More

    ಚುನಾವಣಾ ನೀತಿ ಸಂಹಿತೆ-ಮದುವೆಗೆ ಅನುಮತಿ ಪಡೆಯಬೇಕಾ..? ಎಷ್ಟು ಹಣ ನಗದಾಗಿ ಸಾಗಿಸಬಹುದು ಎಂಬ ವಿವರ ಇಲ್ಲಿದೆ

    ಕಾರವಾರ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಜಿಲ್ಲೆಯಲ್ಲಿ 25 ಕ್ಕೂ ಹೆಚ್ಚು ಚೆಕ್ ಪೋಸ್ಟ್ಗಳು ಹಾಗೂ 51 ಸಂಚಾರಿ ಜಾಗೃತ ದಳಗಳು ಚುರುಕಾಗಿ ಕಾರ್ಯನಿರ್ವಹಣೆ ಪ್ರಾರಂಭಿಸಿದ್ದು, ದಾಖಲೆ ಇಲ್ಲದ ನಗದು, ವಸ್ತುಗಳನ್ನು ವಶಕ್ಕೆ ಪಡೆಯುತ್ತಿವೆ.
    ದಿನಾಂಕ ಘೋಷಣೆಗೂ ಮೊದಲೇ ಈ ಕಾರ್ಯಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ತರಬೇತಿಯನ್ನು ನೀಡಿದ್ದರಿಂದ ಮಾ.16 ರಿಂದಲೇ ಎಲ್ಲ ಜಾಗೃತ ದಳಗಳು ಚುರುಕಾಗಿ ಕಾರ್ಯನಿರ್ವಹಣೆ ಪ್ರಾರಂಭಿಸಿವೆ. 50 ಸಾವಿರದವರೆಗೆ ನಗದನ್ನು ಯಾವುದೇ ದಾಖಲೆ ಇಲ್ಲದೇ ಸಾಗಿಸಬಹುದು. ಅದಕ್ಕಿಂತ ಹೆಚ್ಚಿನ ನಗದು ಸಾಗಣೆ ಮಾಡುವುದಿದ್ದರೆ ಹಣದ ಮೂಲದ ಬಗ್ಗೆ ಸಾಗಣೆ ಮಾಡುವವರ ಬಳಿ ದಾಖಲೆ ಇದಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾಣಕರ್‌ ಎಚ್ಚರಿಸಿದ್ದಾರೆ.
    ದಾಖಲೆ ಇಲ್ಲದ ಹಣವನ್ನು ಸಂಚಾರಿ ಜಾಗೃತ ದಳ, ತನಿಖಾ ಠಾಣೆ ಅಥವಾ ಸ್ಥಿರ ಜಾಗೃತ ದಳಗಳ ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ. ಹಣಕ್ಕೆ ಸೂಕ್ತ ದಾಖಲೆ ಒದಗಿಸಲು ವಾರಗಳ ಕಾಲ ಸಂಬಂಧಪಟ್ಟವರಿಗೆ ಅವಕಾಶ ನೀಡಲಾಗುವುದು. ನಿಗದಿತ ಸಮಯದೊಳಗೆ ದಾಖಲೆಗಳನ್ನು ಒದಗಿಸಿದರೆ ಹಣವನ್ನು ಬಿಡುಗಡೆ ಮಾಡಲಾಗುವುದು. ಹಾಗೊಮ್ಮೆ ದಾಖಲೆ ನೀಡದೇ ಇದ್ದಲ್ಲಿ ಸಾಗಣೆ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.

    ವೈಯಕ್ತಿಕ ಕಾರ್ಯಕ್ರಮಗಳಿದ್ದರೂ ಮಾಹಿತಿ ನೀಡಿ

    ಮದುವೆ, ಮುಂಜಿ ಮುಂತಾದ ಖಾಸಗಿ ಸಮಾರಂಭ ಮಾಡಲು ಅನುಮತಿ ನೀಡುವ ಪದ್ಧತಿ ಇಲ್ಲ. ಆದರೆ, ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದ್ದಾರೆ.
    ಶಿರಸಿ, ಕಾರವಾರ, ಕುಮಟಾ, ಭಟ್ಕಳ ಕ್ಷೇತ್ರಗಳಿಗೆ ಆಯಾ ಎಸಿಗಳು, ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಅಽಕಾರಿ ಅಜ್ಜಪ್ಪ ಸೊಗಲದ, ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ ಡಿಯುಡಿಸಿ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್, ಖಾನಾಪುರಕ್ಕೆ ಬಲರಾಮ ಚೌಹಾಣ್, ಕಿತ್ತೂರು ಕ್ಷೇತ್ರಕ್ಕೆ ಶ್ರೀನಿವಾಸ ಗೌಡ ಅವರನ್ನು ಎಆರ್‌ಒಗಳನ್ನಾಗಿ ನೇಮಿಸಲಾಗಿದೆ. ಖಾಸಗಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಹಚ್ಚಿ, ಕಾರ್ಯಕ್ರಮಗಳ ವಿವರದೊಂದಿಗೆ ಸಂಬಂಧಪಟ್ಟ ಎಆರ್‌ಒಗಳಿಗೆ ಲಿಖಿತ ಅರ್ಜಿ ಸಲ್ಲಿಸಬೇಕು ಎಂದರು. ದೇವಸ್ಥಾನಗಳ ಜಾತ್ರೆ, ಉತ್ಸವ ಮುಂತಾದವುಗಳಿಗೆ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಿದ್ದಾರೆ.
    2 ಲಕ್ಷ ರೂ. ವಶ
    ಗೋವಾದಿಂದ ತರಕಾರಿ ಮಾರಿ ತನ್ನೂರು ಹಾವೇರಿಯ ಸವಣೂರಿಗೆ ವಾಪಸಾಗುತ್ತಿದ್ದ ಕಲಂದರ್ ವಿಜಾಪುರ ಎಂಬ ವ್ಯಕ್ತಿಯ ಬಳಿ ಇದ್ದ 2 ಲಕ್ಷ ರೂ. ನಗದನ್ನು ಜೊಯಿಡಾ ತಾಲೂಕಿನ ಅನಮೋಡ ತನಿಖಾ ಠಾಣೆಯಲ್ಲಿ ಅಽಕಾರಿಗಳು ಭಾನುವಾರ ವಶಕ್ಕೆ ಪಡೆದಿದ್ದಾರೆ. ಇದು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ನಂತರ ಮೊದಲು ವಶಕ್ಕೆ ಪಡೆದ ಹಣವಾಗಿದೆ. ಸಂಬAಧಪಟ್ಟವರಿಗೆ ದಾಖಲೆ ತಂದು ಒದಗಿಸಲು ಒಂದು ವಾರ ಅವಕಾಶ ನೀಡಲಾಗಿದೆ ಎಂದು ಅಽಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ನಾಮಪತ್ರ ಸಲ್ಲಿಕೆ ಯಾವಾಗಿನಿಂದ, ಎಲ್ಲಿ..? ಲೋಕಸಭಾ ಚುನಾವಣೆಯ ಸಿದ್ಧತೆಯ ವಿವರ ಇಲ್ಲಿದೆ

    ಇನ್ನೂ ಹೆಚ್ಚಿನ ವಿವರಗಳಿಗೆ ಚುನಾವಣಾ ಆಯೋಗದ ವೆಬ್‌ಸೈಟ್‌ ನೋಡಿ: https://www.eci.gov.in/

    DC-Gangubayi.

    ಯಾವುದೇ ವ್ಯಕ್ತಿಗಳಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಆದರೆ, ಲೋಕಸಭಾ ಚುನಾವಣೆ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಮಾಡುವ ಉದ್ದೇಶದಿಂದ ಅಕ್ರಮ ಹಣ, ಆಮಿಷ ಒಡ್ಡಬಹುದಾದ ವಸ್ತುಗಳ ಬಗ್ಗೆ ನಿಗಾ ಇಡಬೇಕಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ನಾವು ಕಾರ್ಯನಿರ್ವಹಿಸುತ್ತಿದ್ದು, ಜನ, ವ್ಯಾಪಾರಿಗಳು ನಿಯಮಗಳನ್ನು ಅರಿತುಕೊಂಡು ಸಹಕಾರ ನೀಡಬೇಕು. ಜನ ಹೆಚ್ಚಿನ ನಗದು, ಹೆಚ್ಚಿನ ಪ್ರಮಾಣದ ಬಂಗಾರ, ಸೀರೆ, ಪಾತ್ರೆಗಳು ಮುಂತಾದ ವಸ್ತುಗಳನ್ನು ಸಾಗಿಸುವಾಗ ಬಿಲ್, ಅಥವಾ ಹಣದ ದಾಖಲೆ ಮುಂತಾದವುಗಳನ್ನು ಇಟ್ಟುಕೊಂಡರೆ ಯಾವುದೇ ಸಮಸ್ಯೆ ಇಲ್ಲ.
    ಗಂಗೂಬಾಯಿ ಮಾನಕರ್
    ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts