More

    ರಾತ್ರಿ ಕಿವಿಯ ನೋವಿನಿಂದ ಎದ್ದು ಕುಳಿತವನಿಗೆ ಕಾದಿತ್ತು ಶಾಕ್​..!

    ಮನಿಲಾ​: ರಾತ್ರಿ ಕಿವಿಯಲ್ಲಿ ಕೆರೆಯುವ ಹಾಗೂ ತೆವಳುವ ಶಬ್ದದ ಜತೆಗೆ ನೋವಿನಿಂದ ಎದ್ದು ಕುಳಿತ ಚೀನಾದ ಮೂಲದ ವ್ಯಕ್ತಿಗೆ ಶಾಕ್​ ಒಂದು ಎದುರಾಗಿತ್ತು. ಗೊತ್ತಾಗದಂತೆ ಕಿವಿಯೊಳಗೆ ಸೇರಿ ಸುಮಾರು 12 ಗಂಟೆಗಳಿಂದ ಕಾಟ ಕೊಟ್ಟಿದ್ದ ಸಣ್ಣ ಜೀವಿಯನ್ನು ಹೊರ ತೆಗೆಯಲಾಗಿದೆ.

    ಫಿಲಿಪೈನ್ಸ್​ನ ಬತಂಗಾಸ್​ ಪ್ರಾಂತ್ಯದ ಸಂತೋ ಥಾಮಸ್​ ನಗರದ ನಿವಾಸಿ ಲಿಯೋ ಒರೆಡೈನ್ ಎಂಬಾತ ಆಗಷ್ಟೇ ತಾನೇ ಕೆಲಸದಿಂದ ಮನೆಗೆ ಮರಳಿದ್ದ. ಊಟ ಮುಗಿಸಿ ನಿದ್ರಿಸಲು ಮಲಗುವ ಕೋಣೆಗೆ ಹೋದ ಲಿಯೋ ಇನ್ನೇನು ನಿದ್ರೆ ಬರಬೇಕು ಎನ್ನುವಷ್ಟರಲ್ಲಿ ನೋವಿನಿಂದ ಎಚ್ಚರಗೊಂಡ.

    ಲಿಯೋ ಕಿರುಚಾಡುವುದನ್ನು ಕೇಳಿ ಎಚ್ಚರಗೊಂಡ ಪತ್ನಿ, ಸಹಾಯಕ್ಕಾಗಿ ಕಸಿನ್​ಗೆ​ ಕರೆ ಮಾಡಿದಳು. ಮನೆಗೆ ಬಂದ ಕಸಿನ್​, ಟಾರ್ಚ್​ ಮತ್ತು ಚಿಮಟದ ಸಹಾಯದೊಂದಿಗೆ ಕಿವಿಯಲ್ಲಿ ಹುಡುಕಾಡಿದಾಗ ಕೊನೆಗೂ ಅದರಲ್ಲಿದ್ದ ಜಿರಳೆಯನ್ನು ಹೊರತೆಗೆಯಲಾಯಿತು.

    ಇದನ್ನೂ ಓದಿ: ಶಾಸಕ ಜಿ.ಟಿ.ದೇವೇಗೌಡ ಹುಣಸೂರಿಗೆ ಶಿಫ್ಟ್: ಅಚ್ಚರಿ ಮೂಡಿಸಿದ ಜೆಡಿಎಸ್ ವರಿಷ್ಠರ ತೀರ್ಮಾನ!

    ರಾತ್ರಿ ಕಿವಿಯ ನೋವಿನಿಂದ ಎದ್ದು ಕುಳಿತವನಿಗೆ ಕಾದಿತ್ತು ಶಾಕ್​..!

    ಆರಂಭದಲ್ಲಿ ಯಾವುದೋ ಇರುವೆ ಸೇರಿರಬಹುದು ಅಂದುಕೊಂಡಿದ್ದ ಲಿಯೋಗೆ ಜಿರಳೆ ನೋಡಿ ಶಾಕ್​ ಆಗಿತ್ತು. ಅಲ್ಲದೆ, ಹೊರ ತೆಗೆಯುವ ಪ್ರಯತ್ನದಲ್ಲಿ ಕಿವಿಗೆ ಬೇಬಿ ಎಣ್ಣೆಯನ್ನು ಬಿಟ್ಟಾಗಲು ಜಿರಳೆ ಹೊರಬರದೇ ಮತ್ತಷ್ಟು ಆಳವಾಗಿ ಹೋಗಿತ್ತು. ಸುಮಾರು 2 ಗಂಟೆಗಳ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ಜಿರಳೆಯನ್ನು ಹೊರತೆಗೆಯಲಾಯಿತು. ಆದರೆ, ಅಷ್ಟರಲ್ಲಾಗಲೇ ಜಿರಳೆಯು ಸತ್ತು ಹೋಗಿತ್ತು.

    ಕೋವಿಡ್​ ತಗುಲಬಹುದೆಂಬ ಭಯದಿಂದ ಲಿಯೋ ಆಸ್ಪತ್ರೆಗೆ ತೆರಳದೆ ಸಂಬಂಧಿಯ ನೆರವು ಪಡೆದರು. ಅಲ್ಲದೆ, ಆಸ್ಪತ್ರೆಗೆ ಹೋಗಲು ರಾತ್ರಿಯ ಸಮಯದಲ್ಲಿ ಸಂಚಾರ ವ್ಯವಸ್ಥೆಯು ಇರಲಿಲ್ಲ. ಜಿರಳೆಯನ್ನು ಹೊರತೆಗೆದ ಹಿಂದಿನ ರಾತ್ರಿಯೇ ಜಿರಳೆ ಕಿವಿಯೊಳಗೆ ಸೇರಿದೆ ಎನ್ನಲಾಗಿದೆ. ಬೆಳಗ್ಗೆ ಕೆಲಸಕ್ಕೆ ಹೋಗಿ ಬಂದ ನಂತರ ನೋವು ಆರಂಭವಾಗಿದೆ. ಬಳಿಕ ಸಂಬಂಧಿಯ ನೆರವಿನಿಂದ ಅದನ್ನು ಹೊರತೆಗೆದಿದ್ದಾರೆ.

    ಮರುದಿನ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಲಿಯೋ ವೈದ್ಯರ ಬಳಿ ಪರಿಶೀಲನೆ ಸಹ ಮಾಡಿಸಿದ್ದಾರೆ. ಅವರ ಕಿವಿಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಸಹ ತಿಳಿಸಿರುವುದು ಲಿಯೋ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ. (ಏಜೆನ್ಸೀಸ್​)

    ಇದು ‘ಶಾಕ್ ಕಿಂಗ್’ ನ್ಯೂಸ್​: ಹೆಸರೇ ಇಲೆಕ್ಟ್ರಿಕ್​ ಈಲ್, ತಾಕಿದ್ರೆ ಕರೆಂಟ್​ ಫೀಲ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts