More

    ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆ ಶುರು

    ಅರಸೀಕೆರೆ : ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದೆ. ಈ ಹಿನ್ನ್ನೆಲೆಯಲ್ಲಿ ಕಸಬಾ ಸೇರಿದಂತೆ ವಿವಿಧ ಹೋಬಳಿ ವ್ಯಾಪ್ತಿಯ ತೆಂಗು ಬೆಳೆಗಾರರು ಸೋಮವಾರ ಅರಸೀಕೆರೆ ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ರೈತಭವನದ ಕಚೇರಿ ಬಳಿ ಅಗತ್ಯ ದಾಖಲೆಗಳನ್ನಿಡಿದು ಸರತಿ ಸಾಲಿನಲ್ಲಿ ಸಾಲುಗಟ್ಟಿ ನಿಂತು ನೋಂದಣಿ ಮಾಡಿಕೊಳ್ಳಲು ಮುಗಿಬಿದ್ದರು.

    ನೋಂದಣಿಗೆ ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಿದ್ದ ದೃಶ್ಯ ಕಂಡುಬಂದಿತು. ಆದರೆ ಸರ್ವರ್ ಸಮಸ್ಯೆ ಎದುರಾಗಿದ್ದರಿಂದ ತಾಸುಗಳ ಕಾಲ ಕಾಯುವಂತಾಗಿತ್ತು. ಇದರಿಂದ ಬೇಸತ್ತ ಅನ್ನದಾತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಮಸ್ಯೆಯ ಗಂಭೀರತೆ ಅರಿತ ನೋಂದಣಿ ಕೇಂದ್ರದ ಅಧಿಕಾರಿಗಳು ನಿಗದಿಪಡಿಸಿದ ದಿನದಂದು ಬರುವಂತೆ ಟೋಕನ್ ನೀಡಿ ಕಳುಹಿಸಿದರು. ಜಾವಗಲ್, ಕಣಕಟ್ಟೆ ಹಾಗೂ ಜಾವಗಲ್ ಖರೀದಿ ಕೇಂದ್ರಗಳಲ್ಲಿಯೂ ನೋಂದಣಿಗೆ ಅವಕಾಶ ನೀಡಲಾಗಿದ್ದು, ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ. ತಮ್ಮಲ್ಲಿರುವ ಕೊಬ್ಬರಿ ದಾಸ್ತಾನು ಮಾರಾಟ ಮಾಡಲು ಅವಕಾಶ ದೊರೆತಿದೆ. ಆದರೆ ಸರ್ವರ್ ಸಮಸ್ಯೆ ಲೋಪ ಸರಿಪಡಿಸಲು ಅಧಿಕಾರಿಗಳು ಗಂಭೀರ ಪ್ರಯತ್ನ ಮಾಡಬೇಕು ಎಂದು ತೆಂಗು ಬೆಳೆಗಾರರು ಒತ್ತಾಯಿಸಿದರು.

    ಕೇಂದ್ರ ಸರ್ಕಾರ ಕ್ವಿಂಟಾಲ್‌ಗೆ 12 ಸಾವಿರ ಹಾಗೂ ರಾಜ್ಯ ಸರ್ಕಾರ 1500 ರೂ. ಪ್ರೋತ್ಸಹಧನ ನೀಡಿ 13,500 ರೂ.ಗಳಿಗೆ ಕೊಬ್ಬರಿ ಖರೀದಿಸಲು ನಿರ್ಧರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts