷದ ಬೆಳೆ ಉದುರಿ ಹಾಳಾಗಿರುವುದರಿಂದ ಬೆಳೆಗಾರರು ತೀವ್ರ ಆತಂಕದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts